“ನಾನು 12 ಪವಿತ್ರ ಜ್ಯೋತಿರ್ಲಿಂಗಗಳಲ್ಲೊಂದು!”(ಅಂತೆ) – ಕಾಂಗ್ರೆಸ್ ರಾಷ್ಟ್ರಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ರಾಷ್ಟ್ರಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ಹೇಳಿಕೆ

ನವ ದೆಹಲಿ – ನಾನು ಹಿಂದೂ ಆಗಿದ್ದೂ, ನನ್ನ ಹೆಸರು ಮಲ್ಲಿಕಾರ್ಜುನ ಖರ್ಗೆ ಆಗಿದೆ. 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ನಾನು ಒಬ್ಬ ಲಿಂಗ ಆಗಿದ್ದೇನೆ. ನನ್ನ ತಂದೆಯವರು ನನಗೆ ಈ ಹೆಸರನ್ನು ಇಟ್ಟಿದ್ದಾರೆ, ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರು ಡಿಸೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿ ಖರ್ಗೆಯವರು ತಮ್ಮನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿಕೊಂಡರು. ಇದನ್ನು ಭಾಜಪ ಟೀಕಿಸಿದೆ.

ಖರ್ಗೆ ಮಾತು ಮುಂದುವರೆಸಿ,

1. ಭಾಜಪ ಸರಕಾರ ದೇಶದ ಮಸೀದಿಗಳ ಸಮೀಕ್ಷೆ ನಡೆಸಿ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂತಹ ಸಮೀಕ್ಷೆಗಳಿಗೆ ಅವಕಾಶ ನೀಡುವ ಮೂಲಕ ಜನರು ಒಂದಾಗದಂತೆ ತಡೆಯಲು ಯತ್ನಿಸುತ್ತಿದ್ದಾರೆ. (ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ಒಂದಾಗಿರುವ ನ್ಯಾಯಾಲಯದಿಂದ ಸಮೀಕ್ಷೆಗೆ ಆದೇಶ ನೀಡಿರುವುದು ಪ್ರಧಾನಿ ಮೋದಿಯವರಲ್ಲ. ಗೊತ್ತಿದ್ದೂ ಸುಳ್ಳು ಹೇಳುವ ಖರ್ಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂಬುದನ್ನು ಗಮನಿಸಿ ! – ಸಂಪಾದಕರು)

2. ಕೆಂಪುಕೋಟೆ, ತಾಜ್ ಮಹಲ್, ಕುತುಬ್ ಮಿನಾರ್, ಚಾರ್ ಮಿನಾರ್ ನಂತಹ ಕಟ್ಟಡಗಳನ್ನು ಈ ಕಟ್ಟಡಗಳನ್ನು ಮುಸ್ಲಿಮರು ನಿರ್ಮಿಸಿದ್ದಾರೆ ಎಂದು ಭಾಜಪ ನಾಯಕರು ಧ್ವಂಸ ಮಾಡಲು ಹೊರಟಿದ್ದಾರೆಯೇ?. (ಇದನ್ನು ಖರ್ಗೆಯವರಿಗೆ ಯಾರು ಹೇಳಿದ್ದು ? ಈ ಕಟ್ಟಡಗಳ ಬಗ್ಗೆ ತಕರಾರು ಇದೆ. ಇವು ಹಿಂದೂ ರಾಜರು ಕಟ್ಟಿದ ಸ್ಥಳಗಳು ಮತ್ತು ಇತಿಹಾಸದಲ್ಲಿ ಇದಕ್ಕೆ ಲೆಕ್ಕವಿಲ್ಲದಷ್ಟು ಪುರಾವೆಗಳಿವೆ. ಅವುಗಳನ್ನು ಈಗ ಹಿಂದೂ ಪಕ್ಷಗಳು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿವೆ. 27 ಹಿಂದೂ ಮತ್ತು ಜೈನ ದೇವಸ್ಥಾನಗಳನ್ನು ನೆಲಸಮ ಮಾಡಿ ಅಲ್ಲಿ ಮಸೀದಿ ಕಟ್ಟಲಾಗಿದೆ ಎಂದು ಪುರಾತತ್ವ ಇಲಾಖೆಯೇ ಫಲಕ ಹಾಕಿದೆ. ಇದು ಸಾರ್ವಜನಿಕವಾಗಿರುವಾಗ ಖರ್ಗೆ ಅವರು ಸುಳ್ಳು ಹೇಳುತ್ತಿದ್ದಾರೆ. ಈ ಬಗ್ಗೆ ಹಿಂದೂಗಳು ಅವರ ವಿರುದ್ಧ ಅಪರಾಧವನ್ನು ದಾಖಲಿಸಿ ಈ ಬಗ್ಗೆ ದೂರು ನೀಡಬೇಕು ! – ಸಂಪಾದಕರು)

