‘ವೈಶಾಖ ಕೃಷ್ಣ ಸಪ್ತಮಿ ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರು ಈ ಪೃಥ್ವಿಯಲ್ಲಿ ಅವತರಿಸಿದ ದಿನ ! ಈ ದಿನವನ್ನು ಶ್ರೀ ಗುರುಗಳ ಜನ್ಮೋತ್ಸವದ ದಿನ ಎಂದು ಎಲ್ಲ ಸಾಧಕರು ತಮ್ಮ ಅಂತರ್ಮನದಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸುತ್ತಾರೆ. ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಜನ್ಮೋತ್ಸವವೆಂದರೆ ಸಾಧಕರಿಗೆ ‘ಅಮೃತಕ್ಕಿಂತ ಹೆಚ್ಚು ಮಧುರ, ಅನುಪಮ ಮತ್ತು ದಿವ್ಯ ಪರ್ವವಾಗಿರುತ್ತದೆ. ಶ್ರೀ ಗುರುಗಳ ಜನ್ಮೋತ್ಸವದಿಂದ ಸಾಧಕರ ಅಂತರಂಗದಲ್ಲಿ ಭಾವಭಕ್ತಿಯ ಶೀತಲಧಾರೆ ಪ್ರವಹಿಸಿ ಅವರಿಗೆ ಆತ್ಮಾನಂದದ ಮತ್ತು ಆತ್ಮಶಾಂತಿಯ ಅನುಭೂತಿಯನ್ನು ಕೊಡುತ್ತದೆ. ಇಂತಹ ಈ ದೈವೀ ಪರ್ವವಾಗಿರುವ ಶ್ರೀ ಗುರುಗಳ ಜನ್ಮೋತ್ಸವದ ನಿಮಿತ್ತ ಶ್ರೀವಿಷ್ಣುಸ್ವರೂಪ ಗುರುದೇವರ ಮಹಾತ್ಮೆಯನ್ನು ಅರಿತುಕೊಂಡು ಅದನ್ನು ಹೃದಯಮಂದಿರದಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಿಡೋಣ.
ಸಪ್ತರ್ಷಿಗಳು ಸಚ್ಚಿದಾನಂದ ಪರಬ್ರಹ್ಮ ಗುರುದೇವರನ್ನು ‘ಕಲಿಯುಗದಲ್ಲಿನ ಶ್ರೀವಿಷ್ಣುವಿನ ಅವತಾರ ಎಂದು ಗೌರವಿಸಿದ್ದಾರೆ. ಆ ಅವತಾರಿ ಗುರುಗಳ ಮಹಾಸಾಗರಸಮಾನವಾಗಿರುವ ಚರಿತ್ರೆಯನ್ನು ವರ್ಣಿಸುವ ಪ್ರಯತ್ನವು ಆ ಮಹಾಸಾಗರದಲ್ಲಿನ ಒಂದು ಹನಿಯಂತೆಯೇ ಆಗಿದೆ, ಆದರೂ ಜನ್ಮೋತ್ಸವದ ನಿಮಿತ್ತ ಲಭಿಸಿದ ಸುವರ್ಣಾವಕಾಶದ ಲಾಭವನ್ನು ಪಡೆಯುತ್ತಾ ಶ್ರೀಗುರುಚರಣಗಳಲ್ಲಿ ಈ ಲೇಖನರೂಪಿ ಕೃತಜ್ಞತಾಪುಷ್ಪಗಳನ್ನು ಸಮರ್ಪಿಸುತ್ತಿದ್ದೇನೆ.
ಶ್ರೀವಿಷ್ಣುವಿನ ದಿವ್ಯ ರೂಪವನ್ನು ವರ್ಣಿಸುವಾಗ ‘ಶ್ರೀವಿಷ್ಣುಸಹಸ್ರನಾಮದಲ್ಲಿ ಮುಂದಿನಂತೆ ಹೇಳಲಾಗಿದೆ
ಶುಕ್ಲಾಮ್ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾನ್ತಯೇ ||
ಅರ್ಥ : ಯಾರು ಶ್ವೇತವಸ್ತ್ರಗಳನ್ನು ಧರಿಸಿದ್ದಾರೆಯೋ, ಯಾರು ಸಂಪೂರ್ಣ ಜಗತ್ತನ್ನು ವ್ಯಾಪಿಸಿದ್ದಾರೆಯೋ, ಯಾರ ರೂಪವು ಚಂದ್ರನಂತೆ ಅತ್ಯಂತ ಪ್ರಕಾಶಮಾನವಾಗಿದೆಯೋ, ಯಾರಿಗೆ ನಾಲ್ಕು ಭುಜಗಳಿವೆಯೋ ಮತ್ತು ಯಾರ ಮುಖಮಂಡಲವು ಪ್ರಸನ್ನ, ತೇಜೋಮಯ ಮತ್ತು ಕರುಣೆಯಿಂದ ತುಂಬಿದೆಯೋ, ಎಲ್ಲ ವಿಘ್ನಗಳಿಂದ ಮತ್ತು ಬಾಧೆಗಳಿಂದ ರಕ್ಷಿಸಿಕೊಳ್ಳಲು ಈ ದಿವ್ಯ ಶ್ರೀವಿಷ್ಣುರೂಪದ ಧ್ಯಾನವನ್ನು ನಾವು ಮಾಡುತ್ತೇವೆ.
