ಮಕರ ಸಂಕ್ರಾಂತಿ ಮತ್ತು ವಸಂತ ಋತುವಿನ ಸಮಯದಲ್ಲಿ ಹಿಂದೂಗಳಿಗೆ ಗಾಳಿಪಟ ಹಾರಿಸಲು ಅವಕಾಶವಿಲ್ಲ !
ಲಾಹೋರ್ (ಪಾಕಿಸ್ತಾನ) – ಈಗ ಪಾಕಿಸ್ತಾನದಲ್ಲಿ ಗಾಳಿಪಟಗಳನ್ನು ಹಾರಿಸುವುದು ಕೂಡ ಇಸ್ಲಾಂ ವಿರೋಧಿ ಕೃತ್ಯವಾಗಿದೆ. ಉಲೇಮಾ (ಇಸ್ಲಾಮಿಕ್ ವಿದ್ವಾಂಸರು) ಇವರು ಲಾಹೋರ್ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿದ ನಂತರ ಒಂದು ಫತ್ವಾ ಹೊರಡಿಸಿದ್ದಾರೆ. ಈ ಫತ್ವಾದಲ್ಲಿ, ೩ ಕೃತಿಗಳನ್ನು ಇಸ್ಲಾಂ ವಿರುದ್ಧವೆಂದು ಘೋಷಿಸಲಾಗಿದೆ ಮತ್ತು ಅವುಗಳನ್ನು ಮಾಡುವವರನ್ನು ಅಪರಾಧಿಗಳೆಂದು ಪರಿಗಣಿಸಲಾಗಿದೆ. ಇದರಲ್ಲಿ ಒಂದು ಗಾಲಿಯ ಸೈಕಲ್ ಓಡಿಸುವುದು, ಗಾಳಿಪಟ ಹಾರಿಸುವುದು ಮತ್ತು ಗಾಳಿಯಲ್ಲಿ ಗುಂಡು ಹಾರಿಸುವುದು ಮುಂತಾದ ಚಟುವಟಿಕೆಗಳು ಸೇರಿವೆ. ಈ ಅಪರಾಧಗಳು ಹರಾಮ್ (ಇಸ್ಲಾಂ ವಿರೋಧಿ) ಎಂದು ಸಾಬೀತುಪಡಿಸಲು ಫತ್ವಾದಲ್ಲಿ ಕುರಾನ್‌ನ ಆಯತ(ಸಾಲು) ಮತ್ತು ಹದೀಸ್‌ಗಳ (ಪ್ರವಾದಿ ಮುಹಮ್ಮದ್ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಹೇಗೆ ವರ್ತಿಸಿದರು ಮತ್ತು ಮಾತನಾಡಿದರು ಎಂಬುದರ ಸಂಗ್ರಹಗಳು) ಉಲ್ಲೇಖಿಸಿದೆ.
೧. ಪೊಲೀಸ್ ಅಧಿಕಾರಿಯು, ಫತ್ವಾವನ್ನು ಉಲ್ಲೇಖಿಸಿ, ಈ ಕೃತ್ಯಗಳು ಆತ್ಮಹತ್ಯೆಗೆ ಸಮಾನ ಎಂದು ಹೇಳಿದರು; ಏಕೆಂದರೆ ಕುರಾನ್ ಸ್ವಯಂ ವಿನಾಶಕ್ಕೆ ಕಾರಣವಾಗುವ ಅಂತಹ ಕೃತಿಗಳನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಈ ಮೂರೂ ಉಪಕ್ರಮಗಳನ್ನು ಅವುಗಳ ಅತಿಯಾದ ವೆಚ್ಚ, ಘಾತಕ ಪರಿಣಾಮಗಳಿಂದ ಮತ್ತು ಇಸ್ಲಾಂ ವಿರೋಧಿದಿಂದ ನಿಷೇಧಿಸಲಾಗಿದೆ.
೨. ಕಳೆದ ೨೦ ದಿನಗಳಲ್ಲಿ ಗಾಳಿಪಟ ಹಾರಿಸುವವರ ವಿರುದ್ಧ ಪೊಲೀಸರು ೧೫೦ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಫೈಸಲ್ ಕಮ್ರಾನ್ ಹೇಳಿದ್ದಾರೆ. ಮಕರ ಸಂಕ್ರಾಂತಿ ಮತ್ತು ವಸಂತ ಋತುವಿನ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಗಾಳಿಪಟ ಹಾರಿಸುವ ಸಮಯದಲ್ಲಿ ಈ ಅಪರಾಧಗಳು ದಾಖಲಾಗಿವೆ. ಇದರೊಂದಿಗೆ, ರಸ್ತೆಯಲ್ಲಿ ಒಂದು ಚಕ್ರದ ವಾಹನ ಚಲಾಯಿಸಿದ್ದಕ್ಕಾಗಿ ೧೫೧ ಜನರನ್ನು ಬಂಧಿಸಲಾಗಿದೆ ಮತ್ತು ಗಾಳಿಯಲ್ಲಿ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ೧೧೮ ಶಂಕಿತರನ್ನು ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಅಂತಹ ವಿಷಯಗಳಿಗೆ ಭಾರತದಿಂದ ಪ್ರತ್ಯುತ್ತರ ನೀಡುವುದು ಈಗ ಅಗತ್ಯವಿದೆ ! |