3. ದೇಶಾದ್ಯಂತ ಸಮೀಕ್ಷೆಗಳು ನಡೆಯುತ್ತಿವೆ. ಮಸೀದಿಗಳ ಅಡಿಯಲ್ಲಿ ದೇವಾಲಯಗಳನ್ನು ಹುಡುಕಲು ಪ್ರಯತ್ನಿಸಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಲಾಗುತ್ತಿದೆ. 2023 ರಲ್ಲಿ, ಸರ ಸಂಘಚಾಲಕ ಮೋಹನ ಭಾಗವತ್ ಅವರು, ‘ನಮ್ಮ ಗುರಿ ರಾಮಮಂದಿರ ನಿರ್ಮಾಣ ಮಾತ್ರ ಇದೆ. ನಾವು ಪ್ರತಿ ಮಸೀದಿಯ ಕೆಳಗೆ ಶಿವಲಿಂಗವನ್ನು ಹುಡುಕುತ್ತಾ ಕುಳಿತುಕೊಳ್ಳಬಾರದು’; ಆದರೆ ಮೋದಿ ಸರಕಾರದ ಕ್ರಮಗಳು ಭಾಗವತ್ ಭಾಷಣಕ್ಕೆ ವಿರುದ್ಧವಾಗಿವೆ. (ವಾಸ್ತವವಾಗಿ ಮೋದಿ ಸರಕಾರ ಏನನ್ನೂ ಮಾಡುತ್ತಿಲ್ಲ ಬದಲಾಗಿ ನ್ಯಾಯಾಲಯದಲ್ಲಿ ಸಮೀಕ್ಷೆಗೆ ಒತ್ತಾಯಿಸುವುದು ಹಿಂದೂ ಸಂಘಟನೆಗಳು ಮತ್ತು ಮುಖಂಡರೇ ಮತ್ತು ಪ್ರಜಾಪ್ರಭುತ್ವದಲ್ಲಿ ಸಂವಿಧಾನವು ಅವರಿಗೆ ಈ ಹಕ್ಕನ್ನು ನೀಡಿದೆ ಎಂಬುದನ್ನು ಖರ್ಗೆ ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)

