‘ಯುಗಾದಿಯೆಂದರೆ, ಬ್ರಹ್ಮಾಂಡ ನಿರ್ಮಾಣದ ದಿನ ! ಋಷಿಮುನಿಗಳು ‘ಕಲ್ಪ, ಮನ್ವಂತರ, ಯುಗ, ಸಂವತ್ಸರ, ಋತು, ಮಾಸ, ಪಕ್ಷ, ವಾರ, ತಿಥಿ, ಮುಹೂರ್ತ, ಘಟಿಕಾ, ವಿಘಟಿ, ಪರಮಾಣು’, ಹೀಗೆ ಬ್ರಹ್ಮಾಂಡದ ಕಾಲಗಣನೆಯನ್ನು ಹೇಳಿದ್ದಾರೆ. ಯುಗಾದಿಯಂದು ‘ಶುಭಕೃತ್, ಸಂವತ್ಸರ ಮುಗಿದು ‘ಶೋಭಕೃತ ಸಂವತ್ಸರ ಆರಂಭವಾಗಿದೆ. ಶುಭಕೃತ್ ಸಂವತ್ಸರದಲ್ಲಿ (೨.೪.೨೦೨೨ ರಿಂದ ೨೧.೩.೨೦೨೩ ಈ ಅವಧಿಯಲ್ಲಿ) ಸಾಧಕರು ಕೌಟುಂಬಿಕ, ಸಾಮಾಜಿಕ, ವ್ಯಾವಸಾಯಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ‘ಈಗ ಆರಂಭವಾಗುವ ಶೋಭಕೃತ ಸಂವತ್ಸರದಲ್ಲಿ ಗುರುಭಕ್ತಿಯನ್ನು ಹೆಚ್ಚಿಸಲು ಏನು ಪ್ರಯತ್ನ ಮಾಡಬಹುದು ?’, ಎಂಬುದನ್ನು ನಾವು ನೋಡೋಣ.
೧. ‘ಶೋಭಕೃತ್ ಸಂವತ್ಸರದಲ್ಲಿ ಅನೇಕ ಸಾಧಕರಿಗೆ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು
‘ಕಾಳಗತೀಪುಢೆ ಬುದ್ಧಿ ಕಾಯ ಕರೀ ?’, (ಕಾಲಗತಿಯ ಎದುರಿಗೆ ಬುದ್ಧಿ ಏನು ಮಾಡಲು ಸಾಧ್ಯ) ಎಂದು ಪ.ಪೂ. ಭಕ್ತರಾಜ ಮಹಾರಾಜರ ಒಂದು ಭಜನೆ ಇದೆ. ಇದನ್ನು ಅನೇಕ ಸಾಧಕರು ‘ಶುಭಕೃತ್ ಸಂವತ್ಸರದಲ್ಲಿ ಪ್ರತ್ಯಕ್ಷ ಅನುಭವಿಸಿದರು. ‘ಗುರುದೇವರು ಸಾಕ್ಷಾತ್ ಶ್ರೀಮನ್ನಾರಾಯಣ ಆಗಿದ್ದಾರೆ’, ಎಂಬುದು ತಿಳಿದಿದ್ದರೂ ಶುಭಕೃತ್ ಸಂವತ್ಸರದಲ್ಲಿ ಅನೇಕ ಸಾಧಕರ ಮಾಯೆಯ ಕಡೆಗಿನ ಒಲವು ಹೆಚ್ಚಾಯಿತು. ಶುಭಕೃತ್ ಸಂವತ್ಸರವು ಸಾಧಕರಿಗೆ ಪರೀಕ್ಷೆಯ ‘ಕಾಲ’ವಾಗಿತ್ತು’, ಎಂದೇ ಹೇಳಬಹುದು. ಕೆಲವು ಸಾಧಕರ ಕೌಟುಂಬಿಕ ಸಮಸ್ಯೆ ಹೆಚ್ಚಾದ ಕಾರಣ ಅವರಿಗೆ ಪೂರ್ಣವೇಳೆ ಸೇವೆಯನ್ನು ಬಿಟ್ಟು ನೌಕರಿ ಮಾಡಬೇಕಾಯಿತು, ಕೆಲವು ಸಾಧಕರಿಗೆ ಮನೆಯ ಸಮಸ್ಯೆ ಹೆಚ್ಚಾದ ಕಾರಣ ಅವರು ಪೂರ್ಣವೇಳೆ ಸೇವೆಯನ್ನು ಬಿಟ್ಟು ಮನೆಗೆ ಹೋಗಬೇಕಾಯಿತು. ಕೆಲವರಿಗೆ ಆರ್ಥಿಕ ಅಡಚಣೆ ಯುಂಟಾಯಿತು. ಕೆಲವರಿಗೆ ಶಾರೀರಿಕ ತೊಂದರೆ ಹೆಚ್ಚಾಯಿತು.
