ಅಕ್ಷಯ ತೃತೀಯ ಹಬ್ಬ ಬಂದಾಗ, ಪ್ರತಿಯೊಬ್ಬ ಹಿಂದೂವು ಪೂರ್ವಜರಿಂದ ಬಂದಿರುವ ದಾನ-ಧರ್ಮ ಮಾಡುವ ಪರಂಪರೆಯನ್ನು ಪಾಲಿಸುವುದು ಮತ್ತು ಚಿನ್ನ-ನಾಣ್ಯಗಳನ್ನು ಖರೀದಿಸಲು ಹಕ್ಕಿನ ಸಮಯವೆಂದು ತಿಳಿಯುತ್ತಾನೆ. ಈ ದಿನ ವಿವಿಧ ಪ್ರಕಾರಗಳ ದಾನವನ್ನು ಕೊಡುವ ವಾಡಿಕೆ ಇದೆ. ವೈಯಕ್ತಿಕ ಉಪಾಸನೆ, ಹಾಗೆಯೇ ಕೌಟುಂಬಿಕ ಕಲ್ಯಾಣದ ದೃಷ್ಟಿಯಿಂದ ಅದೆಲ್ಲವೂ ಆವಶ್ಯಕವೇ ಆಗಿದೆ; ಆದರೆ ಪ್ರಸ್ತುತ ದೇವರು, ದೇಶ ಮತ್ತು ಧರ್ಮವು ದುರಂತದ ಹಾದಿಯಲ್ಲಿ ಸಾಗುತ್ತಿವೆ. ಇಂತಹ ಸಮಯದಲ್ಲಿ ಕೇವಲ ವೈಯಕ್ತಿಕ ಸುಖ-ಸಮಾಧಾನದ ವಿಚಾರವನ್ನು ಮಾಡಿದರೆ, ಇಂತಹ ಕೋಟಿಗಟ್ಟಲೆ ಕುಟುಂಬಗಳು ಒಳಗೊಂಡಿರುವ ಆ ಮಹಾಕುಟುಂಬ ಅಂದರೆ ನಮ್ಮ ಭಾರತ ದೇಶದ ಬಗ್ಗೆ ಯಾರು ವಿಚಾರ ಮಾಡುತ್ತಾರೆ ? ‘ಯುಗಯುಗಾಂತರಗಳಿಂದ ನಮ್ಮ ಪೀಳಿಗೆಗಳನ್ನು ಧರ್ಮವು ಕಾಪಾಡಿಕೊಂಡು ಬಂದಿದೆ, ಅದು ದುಃಸ್ಥಿತಿಯಲ್ಲಿರುವಾಗ ಅದನ್ನು ಯಾರು ರಕ್ಷಿಸುವರು ?, ಎಂಬ ವಿಚಾರವನ್ನು ಮಾಡಬೇಕು.
ನೇತಾಜಿಯವರ ಆದರ್ಶ !
ಭಾರತವು ಪಾರತಂತ್ರ್ಯದಲ್ಲಿರುವಾಗ ನೇತಾಜಿ ಸುಭಾಷಚಂದ್ರ ಬೋಸ್ ಇವರು ಭಾರತೀಯರಿಗೆ ‘ತುಮ್ ಮುಝೆ ಖೂನ್ ದೋ, ಮೈ ತುಮ್ಹೆ ಆಝಾದಿ ದೂಂಗಾ, ಎಂದು ಕರೆ ನೀಡಿದ್ದರು. ಭಾರತೀಯರು ಅದಕ್ಕೆ ತಕ್ಷಣ ಸ್ಪಂದಿಸಿ ಬಹುದೊಡ್ಡ ಸಂಖ್ಯೆಯಲ್ಲಿ ತಮ್ಮ ಬಳಿ ಇರುವುದನ್ನೆಲ್ಲ ಚಿನ್ನದ ನಾಣ್ಯಗಳು, ಆಭರಣಗಳು, ವಸ್ತುಗಳೆಲ್ಲ ಕೊಟ್ಟರು; ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಕೆಲವರು ತಮ್ಮ ಮಗ, ಮಗಳು, ಇನ್ನು ಕೆಲವರು ಪತಿಯಂದಿರನ್ನು ಸ್ವಾತಂತ್ರ್ಯ ಚಳುವಳಿಗಾಗಿ ಅರ್ಪಿಸಿದರು. ಈ ಯುವಕ-ಯುವತಿಯರ ಮಾಧ್ಯಮದಿಂದಲೇ ಮುಂದೆ ನೇತಾಜಿಯವರು ಪ್ರಚಂಡ ಪ್ರಮಾಣದಲ್ಲಿ ‘ಆಝಾದ ಹಿಂದ್ ಸೇನೆಯನ್ನು ಕಟ್ಟಿದರು. ಆಂಗ್ಲ ಸೈನ್ಯದಲ್ಲಿನ ಭಾರತೀಯ ಸೈನಿಕರೂ ಈ ಸೇನೆಯಲ್ಲಿ ಸೇರಿದರು. ಈ ಸೇನೆಯೇ ಭಾರತದಲ್ಲಿ ಹಾನಿಯನ್ನುಂಟು ಮಾಡುವ ಆಂಗ್ಲರಿಗೆ ಸವಾಲೆಸಗಿ ಅವರೊಂದಿಗೆ ಯುದ್ಧವನ್ನು ಮಾಡಿತು. ಭಾರತೀಯರ ಈ ಅನಿರೀಕ್ಷಿತ ಸೈನ್ಯದ ನಿರ್ಮಾಣದಿಂದ ಸ್ವಲ್ಪ ಸಮಯದ ನಂತರ ಆಂಗ್ಲರಿಗೆ ದೇಶ ಬಿಟ್ಟು ಹೋಗಬೇಕಾಯಿತು.
ಇಂದು ಧರ್ಮವು ಸಂಕಟದಲ್ಲಿದೆ. ಶ್ರೀರಾಮನವಮಿ, ಹನುಮಂತ ಜಯಂತಿ ಇವುಗಳಂತಹ ಮೆರವಣಿಗೆಗಳ ಮೇಲೆ ಅನೇಕ ರಾಜ್ಯಗಳಲ್ಲಿ ಕಲ್ಲುತೂರಾಟ, ಹಾಗೆಯೇ ಸಶಸ್ತ್ರದಾಳಿಗಳೂ ನಡೆಯುತ್ತಿವೆ ಅಂತರರಾಷ್ಟ್ರೀಯ ವೇದಿಕೆಯಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲರಿಂದ ಹಿಂದೂ ಧರ್ಮವನ್ನು ಅಕ್ಷರಶಃ ಅಪಹಾಸ್ಯ ಮಾಡಲಾಗುತ್ತಿದೆ. ಹಾಸ್ಯ ಕಾರ್ಯಕ್ರಮಗಳ ಮೂಲಕ ಹಿಂದೂಗಳ ಆಚಾರ ವಿಚಾರ ಸಂಪ್ರದಾಯಗಳನ್ನು ಕೆಣಕಿಸಲಾಗುತ್ತಿದೆ. ಘಟನೆಗಳು ಘಟಿಸುತ್ತಿರುವಾಗ ಅದನ್ನು ತಡೆಗಟ್ಟಲು ಒಂದಿಷ್ಟು ಕ್ರಮ ಕೈಕೊಳ್ಳುವುದು ಹಿಂದೂಗಳ ಧರ್ಮಕರ್ತವ್ಯವಲ್ಲವೇ ?
ಧರ್ಮವೇ ಅಕ್ಷಯ ಸಮಾಧಾನ ನೀಡಬಲ್ಲದು !
