Student Threatens Principal : ಮೊಬೈಲ್ ಫೋನ್ ಕಸಿದುಕೊಂಡಿದ್ದರಿಂದ ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ ಹಾಕಿದ ವಿದ್ಯಾರ್ಥಿ !

ಪಲಕ್ಕಡ್ (ಕೇರಳ) – ಇಲ್ಲಿನ ಅನಕ್ಕರ ಸರಕಾರಿ ಪ್ರೌಢಶಾಲೆಯ ೧೧ ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಕ್ಕಾಗಿ ಪ್ರಾಂಶುಪಾಲರನ್ನು ಜೀವ ಬೆದರಿಕೆ ಹಾಕಿದ್ದಾನೆ. ಘಟನೆಯ ನಂತರ ವಿದ್ಯಾರ್ಥಿಯನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.

೧. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ, ವಿದ್ಯಾರ್ಥಿಯು ಕೋಪದಿಂದ ಪ್ರಾಂಶುಪಾಲಕರಾದ ಎ.ಕೆ. ಅನಿಲ್ ಕುಮಾರ್ ಗೆ ಅವರ ಕಚೇರಿಯಲ್ಲಿ ಬೆರಳು ತೋರಿಸಿ ‘ನೀನು ಶಾಲೆ ಬಿಟ್ಟ ಮೇಲೆ ನಿನ್ನನ್ನು ಮುಗಿಸುತ್ತೇನೆ”, ಎಂದು ಬೆದರಿಸುತ್ತಿರುವುದು ಕಂಡುಬರುತ್ತದೆ.

೨. ಶಾಲೆಗೆ ಮೊಬೈಲ್ ಫೋನ್ ತರುವುದನ್ನು ನಿಷೇಧಿಸಿದ್ದರೂ ಶಾಲಾ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಯು ಶಾಲೆಗೆ ಮೊಬೈಲ್ ಫೋನ್ ತಂದಿದ್ದನು. ಅವನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಾಗ, ವಿದ್ಯಾರ್ಥಿಯು ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದನು. ಇದಕ್ಕೆ ಶಾಲೆಯ ಪೋಷಕ-ಶಿಕ್ಷಕರ ಸಂಘವು ಪೊಲೀಸರಿಗೆ ದೂರು ನೀಡಿದೆ. ಘಟನೆಯ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ನಡೆಸುತ್ತಿದೆ.

೩. ಶಾಲೆಯ ಪೋಷಕ-ಶಿಕ್ಷಕರ ಸಂಘವು ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ಫೋನ್ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿತ್ತು. ಈ ಧೋರಣೆಯಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ಮೊಬೈಲ್‌ಫೋನ್ ಗಳನ್ನು ನಂತರ ಪೋಷಕರಿಗೆ ಹಿಂತಿರುಗಿಸಲಾಗುತ್ತದೆ; ಆದರೆ ಅದನ್ನು ಪಡೆಯಲು ಅವರು ಶಾಲೆಗೆ ಬರಬೇಕು ಎಂದು ಪಾಲಕ-ಶಿಕ್ಷಕರ ಸಂಘದ ಅಧ್ಯಕ್ಷ ಮತ್ತು ಅನಕ್ಕರ ಪಂಚಾಯತ್ ಸದಸ್ಯ ವಿ.ಪಿ. ಶಿಬು ಇವರು ಹೇಳಿದರು.

ಸಂಪಾದಕೀಯ ನಿಲುವು

ಸುಸಂಸ್ಕೃತ ಪೀಳಿಗೆಯನ್ನು ನಿರ್ಮಿಸಲು ಶಾಲಾ ಪಠ್ಯಕ್ರಮದಲ್ಲಿ ಮೌಲ್ಯವನ್ನು ಹೆಚ್ಚಿಸುವ ಶಿಕ್ಷಣವನ್ನು ಸೇರಿಸುವುದು ಎಷ್ಟು ಅಗತ್ಯ ಎಂಬುದನ್ನು ಈ ಘಟನೆ ತಿಳಿಯುತ್ತದೆ. ರಾಜ್ಯಕರ್ತರು ಈ ದೃಷ್ಟಿಯಿಂದ ಯೋಚಿಸುವರೇ ?