ಕಾಂಗ್ರೆಸ್ ಕ್ಷಮೆ ಕೇಳಬೇಕು ! – ಭಾಜಪ

ಭಾಜಪದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಇವರು ವಿಡಿಯೋ ಬಿಡುಗಡೆ ಮಾಡಿ, ಹಿಂದೂಗಳ ಶ್ರದ್ಧೆಗೆ ಅವಮಾನ ಮಾಡುವುದು ಕಾಂಗ್ರೆಸ್ ಪಕ್ಷದ ವಿಶೇಷತೆಯಾಗಿದೆ. ಕಾಂಗ್ರೆಸ್ ಮೊದಲು ಶ್ರೀರಾಮನನ್ನು ಅವಮಾನಿಸಿತು. ಅಯೋಧ್ಯೆಯ ದೇವಸ್ಥಾನದಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಲ್ಲಿ ನಡೆದ ಸಮಾರಂಭವನ್ನು ಕಾಂಗ್ರೆಸ್ ‘ನೃತ್ಯ-ಗೀತೆ’ ಎಂದು ಬಣ್ಣಿಸಿತ್ತು. ಕಾಂಗ್ರೆಸ್‌ನಿಂದ ಪ್ರಭು ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದೆ. ಈಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶಿವನನ್ನು ಅವಮಾನಿಸುತ್ತಿದ್ದಾರೆ. ಖರ್ಗೆಯವರು ತಮ್ಮನ್ನು 12 ಜ್ಯೋತಿರ್ಲಿಂಗಗಳಿಗೆ ಹೋಲಿಸಿಕೊಂಡಿದ್ದಾರೆ. ನಾನು ಕೇಳಲು ಬಯಸುತ್ತೇನೆ, ಬೇರೆ ಯಾವುದೇ ಧರ್ಮದ ಬಗ್ಗೆ ಕಾಂಗ್ರೆಸ್ ಇಂತಹ ಹೇಳಿಕೆ ನೀಡಬಹುದೇ? ವೋಟ್ ಬ್ಯಾಂಕ್ ಲಾಭಕ್ಕಾಗಿ ಕಾಂಗ್ರೆಸ್ ಇಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂದರೆ ಅದು ನಿರಂತರವಾಗಿ ಹಿಂದೂಗಳ ಶ್ರದ್ಧೆಗೆ ಧಕ್ಕೆ ತರುತ್ತಿದೆ. ಕಾಂಗ್ರೆಸ್ ಅಧ್ಯಕ್ಷರು ಕ್ಷಮೆಯಾಚಿಸಬೇಕು. ಹೆಸರು ಶಿವ ಎಂದಾದರೆ ನೀವು ಶಿವನಾಗಲು ಸಾಧ್ಯವಿಲ್ಲ. ಕೊಟ್ಯಾಂತರ ಜನರು ಜ್ಯೋತಿರ್ಲಿಂಗದಲ್ಲಿ ಶ್ರದ್ಧೆ ಹೊಂದಿದ್ದಾರೆ ಮತ್ತು ಇವರು ತಮ್ಮನ್ನು ತಾವು ಜ್ಯೋತಿರ್ಲಿಂಗ ಎಂದು ಕರೆಯುತ್ತಾರೆ. ಇದು ಹಿಂದೂಗಳಿಗೆ ಮಾಡಿದ ದೊಡ್ಡ ಅವಮಾನವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ತಮ್ಮ ಹೆಸರು “ಮಲ್ಲಿಕಾರ್ಜುನ” ಇದೆ ಎಂದು ಅವರು ತಮ್ಮನ್ನು ಶಿವನಂತೆ ಭಾವಿಸುವ ಖರ್ಗೆ ಇವರು ತಮ್ಮನ್ನು ಹಿಂದೂಗಳಂತೆ ತಿಳಿದುಕೊಳ್ಳುತ್ತಾರೆ, ಇದೇ ದೊಡ್ಡ ವಿಷಯ ಎಂದು ಹೇಳಬಹುದು !
  • ಮತಾಂಧ ಮುಸಲ್ಮಾನರಿಂದ ದೇಶದಲ್ಲಿ ಶಿವನ ದೇವಾಲಯಗಳ ಮೇಲೆ ನಡೆದ ದಾಳಿ, ಕಾಶಿಯಲ್ಲಿ ಮುಸಲ್ಮಾನರ ಜ್ಞಾನಾವಾಪಿಯ ಮೇಲಿನ ಅತಿಕ್ರಮಣದ ಬಗ್ಗೆ ಮಾತನಾಡುವ ಅರಿವು ಮಲ್ಲಿಕಾರ್ಜುನ ಖರ್ಗೆಯವರಿಗೆ ಏಕೆ ಇಲ್ಲ ? ಆಗ ಅವರೇಕೆ ಮೌನವಾಗಿದ್ದಾರೆ ?