ನಿರ್ಮಾಣ ಹಂತದ ಶಾಲೆಯ ಮೇಲೆ ಗುಂಪಿನಿಂದ ದಾಳಿ

ಶಿಲ್ಲಾಂಗ್ (ಮೇಘಾಲಯ) – ರಾಮಕೃಷ್ಣ ಮಿಷನ್ ಶಾಲೆಯ ನಿರ್ಮಾಣದ ವಿವಾದದಿಂದ ಮೇಘಾಲಯದ ಮಾವಕಿನರೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜನವರಿ ೨೦ ರಂದು, ಸುಮಾರು ೨೫೦ ಜನರ ಗುಂಪೊಂದು ನಿರ್ಮಾಣ ಹಂತದಲ್ಲಿದ್ದ ಶಾಲೆಯ ಮೇಲೆ ದಾಳಿ ಮಾಡಿ ಅದನ್ನು ಕೆಡವಲು ಪ್ರಯತ್ನಿಸಿತು. ಈ ಘಟನೆಯ ನಂತರ, ಪೊಲೀಸರು ಮತ್ತು ಸಮೂಹದ ನಡುವೆ ಘರ್ಷಣೆ ನಡೆಯಿತು. ಹಿಂಸಾತ್ಮಕವಾಗುತ್ತಿದ್ದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಘರ್ಷಣೆಯಲ್ಲಿ ಪೊಲೀಸರು ಮತ್ತು ನಿವಾಸಿಗಳು ಸೇರಿದಂತೆ ಅನೇಕ ಜನರು ಗಾಯಗೊಂಡರು.
೧. ೨೦೨೨ ರಿಂದ ಶಾಲೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಭೂಮಿಯನ್ನು ಪೊಲೀಸ್ ಗ್ರಾಮ ಪರಿಷತ್ತು ರಾಮಕೃಷ್ಣ ಮಿಷನ್‌ಗೆ ದಾನ ಮಾಡಿತ್ತು. ಪೊಲೀಸ್ ವರಿಷ್ಠಾಧಿಕಾರಿ ವಿವೇಕ ಸಿಮ ಮಾತನಾಡಿ, ಈ ಜಮೀನಿಗೆ ಸಂಬಂಧಿಸಿದಂತೆ ಈಗ ೨ ಗ್ರಾಮಗಳ ನಡುವೆ ವಿವಾದವಿದೆ. ಇನ್ನೊಂದು ಹಳ್ಳಿಯ ಜನರು ಈ ಆಸ್ತಿಯ ಮೇಲೆ ದಾವೆ ಮಾಡಿದ್ದಾರೆ ಎಂದು ಹೇಳಿದರು.
೨. ಶಾಲಾ ಭೂಮಿ ಗ್ರಾಮ ಪರಿಷತ್ತಿಗೆ ಸೇರಿದ್ದು, ಅದರ ಮೇಲೆ ಮಾವಕಿರೆ ಮತ್ತು ಮಾವಲಿನ ಎಂಬ ಎರಡು ಗ್ರಾಮಗಳು ಸಾಮುದಾಯಿಕ ಹಕ್ಕು ಇವೆ. ರಾಮಕೃಷ್ಣ ಮಿಷನ್‌ಗೆ ಭೂಮಿಯನ್ನು ನೀಡಿದಾಗ, ಎರಡೂ ಗ್ರಾಮಗಳ ಮುಖ್ಯಸ್ಥರು ಅದಕ್ಕೆ ಒಪ್ಪಿಕೊಂಡರು. ಈಗ ಮಾವಕಿರೆ ಗ್ರಾಮದ ಜನರು ಈ ಭೂಮಿಯನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