ಧರ್ಮ ಎಂದರೇನು? ಸಮಾಜವ್ಯವಸ್ಥೆಯನ್ನು ಉತ್ತಮವಾಗಿಡುವುದು, ಜೀವಿಗಳ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯನ್ನು ಸಾಧಿಸುವುದು ಇದಕ್ಕೆ ಧರ್ಮ ಎಂದು ಕರೆಯ ಲಾಗುತ್ತದೆ. ಇಂದು ವೈಯಕ್ತಿಕ ಧರ್ಮಪಾಲನೆಯೊಂದಿಗೆ ಸಮಷ್ಟಿ ಸ್ವರೂಪದ ಧರ್ಮಾಚರಣೆಯು ಅತ್ಯಂತ ಆವಶ್ಯಕವಾಗಿದೆ ಆದ್ದರಿಂದ ಧರ್ಮವೆಂದು ತಿಳಿದು ಕೊಂಡು ಅದರ ರಕ್ಷಣೆಗಾಗಿ ಸಮಯ ಕೊಡುವುದು ಆವಶ್ಯಕವಾಗಿದೆ. ಹಿಂದೂಗಳಲ್ಲಿನ ಸಂಕುಚಿತ ಮನೋಭಾವ ಮತ್ತು ಸ್ವಾರ್ಥದಿಂದಾಗಿ ಧರ್ಮದ ಕಡೆಗೆ ದುರ್ಲಕ್ಷವಾಯಿತು. (ನಿರ್ಲಕ್ಷಿಸಲಾಗುತ್ತಿದೆ) ಅದರ ಪರಿಣಾಮವಾಗಿ ಭಾರತವು ೧ ಸಾವಿರ ವರ್ಷಗಳವರೆಗೆ ಪರಾಧೀನ ವಾಗಿತ್ತು. ‘ಧರ್ಮ ಏವ ಹತೋ ಹನ್ತೀ, ಧರ್ಮೋ ರಕ್ಷತೀ ರಕ್ಷಿತ: | ಈ ಸಂಸ್ಕೃತ ಸುಭಾಷಿತದ ಅರ್ಥವು ಹೀಗಿದೆ, ‘ಧರ್ಮದ ನಾಶವನ್ನು ಮಾಡುವವರನ್ನು ಧರ್ಮವೇ ನಾಶ ಮಾಡುತ್ತದೆ ಮತ್ತು ಧರ್ಮದ ರಕ್ಷಣೆಯನ್ನು ಮಾಡುವವರನ್ನು ಸ್ವತಃ ಧರ್ಮವೇ ರಕ್ಷಿಸುತ್ತದೆ, ಅದಕ್ಕಾಗಿ ಧರ್ಮರಕ್ಷಣೆಯ ಆವಶ್ಯಕವಿದೆ.
ಪ್ರಸ್ತುತ ಯುಗವು ಬಂಡವಾಳ ಹೂಡುವಯುಗವಾಗಿದೆ. ‘ಯಾವುದರಲ್ಲಿ ಬಂಡವಾಳ ಹೂಡಿದರೆ ಏನು ಲಾಭವಾಗುತ್ತದೆ ? ಎಂದು ಯೋಚಿಸುತ್ತಾ ಪ್ರತಿ ಯೊಬ್ಬರೂ ಭವಿಷ್ಯದ ಕನಸು ಕಾಣುತ್ತಾರೆ. ಈಗ ಧರ್ಮಕಾರ್ಯಕ್ಕಾಗಿ ಸಮಯದ ಬಂಡವಾಳ ವನ್ನು ಹೂಡಿದರೆ ಮುಂದಿನ ಭೀಕರ ಆಪತ್ಕಾಲದಲ್ಲಿ ಧರ್ಮವೇ ರಕ್ಷಣೆ ಮಾಡುವುದು. ಹಿಂದೂ ಧರ್ಮಕ್ಕಾಗಿ ಅನುಕೂಲಕರ ವಾದ ವಿಷಯಗಳು ಘಟಿಸುತ್ತಿವೆ. ಈ ಸಮಯವು ಅನುಕೂಲಕರವಾಗಿದೆ. ಇದರಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಪ್ರಯತ್ನಿಸಬೇಕು. ಅಕ್ಷಯ ಸಮಾಧಾನವನ್ನು ಕೇವಲ ಧರ್ಮವೇ ನೀಡಬಲ್ಲದು. ಧರ್ಮ ಕಾರ್ಯಕ್ಕಾಗಿ ತನು, ಮನ ಮತ್ತು ಧನ ಇವುಗಳ ದಾನವನ್ನು ನಮಗೆ ಎಷ್ಟು ಸಾಧ್ಯವಾಗುತ್ತದೆಯೋ, ಅಷ್ಟು ಮಾಡೋಣ. ತ್ಯಾಗದ ಮೇಲೆ ಆಧಾರವಾಗಿರುವ ಭಾರತೀಯ ಸಂಸ್ಕೃತಿಯ ವ್ರತವನ್ನು ಅಂಗೀಕರಿಸೋಣ ಮತ್ತು ಅಕ್ಷಯ ತದಿಗೆಯಂದು ಧರ್ಮಕ್ಕಾಗಿ ಕೊಡುಗೆ ನೀಡುವ ಸಂಕಲ್ಪವನ್ನು ಮಾಡೋಣ !
ಸಂಕಲನಕಾರರು : ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ, ಪನವೇಲ. (೨೪.೪.೨೦೨೨)