Mumbai Jogeshwari Stone pelting : ಅನಧಿಕೃತ ಕೊಳೆಗೇರಿಗಳ ವಿರುದ್ಧ ಕ್ರಮ ಕೈಗೊಂಡ ಪೊಲೀಸರ ಮೇಲೆ ಕಲ್ಲು ತೂರಾಟ !

ಜೋಗೇಶ್ವರಿ (ಮುಂಬಯಿ) ನಲ್ಲಿ ನಡೆದ ಘಟನೆ

ಮುಂಬಯಿ – ಜೋಗೇಶ್ವರಿಯಲ್ಲಿ ಅನಧಿಕೃತ ಕೊಳಗೇರಿ ಪ್ರದೇಶದ ವಿರುದ್ಧ ಕ್ರಮ ಕೈಗೊಳ್ಳುವಾಗ, ಕೊಳೆಗೇರಿ ನಿವಾಸಿಗಳು ರೈಲ್ವೆ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಲ್ಲಿ 5 ಪೊಲೀಸರು ಗಾಯಗೊಂಡಿದ್ದಾರೆ. ನಂತರ ಪೊಲೀಸರು 20 ರಿಂದ 25 ಜನರನ್ನು ವಶಕ್ಕೆ ಪಡೆದರು.

ಜನವರಿ 22 ರಂದು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸ್ಥಳೀಯರನ್ನು ವಶಕ್ಕೆ ಪಡೆದ ನಂತರ ಸ್ವಲ್ಪ ಹೊತ್ತು ಗೊಂದಲ ಉಂಟಾಯಿತು. ‘ಅನಧಿಕೃತ ನಿರ್ಮಾಣ’ಗಳನ್ನು ತೆಗೆದುಹಾಕಲು ರೈಲ್ವೆ ಆಡಳಿತವು ಈಗಾಗಲೇ ನೋಟಿಸ್‌ಗಳನ್ನು ನೀಡಿತ್ತು.