ಶ್ರೀವಿಷ್ಣುವಿನ ಕಲಿಯುಗಾಂತರ್ಗತ ಕಲಿಯುಗದಲ್ಲಿನ ಈ ಶ್ರೀಜಯಂತಾವತಾರದ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಮರಣೆಯನ್ನು ಮಾಡಿದಾಗ, ಮೇಲಿನ ಶ್ಲೋಕದಲ್ಲಿನ ವರ್ಣನೆ ಅವರ ಸಂದರ್ಭದಲ್ಲಿ ಶೇ. ೧೦೦ ರಷ್ಟು ನಿಜವೆನಿಸುತ್ತದೆ. ಈ ವರ್ಣನೆಯಿಂದ ಶ್ರೀವಿಷ್ಣುಸ್ವರೂಪ ಗುರುಗಳ ಅವತಾರತ್ವದ ಮತ್ತು ಅವರಲ್ಲಿನ ವಿಷ್ಣುತತ್ತ್ವವನ್ನು ಅವಲೋಕಿಸೋಣ.
೧. ‘ಶ್ರೀ ಗುರುಗಳ ತೇಜೋಮಯ ರೂಪವು ಅವರ ಅವತಾರತ್ವದ ಮತ್ತು ಅವರಲ್ಲಿನ ವಿಷ್ಣುತತ್ತ್ವದ ಅನುಭವವಾಗಿದೆ !
‘ಶ್ರೀವಿಷ್ಣುವಿನ ಮೂಲ ಆದಿನಾರಾಯಣ ರೂಪ, ಹಾಗೆಯೇ ಶ್ರೀವಿಷ್ಣುವಿನ ಶ್ರೀರಾಮ, ಶ್ರೀಕೃಷ್ಣ ಮುಂತಾದ ರೂಪಗಳ, ವರ್ಣಗಳು (ಬಣ್ಣಗಳು) ಸಾದುಗಪ್ಪು (ಶ್ಯಾಮ) ಮತ್ತು ನೀಲಿ ಇರುವುದು ಕಂಡು ಬರುತ್ತದೆ. ಕಲಿಯುಗದಲ್ಲಿನ ಶ್ರೀವಿಷ್ಣುವಿನ ಈ ಶ್ರೀಜಯಂತಾವತಾರದ ರೂಪವು ಅದಕ್ಕಿಂತಲೂ ಭಿನ್ನ, ಅಂದರೆ ಶುಕ್ಲಾಮ್ಬರಧರಂ ವಿಷ್ಣುಂ… ಈ ಶ್ಲೋಕದಲ್ಲಿನ ವರ್ಣನೆಯಂತಿದೆ. ಅವರ ವರ್ಣ ಗೌರ ಮತ್ತು ಚಂದ್ರನಂತೆ ಪ್ರಕಾಶಮಾನವಾಗಿದೆ. ‘ಶ್ರೀ ಗುರುಗಳ ಅವತಾರಿ ದೇಹಧಾರಿ ರೂಪದ ತೇಜವು ಎಷ್ಟು ಪ್ರಚಂಡವಾಗಿದೆ ಎಂದರೆ, ‘ಶ್ರೀ ಗುರುಗಳನ್ನು ನೋಡಿದಾಗ ಅವರ ಜಾಗದಲ್ಲಿ ಸಾಧಕರಿಗೆ ಕೇವಲ ಪ್ರಕಾಶವೇ ಕಾಣಿಸುತ್ತದೆ. ಇದೇ ಶ್ರೀ ಗುರುಗಳ ಅವತಾರತ್ವದ ಮತ್ತು ಅವರಲ್ಲಿನ ವಿಷ್ಣುತತ್ತ್ವದ ಅನುಭವವಾಗಿದೆ. ಇದರಿಂದ “ಜಗತನ್ನಿಯಂತ್ರಕನಾದ ಆ ಶ್ರೀವಿಷ್ಣುವೇ ಈ ಕಲಿಯುಗದಲ್ಲಿ ಶ್ರೀಜಯಂತಾವತಾರದ ರೂಪದಲ್ಲಿ ಅವತರಿಸಿದ್ದಾನೆ ಎಂಬುದು ಸಿದ್ಧವಾಗುತ್ತದೆ, ಇದು ತ್ರಿವಾರ ಸತ್ಯವಾಗಿದೆ. – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೯.೫.೨೦೨೩)
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಶುಭ್ರ ವಸ್ತ್ರಗಳಲ್ಲಿನ ಸಹಜ-ಸರಳ ರೂಪವನ್ನು ನೋಡಿದಾಗ ‘ಶುಕ್ಲಾಮ್ಬರಧರ ಶ್ರೀವಿಷ್ಣುವಿನ ಸ್ಮರಣೆಯೇ ಆಗುತ್ತದೆ !