ಇವೆಲ್ಲವೂ ನಡೆಯುತ್ತಿರುವಾಗ ಸಾಧಕರಿಗೆ ಮಾನಸಿಕ ತೊಂದರೆ, ದ್ವಂದ್ವ ಮನಃಸ್ಥಿತಿ ಹಾಗೂ ಪರಿವಾರದವರಿಂದ ಕುಚೋದ್ಯದ ಮಾತುಗಳನ್ನು ಎದುರಿಸಬೇಕಾಯಿತು. ವಿವಾಹವಾಗುವ ವಿಚಾರ ಇಲ್ಲದಿದ್ದರೂ ಕೆಲವು ಸಾಧಕರ ಮನಸ್ಸಿನಲ್ಲಿ ವಿವಾಹದ ವಿಚಾರ ಬರಲು ಆರಂಭವಾಗಿತ್ತು. ಅವರ ಮನಸ್ಸಿನಲ್ಲಿನ ಮಾಯೆಗೆ ಸಂಬಂಧಿಸಿದ ವಿಚಾರಗಳ ಪ್ರಮಾಣ ಹೆಚ್ಚಾಯಿತು ಹಾಗೂ ‘ಮಾಯೆ’ ಪ್ರಬಲವಾಯಿತು.
೨. ಕಾಲಗತಿಗನುಸಾರ ಯುಧಿಷ್ಠಿರನಿಗೆ ಜೂಜಾಡುವ ಬುದ್ಧಿ ಬರುವುದು ಹಾಗೂ ಅನಂತರ ಮಹಾಭಾರತದ ಯುದ್ಧವಾಗುವುದು ನಾರಾಯಣ ಉಪನಿಷತ್ತಿನಲ್ಲಿ ‘ಕಾಲಶ್ಚ ನಾರಾಯಣಃ |’,
ಅಂದರೆ ‘ಕಾಲವೇ ಶ್ರೀಮನ್ನಾರಾಯಣ ಆಗಿದ್ದಾನೆ’, ಎಂದು ಹೇಳಲಾಗಿದೆ. ಶ್ರೀಕೃಷ್ಣಾವತಾರ ತಾಳುವ ಮೊದಲೇ ಶ್ರೀಮನ್ನಾರಾಯಣ ದ್ವಾಪರಯುಗ ಹಾಗೂ ಕಲಿಯುಗವನ್ನು ಕರೆದು ಹೇಳುತ್ತಾರೆ, “ಈಗ ದ್ವಾಪರಯುಗ ಮುಗಿದು ಕಲಿಯುಗ ಆರಂಭವಾಗುವ ಸಮಯ ಬಂದಿದೆ. ಆದ್ದರಿಂದ ಹೇ ದ್ವಾಪರಾ, ನೀನು ನನ್ನ ಶ್ರೀಕೃಷ್ಣಾವತಾರದ ಸಂದರ್ಭದಲ್ಲಿ ಶಕುನಿಯ ರೂಪದಲ್ಲಿ ಬಾ, ಹೇ ಕಲಿ ನೀನು ದುರ್ಯೋಧನನ ರೂಪದಲ್ಲಿ ಬಾ.” ‘ಶ್ರೀಕೃಷ್ಣನು ಭಗವಂತನಾಗಿದ್ದಾನೆ’, ಎಂಬುದು ತಿಳಿದಿದ್ದರೂ ಪಾಂಡವರು ಜೂಜಾಡುವಾಗ ಎಲ್ಲವನ್ನೂ ಮರೆಯುತ್ತಾರೆ. ಅವರು ಶಕುನಿಯ ‘ಶಕುನಿ’ ವಿದ್ಯೆಗೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಧರ್ಮದ ಅವತಾರವಾಗಿರುವ ಯುಧಿಷ್ಠಿರನಿಗೆ ಜೂಜಾಡುವ ಹಾಗೂ ಎಲ್ಲವನ್ನೂ ಪಣಕ್ಕಿಡುವ ಬುದ್ಧಿ ಉಂಟಾಗುತ್ತದೆ. ಆದ್ದರಿಂದ ಅವನಿಗೆ ಕೊನೆಗೆ ೧೨ ವರ್ಷ ವನವಾಸಕ್ಕೆ ಹೋಗಬೇಕಾಯಿತು. ವನವಾಸದ ನಂತರ ಪಾಂಡವರಿಗೆ ಭೂಮಿ ನೀಡಲು ಕಲಿಪುರುಷ ದುರ್ಯೋಧನನು ನಿರಾಕರಿಸಿದಾಗ ಕೊನೆಗೆ ಕೌರವ ಪಾಂಡವರ ನಡುವೆ ಮಹಾಭಾರತಯುದ್ಧ ನಡೆಯುತ್ತದೆ. ಮಹಾಭಾರತದ ಯುದ್ಧ ಮುಗಿದು ಕೆಲವು ವರ್ಷಗಳ ನಂತರ ಶ್ರೀಕೃಷ್ಣಾವತಾರ ಮುಗಿಯುತ್ತದೆ ಹಾಗೂ ಕಲಿಯುಗವು ಆರಂಭವಾಗುತ್ತದೆ.
