Pushpak Express Train Incident : ರೈಲಿನಲ್ಲಿ ಬೆಂಕಿಯ ವದಂತಿ, ಗಾಬರಿಗೊಂಡ ಪ್ರಯಾಣಿಕರು ರೈಲಿನಿಂದ ಜಿಗಿದರು : 11 ಪ್ರಯಾಣಿಕರು ಸಾವು, 8 ಜನರಿಗೆ ಗಾಯ

ಪಚೋರಾ (ಜಲಗಾಂವ್) ಇಲ್ಲಿ ನಡೆದ ಘಟನೆ

ಜಳಗಾಂವ – ಇಲ್ಲಿನ ಪಚೋರ್ಯಾದಿಂದ ಸ್ವಲ್ಪ ದೂರದಲ್ಲಿರುವ ಪರಧಾಡೆ ನಿಲ್ದಾಣದ ಬಳಿ ಜನವರಿ 22 ರ ಸಂಜೆ ಪುಷ್ಪಕ ಎಕ್ಸ್‌ಪ್ರೆಸ್‌ನಲ್ಲಿ ಒಂದು ಘಟನೆ ಸಂಭವಿಸಿದೆ. ಗಾಡಿಯ ಬಾಗಿಲಿನಲ್ಲಿ ಕುಳಿತಿದ್ದ ಪ್ರಯಾಣಿಕರು, ಗಾಡಿಯ ಚಕ್ರಗಳು ಮತ್ತು ಹಳಿಗಳ ನಡುವೆ ಕಿಡಿಗಳನ್ನು ನೋಡಿದಾಗ ಬೆಂಕಿ ಇದೆ ಎಂದು ಭಾವಿಸಿ ರೈಲಿನಲ್ಲಿ ‘ಬೆಂಕಿ ತಾಗಿದೆ’ ಎಂಬ ವದಂತಿ ಕೆಲವು ಬೋಗಿಗಳಲ್ಲಿ ಹರಡಿತು. ಆದ್ದರಿಂದ, ಪ್ರಯಾಣಿಕರು ಹತ್ತಿರದ ಸರಪಳಿಯನ್ನು ಎಳೆದು ಸೇತುವೆಯ ಮೇಲೆ ನಿಲ್ಲಿಸಿದರು. ಈ ಸಮಯದಲ್ಲಿ, ಕೆಲವು ಪ್ರಯಾಣಿಕರು ಗಾಡಿಯಿಂದ ಹೊರಗೆ ಹಾರಿದರು. ಅದೇ ಸಮಯದಲ್ಲಿ, ಪಕ್ಕದ ಹಳಿಯಲ್ಲಿ ಕರ್ನಾಟಕದಿಂದ ದೆಹಲಿಗೆ ದಿಕ್ಕಿನತ್ತ ಸಾಗುತ್ತಿದ್ದ ‘ಕರ್ನಾಟಕ ಎಕ್ಸ್‌ಪ್ರೆಸ್’ ವೇಗವಾಗಿ ಬಂದಿದ್ದರಿಂದ ಪ್ರಯಾಣಕರಿಗೆ ಡಿಕ್ಕಿ ಹೊಡದ ಪರಿಣಾಮ, 11 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು 8 ಮಂದಿ ಗಾಯಗೊಂಡರು.

ಹಳಿಗಳ ಎರಡೂ ಬದಿಗಳಲ್ಲಿರುವ ಹಳ್ಳಿಗಳ ಗ್ರಾಮಸ್ಥರು ಪ್ರಯಾಣಿಕರ ಸಹಾಯಕ್ಕೆ ಧಾವಿಸಿದರು. ಈ ಘಟನೆಯ ನಂತರ, ಪುಷ್ಪಕ ಎಕ್ಸ್‌ಪ್ರೆಸ್ ಅನ್ನು ಆ ಸ್ಥಳದಲ್ಲಿ ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು.  ಆದ್ದರಿಂದ, ಭೂಸಾವಳ ಮತ್ತು ಇತರ ರೈಲುಗಳನ್ನು ಅವುಗಳ ನಿಲ್ದಾಣಗಳಲ್ಲಿ ನಿಲ್ಲಿಸಿದ್ದರಿಂದ ರೈಲು ಸಂಚಾರದ ಮೇಲೆ ಪರಿಣಾಮ ಬೀರಿತು.