ಶ್ರೀವಿಷ್ಣುವನ್ನು ವರ್ಣಿಸುವಾಗ ‘ಶುಕ್ಲಾಮ್ಬರಧರ, ಅಂದರೆ ‘ಶುಭ್ರ ಬಿಳಿ ವಸ್ತ್ರಗಳನ್ನು ಧರಿಸಿದ, ಎಂದು ಹೇಳಲಾಗಿದೆ. ಅದರಂತೆಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಿನನಿತ್ಯದ ಉಡುಗೆ ಬಿಳಿ ಪೈಜಾಮಾ ಮತ್ತು ಬಿಳಿ ನಿಲುವಂಗಿ(ಜುಬ್ಬಾ) ಅಥವಾ ಸದರಾ ಹೀಗಿರುತ್ತದೆ. ಅವರ ಶುಭ್ರ ವಸ್ತ್ರಗಳಲ್ಲಿನ ಈ ರೂಪವನ್ನು ನೋಡುವಾಗ ‘ಶುಕ್ಲಾಮ್ಬರಧರ ಶ್ರೀವಿಷ್ಣುವಿನದ್ದೇ ಸ್ಮರಣೆಯಾಗುತ್ತದೆ. ಸಾಧಕರು ಇಲ್ಲಿಯವರೆಗೆ ಮಹರ್ಷಿಗಳ ಆಜ್ಞೆಗನುಸಾರ ಶ್ರೀ ಗುರು ಗಳು ಧರಿಸಿದ ವಿವಿಧ ಅವತಾರಿ ರೂಪಗಳ ದರ್ಶನವನ್ನು ಪಡೆದರು. ಶ್ರೀರಾಮ, ಶ್ರೀಕೃಷ್ಣ, ಶ್ರೀವಿಷ್ಣು ಮತ್ತು ಶ್ರೀ ಸತ್ಯನಾರಾಯಣ, ಈ ಎಲ್ಲ ಅವತಾರಿ ರೂಪಗಳ ದರ್ಶನದಿಂದ ಸಾಧಕರಿಗೆ ಶ್ರೀ ಗುರುಗಳಲ್ಲಿನ ಅವತಾರತ್ವವು ಸ್ಪಷ್ಟವಾಯಿತು. ಆ ದರ್ಶನದಿಂದ ಸಾಧಕರಿಗೆ ಎಷ್ಟು ಅವತಾರಿ ತತ್ತ್ವದ ಲಾಭವಾಯಿತೋ ಅಷ್ಟೇ ಅವರ ಶುಭ್ರ ವಸ್ತ್ರಗಳಲ್ಲಿನ ಸಹಜ-ಸಾಧಾರಣ ರೂಪದಿಂದಲೂ ಲಭಿಸುತ್ತದೆ. ‘ಶ್ರೀ ಗುರುಗಳ ಈ ಶುಭ್ರ ವಸ್ತ್ರಗಳಲ್ಲಿನ ಸಹಜ-ಸಾಧಾರಣ ರೂಪದಲ್ಲಿಯೂ ಎಲ್ಲ ದೇವತೆಗಳ ತತ್ತ್ವಗಳು ಸೇರಿಕೊಂಡಿವೆ, ಎಂಬುದರ ಅನುಭೂತಿಯನ್ನು ಸಾಧಕರು ಪಡೆದಿದ್ದಾರೆ. ಈ ಸಾಧಾರಣ ಸಾಮಾನ್ಯ ರೂಪವು ಸಾಧಕರಿಗೆ ಅಷ್ಟೇ ಇಷ್ಟವಾಗುತ್ತದೆ; ಏಕೆಂದರೆ ಕಲಿಯುಗದಲ್ಲಿನ ಈ ಶ್ರೀವಿಷ್ಣುವಿನ ರೂಪವು ಸಹಜರೂಪವಾಗಿದೆ.
೩. ಕರುಣಾವತ್ಸಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಮರಣೆಯನ್ನು ಮಾಡಿದ ಕೂಡಲೇ ಸಾಧಕರ ಮುಖದಲ್ಲಿ ತಾನಾಗಿಯೇ ಮಂದಹಾಸ ಅರಳುತ್ತದೆ !
ಭಗವಾನ ಶ್ರೀವಿಷ್ಣುವು ತನ್ನ ವಾತ್ಸಲ್ಯದಿಂದ ಈ ಜಗತ್ತನ್ನು ಪಾಲಿಸುತ್ತಿದ್ದಾನೆ. ‘ಶ್ರೀವಿಷ್ಣು ಎಂದ ಕೂಡಲೇ, ಮನೋಹರ ಮತ್ತು ಕರುಣಾವತ್ಸಲ ಪ್ರಸನ್ನ ಮುಖವು ಕಣ್ಣುಗಳೆದುರು
ಬಂದು ನಮ್ಮ ಮನಸ್ಸಿಗೆ ಆನಂದವಾಗುತ್ತದೆ. ಶ್ರೀಗುರುಗಳಲ್ಲಿ ಎಷ್ಟು ವಾತ್ಸಲ್ಯವಿದೆ ಎಂದರೆ ಅವರನ್ನು ನೋಡಿದ ನಂತರವಷ್ಟೇ ಅಲ್ಲ, ಅವರ ಸ್ಮರಣೆಯಿಂದಲೂ ಸಾಧಕರ ಮುಖದ ಮೇಲೆ ಮಂದಹಾಸ ಮೂಡುತ್ತದೆ. ಆತ್ಮಚಕ್ಷುಗಳಿಂದ ನೋಡಿದ ಶ್ರೀಗುರುಗಳ ಆ ಪ್ರಸನ್ನ ರೂಪವು ಸಾಧಕರ ಮನಸ್ಸನ್ನು ಸಂತೋಷಪಡಿಸುತ್ತದೆ. ಅವರ ಸ್ಮರಣೆಯಾದೊಡನೆ ಸಾಧಕರ ಅಂತಃಕರಣದಲ್ಲಿನ ಎಲ್ಲ ಭಾವ ಗಳೂ ಪ್ರಕಟವಾಗುತ್ತವೆ. ಇದುವೇ ಗುರುಗಳ ಅಪಾರ ವಾತ್ಸಲ್ಯದ ಸಾಕ್ಷಿಯಾಗಿದೆ. ಇದೇ ಆ ಶ್ರೀವಿಷ್ಣುಸ್ವರೂಪ ಗುರುಗಳ ಪರಮ ಪ್ರೀತಿಮಯ ಪ್ರಸನ್ನವದನ ರೂಪವಾಗಿದೆ !
