ಅಹಂಕಾರಿ ಬುದ್ಧಿಪ್ರಾಮಾಣ್ಯವಾದಿಗಳ ಮಿತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಬುದ್ಧಿಪ್ರಾಮಾಣ್ಯವಾದಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ, ಅವರು ಗಮನದಲ್ಲಿಡಬೇಕಾದ ಸಂಗತಿಯೆಂದರೆ ಅವರು ಅತಿ ಚಿಕ್ಕದಾದ ಏಕಕೋಶದ ಜೀವಿಯನ್ನು ಮಾತ್ರವಲ್ಲದೇ, ಬಾಹ್ಯ ವಸ್ತುಗಳ ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಸೃಷ್ಟಿಸಲು ಸಾಧ್ಯವಿಲ್ಲ. ತದ್ವಿರುದ್ಧ ಈಶ್ವರನು ಲಕ್ಷಾಂತರ ಕೋಶಗಳಿಂದ ಕೂಡಿದ ಮಾನವನನ್ನು ಮತ್ತು ಅನಂತ ಕೋಟಿ ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆ.

ಹಿಂದೂ ಪದದ ಸರ್ವವ್ಯಾಪಕತೆ !

ಹಿಂದೂ ಶಬ್ದದ ಉತ್ಪತ್ತಿ ಹೀಗಿದೆ, ‘ಹೀನಾನ್ ಗುಣಾನ್ ದೂಷಯತಿ ಇತಿ ಹಿಂದೂಃ ಅಂದರೆ ಹೀನ, ಕನಿಷ್ಠ, ರಜ ಮತ್ತು ತಮ ಗುಣಗಳನ್ನು ನಾಶ ಮಾಡುವವನು. ಎಷ್ಟು ಹಿಂದುತ್ವನಿಷ್ಠ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ಇದನ್ನು ಕಲಿಸುತ್ತವೆ ?

ಹಾಸ್ಯಾಸ್ಪದ ಸಾಮ್ಯವಾದ !

‘ಅಧ್ಯಾತ್ಮದ ಪ್ರಾರಬ್ಧ ಈ ಪದವನ್ನು ಮತ್ತು ಈಶ್ವರನನ್ನು ಪೂರ್ಣ ನಿರ್ಲಕ್ಷಿಸಿದ ಕಾರಣ ಸಾಮ್ಯವಾದವು ೧೦೦ ವರ್ಷಗಳಲ್ಲೇ ಕೊನೆಗೊಳ್ಳುತ್ತಾ ಬಂದಿದೆ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