೩. ‘ಕಾಲಾತೀತರಾದ ಗುರುಗಳ ಚರಣಗಳಲ್ಲಿರುವುದೇ’, ಕಾಲಮಹಿಮೆಯ ಮೇಲಿನ ಉಪಾಯವಾಗಿದೆ
ಭಗವಂತನ ಅವತಾರ ಕಾಲಾತೀತವಾಗಿರುತ್ತದೆ; ಏಕೆಂದರೆ ಕಾಲವು ಅವನ ಅಧೀನದಲ್ಲಿರುತ್ತದೆ. ಕಾಲಮಹಿಮೆಯನ್ನು ವಿರೋಧಿಸಲು ಸಾಧ್ಯವಿಲ್ಲ. ಕಾಲಮಹಿಮೆಯನ್ನು ವಿರೋಧಿಸುವ ಬದಲು ‘ಕಾಲಾತೀತ ಗುರುಗಳ ಚರಣಗಳಲ್ಲಿ ಶರಣಾಗುವುದೇ’, ಕಾಲಗತಿಯ ಮೇಲಿನ ಉಪಾಯವಾಗಿದೆ. ಕಾಲವು ಜಡ ವಾಗಿರುತ್ತದೆ. ಕಾಲದ ಪರದೆ ಕಪ್ಪು ಮೋಡಗಳ ಹಾಗಿರುತ್ತದೆ. ಭಗವಂತ ಮೋಡಗಳ ಮೇಲಿರುವ ಆಕಾಶದಂತೆ ಇರುತ್ತಾನೆ. ಹೇಗೆ ವಿಮಾನದಿಂದ ಪ್ರಯಾಣಿಸುವಾಗ ಮೋಡವು ದೂರ ಸರಿದ ನಂತರ ಆಕಾಶದಿಂದ ಸೃಷ್ಟಿ ಸ್ಪಷ್ಟವಾಗಿ ಕಾಣಿಸುತ್ತದೆಯೋ ಹಾಗೆ ಶ್ರೀ ಗುರುಗಳಿಗೆ ‘ಕಾಲ’ವು ಸ್ಪಷ್ಟವಾಗಿ ಕಾಣಿಸುತ್ತಾ ಇರುತ್ತದೆ. ಅವರಿಗೆ ಪರದೆ ಇರುವುದಿಲ್ಲ. ಶ್ರೀ ಗುರುಗಳು ಸರ್ವಜ್ಞರಾಗಿರುವುದರಿಂದ ಅವರಿಗೆ ಭೂತ, ವರ್ತಮಾನ ಹಾಗೂ ಭವಿಷ್ಯ ಈ ಮೂರೂ ಕಾಲಗಳ ಜ್ಞಾನವಿರುತ್ತದೆ.