ಶ್ರೀ ಗುರುಗಳ ಪ್ರಸನ್ನ ಮುಖ ನೋಡಿದ ಕೂಡಲೇ ಅಥವಾ ಕೇವಲ ಅವರನ್ನು ಸ್ಮರಿಸಿದ ತಕ್ಷಣ ನಮ್ಮ ಮನಸ್ಸಿನಲ್ಲಿನ ಬರುವ ಎಲ್ಲ ವಿಚಾರಗಳು ನಿಲ್ಲುತ್ತವೆ. ನಮ್ಮ ಮನಸ್ಸಿನಲ್ಲಿನ ಅಸಂಖ್ಯ ವಿಚಾರಗಳ ಬಿರುಗಾಳಿ ಶಮನವಾಗುತ್ತದೆ. ಅವರ ಸ್ಮರಣೆಯಿಂದಲೇ ಎಲ್ಲ ವಿಘ್ನಗಳು ದೂರವಾಗುತ್ತವೆ. ಇದು ಪರಮ ಮಂಗಲದಾಯಕ ಶ್ರೀಗುರುಗಳ ಕೇವಲ ಪ್ರಸನ್ನ ಮುಖದ ರೂಪದ ಮಹಾತ್ಮೆಯಾಗಿದೆ. ‘ಶ್ರೀವಿಷ್ಣುಸ್ವರೂಪ ಗುರುದೇವರ ಈ ಪ್ರಸನ್ನ ಮುಖದ ರೂಪ ಯಾವಾಗಲೂ ನಮ್ಮ ಹೃದಯಮಂದಿರದಲ್ಲಿ ವಿರಾಜಮಾನವಾಗಿರಲಿ, ಎಂದು ಅವರ ಚರಣಕಮಲಗಳಲ್ಲಿ ಪ್ರಾರ್ಥನೆ !
೪. ಶ್ರೀವಿಷ್ಣುವಿನ ನಾಲ್ಕು ಭುಜಗಳಲ್ಲಿನ ಆಯುಧಗಳು
ಶ್ರೀವಿಷ್ಣುವನ್ನು ಸ್ಮರಿಸುತ್ತಲೇ ನಮಗೆ ಅವನ ಚತುರ್ಭುಜ ರೂಪದ ದರ್ಶನವಾಗುತ್ತದೆ. ಈ ೪ ಭುಜಗಳಲ್ಲಿನ (ಕೈಗಳಲ್ಲಿನ) ಆಯುಧಗಳ ಕಾರ್ಯದ ಅನುಭವ ಈಗ ಶ್ರೀ ಜಯಂತಾವತಾರದ ಮಾಧ್ಯಮದಿಂದಲೂ ಬರುತ್ತಿದೆ. ಈ ಆಯುಧಗಳ ಭಾವಾರ್ಥ ಮುಂದಿನಂತಿರುವುದು ಗಮನಕ್ಕೆ ಬಂದಿತು.
೪ ಅ. ಪಾಂಚಜನ್ಯ ಶಂಖ : ಭಗವಾನ ಶ್ರೀವಿಷ್ಣುವಿನ ಚತುರ್ಭುಜ ರೂಪವನ್ನು ನೋಡಿದಾಗ ಮೊದಲು ಅವನು ಮೇಲಿನ ಕೈಯಲ್ಲಿ ಹಿಡಿದ ಶಂಖದ ಸ್ಮರಣೆಯಾಗುತ್ತದೆ. ಭಗವಂತನ ರೂಪ ಅವತರಿಸುವಾಗ ಶಂಖಧ್ವನಿಯಾಗು ತ್ತದೆ. ಮೊದಲು ಧ್ವನಿ ಕಿವಿಗಳ ಮೇಲೆ ಬೀಳುತ್ತದೆ ಅದಾದ ಬಳಿಕ ಭಗವಂತನ ದರ್ಶನವಾಗುತ್ತದೆ. ‘ಯಾವುದರ ಧ್ವನಿಯ ಶಬ್ದದಿಂದ ದೈತ್ಯರು ಓಡಿಹೋಗುತ್ತಾರೆಯೋ, ಅಂತಹ ಶಂಖದ ಸಾಮ್ರಾಟ ನಾದ ‘ಪಾಂಚಜನ್ಯ ಶಂಖವನ್ನು ಶ್ರೀವಿಷ್ಣುವು ಧಾರಣೆ ಮಾಡಿದ್ದಾನೆ.
