ಖ್ಯಾತ ‘ರಾಪರ್’ ಬಾದ‌ಶಾಹ ಅವರ ಅಶ್ಲೀಲ ಹಾಡಿನಲ್ಲಿ ಭಗವಾನ್ ಶಂಕರನ ಉಲ್ಲೇಖ !

ಅರ್ಚಕರು ಮತ್ತು ಹಿಂದೂ ಸಂಘಟನೆಗಳಿಂದ ವಿರೋಧ

(ರಾಪರ್ ಎಂದರೆ ಅತಿ ವೇಗವಾಗಿ ಮತ್ತು ಒಂದೆಲಯದಲ್ಲಿ ಹಾಡುವ ವ್ಯಕ್ತಿ)

ಎಡಭಾಗದಲ್ಲಿ ಶ್ರೀ ಮಹಾಕಾಲ್ ದೇವಸ್ಥಾನದ ಅರ್ಚಕರು

ಉಜ್ಜಯಿನಿ (ಮಧ್ಯಪ್ರದೇಶ) – ಪ್ರಸಿದ್ಧ ‘ರಾಪರ್’ ಬಾದಶಹನ ಸನಕ್ ಹಾಡುಗಳ ಸಂಗ್ರಹನಲ್ಲಿನ ಒಂದು ಹಾಡಿನಲ್ಲಿ ಭಗವಾನ್ ಶಂಕರನನ್ನು ಉಲ್ಲೇಖಿಸಲಾಗಿದೆ; ಆದರೆ ಈ ಹಾಡಿನ ಪದಗಳು ಅಶ್ಲೀಲವಾಗಿವೆ. ಈ ಬಗ್ಗೆ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಮಹಾಕಾಲ್ ದೇವಸ್ಥಾನದ ಅರ್ಚಕರು ಆಕ್ಷೇಪಿಸಿದ್ದಾರೆ. ಇದರೊಂದಿಗೆ ಮಹಾಕಾಲ ಸೇನೆ, ಪೂಜಾರಿ ಮಹಾಸಂಘ ಹಾಗೂ ಹಿಂದೂ ಸಂಘಟನೆಗಳು ಈ ಬಗ್ಗೆ ದೂರು ದಾಖಲಿಸಲಿವೆ.

ಸನಾತನ ಧರ್ಮದಲ್ಲಿನ ನಾವಿನ್ಯತೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವು ಅವರು ಮಾಡಿದ್ದಾರೆ. ಈ ಹಾಡಿನಲ್ಲಿ ‘ಭೋಲೆನಾಥ್ ಸೆ ಮೇರಿ ಬನತಿ ಹೈ’ ಎಂದು ಉಲ್ಲೇಖಿಸಲಾಗಿದೆ. ಹಾಡಿನ ಈ ಭಾಗದಲ್ಲಿ ಆಕ್ಷೇಪಣೆ ದಾಖಲಿಸಲಾಗಿದೆ. ಈ ಆಕ್ಷೇಪದ ಬಗ್ಗೆ ಬಾದಶಾಹ ಅವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಸಂಪಾದಕರ ನಿಲುವು

ಮಧ್ಯಪ್ರದೇಶದ ಭಾಜಪ ಸರಕಾರವು ಈ ಬಗ್ಗೆ ಸ್ವತಃ ಕ್ರಮ ತೆಗೆದುಕೊಳ್ಳಬೇಕಾಗಿದೆ, ಹೀಗೆ ಹಿಂದೂಗಳಿಗೆ ಅನಿಸುತ್ತದೆ !