ಕಿರಿಯರು-ಹಿರಿಯರು ಅನುಭವಿಸುವರು ನಮ್ರತೆ ಮತ್ತು ಪ್ರೀತಿ | ಕರಗಳು ಮುಗಿಯುವವು ಪಡೆದು ದಿವ್ಯತ್ವದ ಅನುಭೂತಿ ||

ಕಣ್ಣುಗಳು ತೃಪ್ತವಾಗುವವು, ನೀಡುವುದು ಆನಂದವನ್ನು ||
ಸಹವಾಸದ ಕ್ಷಣ ಪಡೆಯವುದು ಮನದಲ್ಲಿ ಸ್ಥಾನವನ್ನು ||

ಎಲ್ಲರೊಂದಿಗೆ ಸಹಜತೆಯಿಂದ ಸಂವಾದ !

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಮತ್ತು ಅವರ ಮಗ ಚಿ. ವೃಷಾಂಕ್ ಜೊತೆಗೆ ಪ್ರೀತಿಯ ಸಂವಾದ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್

 

ಅಯೋಧ್ಯೆಯ ಶ್ರೀರಾಮಜನ್ಮಭೂಮಿಗಾಗಿ ಹೋರಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹರಿ ಶಂಕರ ಜೈನ್ ಇವರೊಂದಿಗೆ ಪ್ರೀತಿಯ ಭೇಟಿ

ಕಾಣಿಸುತಿಹುದು ನಮ್ಮ ಸಮಷ್ಟಿ ಕಲ್ಯಾಣದ ತಳಮಳವು |
ಅದುವೇ ಜೀವದ ಆಧ್ಯಾತ್ಮಿಕ ಉದ್ಧಾರದ ಘಳಿಗೆಯು ||

ಸಾಧಕರಿಗೆ ಕೌಶಲ್ಯ ಕಲಿಸಲು ವಿನಂತಿ !

ಶಿವಮೊಗ್ಗದ ಪಂಚಶಿಲ್ಪಕಾರರಾದ ಪೂ. ಕಾಶಿನಾಥ ಕವಟೇಕರ ಇವರಿಗೆ ‘ಮೂರ್ತಿಕಾರ ಸಾಧಕರಿಗೆ ಮಾರ್ಗದರ್ಶನ ಮಾಡಬೇಕು, ಎಂದು ಹೇಳುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್

ತಳಮಳದಿಂದ ಮಾಡಿದ ಕಾರ್ಯಕ್ಕೆ ಗೌರವ

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ‘ಬಾಂಗ್ಲಾದೇಶ ಮೈನಾರಿಟಿ ವಾಚ್ನ ಅಧ್ಯಕ್ಷ ಪೂ. (ನ್ಯಾಯವಾದಿ) ರವೀಂದ್ರ ಘೋಷ ಇವರ ಸನ್ಮಾನ !

ಗಣ್ಯರ ಸಾಧನೆಯ ಪ್ರಯತ್ನಗಳಿಗೆ ಪ್ರಶಂಸೆ !

‘ಶಾಸ್ತ್ರೀಯ ಗಾಯಕರಾದ ಶ್ರೀ. ಪ್ರದೀಪ ಚಿಟಣಿಸ್ ಇವರು ‘ಸಮಷ್ಟಿ ಸಾಧನೆ ಎಂದು ಸಾತ್ತ್ವಿಕ ಕಲಾವಿದರನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದೊಂದಿಗೆ ಜೋಡಿಸಿದರು, ಎಂದು ಪ್ರಶಂಸಿಸುವ ಕ್ಷಣ

ಹಿಂದುತ್ವನಿಷ್ಠರು ವ್ಯಕ್ತಪಡಿಸಿದ ಭಾವ

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್‌ರನ್ನು ನೋಡಿ ಭಾವಪರವಶರಾದ ನಾಗಪುರದ ಎಸ್.ಆರ್. ಮಿಶ್ರಾ ಇವರು ಅವರ ಚರಣಗಳಲ್ಲಿ ಅನನ್ಯಭಾವದಿಂದ ತಲೆಬಾಗಿದ ಭಾವಕ್ಷಣ