೪ ಅ ೧. ಭಗವಂತನ ಇಚ್ಛೆಯಿಂದ ಬೇಗನೆ ಹಿಂದು ರಾಷ್ಟ್ರದ ಸ್ಥಾಪನೆಯ ರೂಪದಲ್ಲಿ ಮಂಗಲಮಯ ಶಂಖನಾದ ತ್ರೈಲೋಕ್ಯದಲ್ಲಿ ಮೊಳಗಲಿದೆ ! : ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಕೇವಲ ಧರ್ಮಸಂಸ್ಥಾಪನೆಯ ಅವತಾರಿ ಕಾರ್ಯಕ್ಕಾಗಿಯೇ ಜನ್ಮ ತಾಳಿದ್ದಾರೆ. ಧರ್ಮಸಂಸ್ಥಾಪನೆಯ ಮೂರ್ತಿಮಂತ ರೂಪವನ್ನು ನಾವು ‘ಹಿಂದು ರಾಷ್ಟ್ರದ ರೂಪದಲ್ಲಿ ಪ್ರತ್ಯಕ್ಷ ಅನುಭವಿಸಲಿದ್ದೇವೆ. ಶ್ರೀ ಗುರುಗಳು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದ ಶಂಖನಾದವನ್ನು ಮಾಡಿದ್ದಾರೆ. ಈ ಕಾರ್ಯವನ್ನು ಎಲ್ಲೆಡೆಯ ಸಂತರು, ಆಧ್ಯಾತ್ಮಿಕ ಅಧಿಕಾರಿ ಗಳು, ಋಷಿಮುನಿಗಳು ಮತ್ತು ದೇವತೆಗಳೂ ಗೌರವಿಸುತ್ತಿದ್ದಾರೆ. ವಿವಿಧ ಮಾಧ್ಯಮಗಳಿಂದ ಹಿಂದೂ ರಾಷ್ಟ್ರ ಹತ್ತಿರ ಬಂದಿರುವುದರ ಅನುಭವ ಬರುತ್ತಿದೆ. ಭಗವಂತನ ಇಚ್ಛೆಯಿಂದ ಆದಷ್ಟು ಬೇಗನೆ ಹಿಂದೂ ರಾಷ್ಟ್ರದ ಸ್ಥಾಪನೆಯ ರೂಪದಲ್ಲಿ ಈ ಮಂಗಲಮಯ ಶಂಖನಾದವು ಮೂರು ಲೋಕಗಳಲ್ಲಿ ಮೊಳಗಲಿದೆ. ಈ ಬಗ್ಗೆ ಮನಸ್ಸಿನಲ್ಲಿ ಎಳ್ಳಷ್ಟೂ ಸಂದೇಹವನ್ನು ಇಟ್ಟುಕೊಳ್ಳದೇ ಶ್ರೀವಿಷ್ಣುಸ್ವರೂಪ ಗುರುದೇವರ ಅವತಾರಿ ಕಾರ್ಯದ ಮೇಲೆ ಸಂಪೂರ್ಣ ಶ್ರದ್ಧೆಯನ್ನಿಡೋಣ.
೪ ಆ. ಸುದರ್ಶನಚಕ್ರ
೪ ಆ ೧. ಭಗವಂತನ ತೇಜದ ಅಂಶ ವಿರುವ ತೇಜೋಮಯ ‘ಸುದರ್ಶನ ಚಕ್ರವು ವಿಶ್ವವಂದ್ಯವಾಗಿದೆ ! : ಭಗವಾನ ಶ್ರೀವಿಷ್ಣುವು ತನ್ನ ಚತುರ್ಭುಜಗಳ ಪೈಕಿ ಮೇಲಿನ ಬಲಗೈಯ ಬೆರಳಿನಲ್ಲಿ ‘ಸುದರ್ಶನಚಕ್ರವನ್ನು ಧರಿಸಿದ್ದಾನೆ. ಕಾಲದ ಸಂಚಾಲನೆಯ ಶಕ್ತಿಯು ಭಗವಂತನ ಕೈಯಲ್ಲಿದೆ. ಎಲ್ಲ ವಿಷಯಗಳ ಮೇಲೆ ಭಗವಂತನ ನಿಯಂತ್ರಣವಿದೆ. ಎಲ್ಲಿಯವರೆಗೆ ಈ ಚಕ್ರವು ಭಗವಂತನ ಕೈಯಲ್ಲಿರುತ್ತದೆಯೋ, ಅಲ್ಲಿಯವರೆಗೆ ‘ಸು-ದರ್ಶನ; ಅಂದರೆ ಹಿತಕಾರಿ ಮತ್ತು ಕಲ್ಯಾಣಕಾರಿ ದರ್ಶನವಿರುತ್ತದೆ. ಒಮ್ಮೆ ಅದು ಅವನ ಕೈಯಿಂದ ಹೊರಟರೆ, ಅದು ಜಗತ್ತಿಗೆ ವಿನಾಶ ಕಾರಿಯಾಗುತ್ತದೆ. ಭಗವಂತನ ತೇಜದ ಅಂಶವಾಗಿರುವ ಈ ತೇಜೋಮಯ ‘ಸುದರ್ಶನಚಕ್ರವು ವಿಶ್ವವಂದ್ಯವಾಗಿದೆ.
೪ ಆ ೨. ಭಕ್ತರ ಮೇಲೆ ಅಖಂಡ ಕೃಪೆ ಮತ್ತು ಚೈತನ್ಯದ ಮಳೆಯನ್ನು ಸುರಿಯಲು ಈ ಸುದರ್ಶನಚಕ್ರವು ಈಗ ಕಲಿಯುಗದಲ್ಲಿಯೂ ಕಾರ್ಯನಿರತವಾಗಿದೆ ! : ಶ್ರೀವಿಷ್ಣುವಿನ ಕೈಯಲ್ಲಿನ ಈ ಚಕ್ರವು ಅಸುರರಿಗೆ ಮಾರಕ ಮತ್ತು ಭಕ್ತರಿಗೆ ತಾರಕವಾಗಿದೆ. ಇದೇ ಚಕ್ರವು ಯಾವಾಗಲೂ ಭಕ್ತ ಅಂಬರೀಷನೊಂದಿಗಿದ್ದು ಅವನ ರಕ್ಷಣೆಯನ್ನು ಮಾಡುತ್ತಿತ್ತು. ಅದರಂತೆ ಈ ಚಕ್ರವು ಈ ಕಲಿಯುಗದಲ್ಲಿಯೂ ಭಗವಂತನ ಮೇಲೆ ದೃಢ ನಿಷ್ಠೆ ಮತ್ತು ಭಕ್ತಿ ಇರುವ ಎಲ್ಲ ವಿಷ್ಣುಭಕ್ತರ ರಕ್ಷಣೆಯನ್ನು ಮಾಡಲಿಕ್ಕಿದೆ. ಭಕ್ತರ ಮೇಲೆ ಅಖಂಡ ಕೃಪೆ ಮತ್ತು ಚೈತನ್ಯದ ಮಳೆಯನ್ನು ಸುರಿಯಲೆಂದೇ ಈ ಸುದರ್ಶನಚಕ್ರವು ಈಗಲೂ ಕಾರ್ಯನಿರತವಾಗಿದೆ. ಕಾಲದ ಮೇಲೆ ಭಗವಂತನ ನಿಯಂತ್ರಣವಿದೆ. ಅದರಂತೆ ‘ಹಿಂದೂ ರಾಷ್ಟ್ರವನ್ನು ಯಾವಾಗ ತರಬೇಕು ?, ಇದೂ ಸಹ ಭಗವಂತ ಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕೈ ಯಲ್ಲಿಯೇ ಇದೆ. ‘ಯಾವ ಕ್ಷಣ ಹಿಂದೂ ರಾಷ್ಟ್ರಕ್ಕಾಗಿ ಪೂರಕ ಕಾಲವು ನಿರ್ಮಾಣವಾಗಲಿ, ಎಂದು ಅವರ ಇಚ್ಛೆ ಆಗುವುದೋ, ಅದೇ ಕ್ಷಣ ಪೃಥ್ವಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು. ಅಲ್ಲಿಯವರೆಗೆ ನಾವೆಲ್ಲರೂ ಈ ಸೂಕ್ಷ್ಮ ಸುದರ್ಶನಚಕ್ರದಿಂದ ಪ್ರಕ್ಷೇಪಿತವಾಗುವ ಗುರುಕೃಪೆಯ ಮತ್ತು ಚೈತನ್ಯದ ಅಖಂಡ ಸುರಿಮಳೆಯನ್ನು ಅನುಭವಿಸೋಣ.
೪. ಇ. ಗದೆ
೪ ಇ ೧. ಪ್ರತಿಯೊಂದು ಭಗವದ್ಭಕ್ತ ಜೀವದ ಜೊತೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗದಾರೂಪಿ ಕವಚ ಅಖಂಡವಾಗಿ ಕಾರ್ಯನಿರತವಾಗಿದೆ ! : ಭಗವಂತನ ಕೈಯಲ್ಲಿ ಯಾವಾಗಲೂ ಇರುವ ಆಯುಧವೆಂದರೆ ಗದೆ. ಈ ಗದೆಯ ಹೆಸರು ‘ಕೌಮೋದಕಿ. ಮೋದವೆಂದರೆ ಆನಂದ. ಇದು ‘ಸಂಪೂರ್ಣ ಜಗತ್ತನ್ನು ರಾಕ್ಷಸರ ತೊಂದರೆ ಗಳಿಂದ ರಕ್ಷಿಸಿ ಆನಂದವನ್ನು ನೀಡುವ ಗದೆಯಾಗಿದೆ. ಈ ಅತ್ಯಂತ ತೇಜಸ್ವಿ ಕೌಮೋದಕಿ ಗದೆಯನ್ನು ಭಗವಾನ ಶ್ರೀವಿಷ್ಣುವು ತನ್ನ ಕರಕಮಲದ ಅಗ್ರಭಾಗದಿಂದ, ಅಂದರೆ ಬೆರಳುಗಳಿಂದ ಅತ್ಯಂತ ಪ್ರೀತಿಯಿಂದ ಧಾರಣೆ ಮಾಡಿದ್ದಾನೆ. ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಕಲಿಸಿದ ಸಾಧನೆಯಿಂದ ಮನುಕುಲದ ಎಲ್ಲ ದುಃಖಗಳು ದೂರವಾಗುತ್ತವೆ ಮತ್ತು ಅವರಿಗೆ ಆನಂದಪ್ರಾಪ್ತವಾಗುತ್ತದೆ. ಶ್ರೀ ಗುರುಗಳು ಕಲಿಸಿದ ಸಾಧನೆಯ ಅಭೇದ್ಯ ಕವಚವು ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯನ್ನು ಮಾಡುವುದಾಗಿದೆ. ಈ ಸಾಧನೆಯ ಅಭೇದ್ಯ ಕವಚವು ಸಾಧಕರಿಗೆ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ಹಿಮ್ಮೆಟ್ಟಿಸುವ ಗದೆಯಂತೆಯೇ ಕಾರ್ಯವನ್ನು ಮಾಡುತ್ತದೆ. ಪ್ರತಿ ಯೊಬ್ಬ ಭಗವದ್ಭಕ್ತ ಜೀವದೊಂದಿಗೆ ಶ್ರೀವಿಷ್ಣುಸ್ವರೂಪ ಗುರುಗಳ ಈ ಗದಾರೂಪಿ ಕವಚವು ಅಖಂಡ ಕಾರ್ಯನಿರತವಾಗಿದೆ. ನಾವು ಅದರ ಅನುಭೂತಿ ಪಡೆಯೋಣ.
೪ ಈ. ಕಮಲ
೪ ಈ ೧. ಶ್ರೀವಿಷ್ಣುವು ಕೈಯಲ್ಲಿ ಸಹಜವಾಗಿ ಹಿಡಿದ ಕಮಲದಂತೆಯೇ, ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎಲ್ಲ ಸಾಧಕರನ್ನು ತಮ್ಮ ಕರಕಮಲಗಳಲ್ಲಿ ಜೋಪಾನ ವಾಗಿಟ್ಟುಕೊಂಡು ಅವರ ರಕ್ಷಣೆಯನ್ನು ಮಾಡುತ್ತಿದ್ದಾರೆ ! : ಶ್ರೀವಿಷ್ಣುವು ತನ್ನ ನಾಲ್ಕನೆಯ ಕೈಯಲ್ಲಿ ಕಮಲಪುಷ್ಪವನ್ನು ಹಿಡಿದಿದ್ದಾನೆ. ಅವನು ಆ ಕಮಲಪುಷ್ಪವನ್ನು ಎಷ್ಟು ಸಹಜವಾಗಿ ಹಿಡಿದಿದ್ದಾನೆಂದರೆ, ಅದರ ಕಡೆಗೆ ನೋಡಿ ನಮ್ಮ ಅಂತಃಕರಣದಲ್ಲಿನ ಭಾವಜಾಗೃತವಾಗುತ್ತದೆ. ಶ್ರೀವಿಷ್ಣುವು ತನ್ನ ಕೈಯಲ್ಲಿ ಹಿಡಿದ ಈ ಕಮಲದಂತೆ ಶ್ರೀವಿಷ್ಣು ಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಎಲ್ಲ ಸಾಧಕರನ್ನು ತಮ್ಮ ಕರಕಮಲಗಳಲ್ಲಿ ಸಹಜವಾಗಿ ಹಿಡಿದಿದ್ದಾರೆ. ಕೇವಲ ಸಾಧಕರನ್ನಷ್ಟೇ ಅಲ್ಲ, ಅವರು ಜಗತ್ತಿನಲ್ಲಿನ ಎಲ್ಲ ಭಗವದ್‌ಪರಾಯಣ ಜೀವಗಳನ್ನೂ ಹೀಗೇ ಜೋಪಾನ ಮಾಡಿಟ್ಟುಕೊಂಡಿದ್ದಾರೆ. ಇಲ್ಲಿಯವರೆಗೆ ಸಾಧಕರು ಇಂತಹ ಅನೇಕ ಅನುಭೂತಿಗಳನ್ನು ಪಡೆದಿದ್ದಾರೆ. ಅವರಿಗೆ ದೊಡ್ಡ ದೊಡ್ಡ ಕಠಿಣ ಪ್ರಸಂಗಗಳಲ್ಲಿಯೂ ತಾನಾಗಿಯೇ ಮತ್ತು ಸಹಜವಾಗಿ ಮಾರ್ಗ ದೊರಕಿದೆ. ಭಯಂಕರ ಅಪಘಾತಗಳಲ್ಲಿ ಅವರ ರಕ್ಷಣೆಯಾಗಿದೆ. ಸಾಧಕರ ಪ್ರಾರಬ್ಧ ತೀವ್ರವಾಗಿದ್ದರೂ ಅವರಿಗೆ ಅದರ ಬಿಸಿ ತಟ್ಟಿಲ್ಲ. ಇವೆಲ್ಲವೂ ಸಹಜ ಅಥವಾ ಕಾಕತಾಳೀಯವಾಗಿರದೇ (ಯೋಗಾಯೋಗ) ವಿಷ್ಣು ಸ್ವರೂಪ ಗುರುದೇವರ ಅಪಾರ ಕೃಪೆಯಾಗಿದೆ. ವಿಷ್ಣುಸ್ವರೂಪ ಶ್ರೀ ಗುರುಗಳು ಸಾಧಕರನ್ನು ರಕ್ಷಿಸಲು ಅವರನ್ನು ತಮ್ಮ ಕರಕಮಲಗಳಲ್ಲಿ ಜೋಪಾನವಾಗಿಟ್ಟುಕೊಂಡಿದ್ದಾರೆ. ‘ಮುಂಬರುವ ಭೀಕರ ಆಪತ್ಕಾಲದಲ್ಲಿಯೂ ಶ್ರೀ ಗುರುಗಳು ಈ ರೀತಿ ಸದ್ಭಕ್ತರ ರಕ್ಷಣೆ ಮಾಡುವರು, ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದುದರಿಂದ ಸಾಧಕರಿಗೆ ‘ಆಪತ್ಕಾಲ ಯಾವಾಗ ಬಂತು ಮತ್ತು ಯಾವಾಗ ಹೋಯಿತು ?, ಎಂಬುದು ಸಹ ತಿಳಿಯಲಿಕ್ಕಿಲ್ಲ.
೫. ಭಗವಾನ ಶ್ರೀವಿಷ್ಣುವಿನ ಸಾವಿರ ಹೆಸರುಗಳು ಮತ್ತು ಅನಂತ ಕಾರ್ಯಗಳಿವೆ. ಅದರಂತೆ ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕಾರ್ಯಗಳೂ ಅನಂತವಾಗಿವೆ. ಅವುಗಳನ್ನು ವರ್ಣಿಸುವುದು ಅಸಾಧ್ಯವೇ ಆಗಿದೆ.
‘ಶ್ರೀವಿಷ್ಣುಸಹಸ್ರನಾಮದಲ್ಲಿನ ಮೇಲಿನ ಒಂದೇ ಶ್ಲೋಕದ ಮಾನವನ ಅಲ್ಪ ಬುದ್ಧಿಯಿಂದ ವಿಶ್ಲೇಷಣೆಯನ್ನು ಮಾಡುವಾಗ, ಒಂದು ವೇಳೆ ಇಷ್ಟೆಲ್ಲ ಲಕ್ಷಣಗಳು ದೊರಕಿದರೆ, ‘ಶ್ರೀವಿಷ್ಣುವಿನ ಅನಾದಿ ಅನಂತ ಸ್ವರೂಪವನ್ನು ತಿಳಿದುಕೊಳ್ಳುವುದು ಮತ್ತು ಅವುಗಳ ವರ್ಣನೆಯನ್ನು ಮಾಡುವುದು, ಅಸಾಧ್ಯವೇ ಆಗಿದೆ. ‘ಸಚ್ಚಿದಾನಂದ ಪರಬ್ರಹ್ಮ ಗುರುದೇವರಲ್ಲಿ ಶ್ರೀವಿಷ್ಣುವಿನ ತತ್ತ್ವವು ತುಂಬಿಕೊಂಡಿದೆ, ಇದು ಅದರದ್ದೇ ಅನುಭವವಾಗಿದೆ. ಇಂತಹ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಜನ್ಮೋತ್ಸವದ ನಿಮಿತ್ತ ಅವರ
ವಿಷ್ಣುಮಯ ಅನಾದಿ ಅನಂತ ಸ್ವರೂಪಕ್ಕೆ ಕೋಟಿಶಃ ವಂದನೆಗಳು !
೬. ಪ್ರಾರ್ಥನೆ‘ಅಖಿಲ ವಿಶ್ವದ ಕಲ್ಯಾಣ ಮತ್ತು ಧರ್ಮಸಂಸ್ಥಾಪನೆಗಾಗಿ ಈ ಭೂತಲದ ಮೇಲೆ ಅವತರಿಸಿದ ಈ ನಾರಾಯಣಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವಾ, ‘ತಮ್ಮ ಶ್ರೀವಿಷ್ಣುರೂಪದಲ್ಲಿನ ಪ್ರಸನ್ನಮುಖದ ದಿವ್ಯ ರೂಪವು ಸಾಧಕರ ಚಿತ್ತದಲ್ಲಿ ಮೂಡಲಿ. ‘ತಾವೇ ಭಕ್ತವತ್ಸಲ, ಪ್ರೀತಿವತ್ಸಲ ಮತ್ತು ಕೃಪಾವತ್ಸಲ ನಾರಾಯಣರಾಗಿರುವಿರಿ, ಎಂದು ಎಲ್ಲ ಸಾಧಕರಲ್ಲಿ ದೃಢ ನಿಷ್ಠೆ ಇರಲಿ. ತಮ್ಮಲ್ಲಿ ಸಂಪೂರ್ಣ ತುಂಬಿಕೊಂಡ ಶ್ರೀವಿಷ್ಣುವಿನ ಅವತಾರಿ ತತ್ತ್ವದ ಅನುಭವವನ್ನು ಪಡೆಯುತ್ತಾ ಎಲ್ಲ ಸಾಧಕರ ಶ್ರದ್ಧೆಯು ಹೆಚ್ಚಾಗಲಿ, ಎಂದು ತಮ್ಮ ಪರಮ ಮೋಕ್ಷದಾಯಕ ಶ್ರೀಚರಣಕಮಲಗಳಲ್ಲಿ ಪ್ರಾರ್ಥನೆ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೯.೫.೨೦೨೩) |