ನಮ್ಮೆಲ್ಲ ಸಾಧಕರ ಸಾಧನೆಯ ನೌಕೆಯು ಕಾಲಪ್ರವಾಹದಲ್ಲಿ ಸಿಲುಕಿದೆ. ಆ ನೌಕೆಗೆ ದಿಕ್ಕು ತೋರಿಸುವ ದೀಪಸ್ತಂಭವೆಂದರೆ ಶ್ರೀ ಗುರುಗಳು ! ಈ ವಿಶ್ವದಲ್ಲಿ ಕೋಟಿಗಟ್ಟಲೆ ಜೀವಗಳಿಗೆ ‘ಗುರು’ ಎಂದರೆ ಯಾರು ? ಅವರ ಮಹಿಮೆ ಏನು ? ಅವರು ಏನು ಮಾಡುತ್ತಾರೆ ?’, ಎಂಬುದು ಕೂಡ ತಿಳಿದಿರುವುದಿಲ್ಲ. ಹೀಗಿರುವಾಗ ನಮ್ಮೆಲ್ಲ ಸಾಧಕರ ಭಾಗ್ಯವೆಂದರೆ, ನಮಗೆ ಸನಾತನದ ಮೂರು ಗುರುಗಳು (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ) ಲಭಿಸಿದ್ದಾರೆ. ಪಾಂಡವರು ಜೂಜಾಟದಲ್ಲಿ ಸೋತು ಹೋದರು; ಆದರೆ ಅವರಿಗೆ ಶ್ರೀಕೃಷ್ಣನ ಮೇಲೆ ಅಪಾರ ನಿಷ್ಠೆಯಿತ್ತು. ಕೊನೆಯವರೆಗೆ ಅವರು ಶ್ರೀಕೃಷ್ಣನ ಚರಣವನ್ನು ಬಿಡಲಿಲ್ಲ; ಆದ್ದರಿಂದ ಅವರಿಗೆ ಕಠಿಣ ಕಾಲವನ್ನು ಜಯಿಸಲು ಸಾಧ್ಯವಾಯಿತು.
ನಮ್ಮ ಭಾಗ್ಯ ಹೇಗಿದೆಯೆಂದರೆ, ಸಾಕ್ಷಾತ್ ಶ್ರೀಮನ್ನಾರಾಯಣನೇ ಗುರುದೇವರ ರೂಪದಲ್ಲಿ ಬಂದಿದ್ದಾರೆ; ಆದ್ದರಿಂದ ಕಾಲ ಮಹಿಮೆಯ ವಿರುದ್ಧ ಏಕೈಕ ಉಪಾಯವೆಂದರೆ ಕಾಲಾತೀತ ಗುರುಗಳ ಚರಣಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು.
೪. ಈಗ ಬಂದಿರುವ ನೂತನ ಶೋಭಕೃತ ಸಂವತ್ಸರವು ‘ಸಮರ್ಪಣಭಾವ’ ಮತ್ತು ‘ಶರಣಾಗತಭಾವ’ವನ್ನು ಹೆಚ್ಚಿಸುವ ವರ್ಷವಾಗಿದೆ !
ಕಳೆದ ವರ್ಷ ‘ಶ್ರದ್ಧೆ ಮತ್ತು ಸಹನೆ’ ಇವು ಸಾಧನೆಯ ಮಂತ್ರವಾಗಿದ್ದವು. ಈ ಮಂತ್ರವು ನಮಗೆ ಈ ಬಾರಿಯ ಸಂವತ್ಸರದಲ್ಲಿಯೂ ಅನ್ವಯವಾಗುತ್ತದೆ; ಆದರೆ ನೂತನ ಶೋಭಕೃತ ಸಂವತ್ಸರವು ಎಲ್ಲ ಸಾಧಕರಿಗೆ ‘ಸಮರ್ಪಣಭಾವ’ ಹಾಗೂ ‘ಶರಣಾಗತಭಾವ’ ಹೆಚ್ಚಿಸುವ ವರ್ಷವಾಗಿದೆ. ಭಗವಂತ ನಮ್ಮನ್ನು ಯಾವ ಕಾರ್ಯಕ್ಕಾಗಿ ಪೃಥ್ವಿಯ ಮೇಲೆ ತಂದಿದ್ದಾನೋ, ಅದೇ ರೀತಿ ಸನಾತನದ ಮೂರು ಗುರುಗಳ ಸಂಪರ್ಕಕ್ಕೆ ತಂದಿದ್ದಾನೆಯೋ, ಆ ಕಾರ್ಯವೆಂದರೆ, ‘ಹಿಂದೂ ರಾಷ್ಟ್ರ ಸ್ಥಾಪನೆ !’
ಸನಾತನದ ಮೂರು ಗುರುಗಳ ‘ಧರ್ಮಸಂಸ್ಥಾಪನೆ’ಯ ಕಾರ್ಯಕ್ಕಾಗಿ ಎಲ್ಲ ಸಾಧಕರು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ‘ಆ ಸಮರ್ಪಣೆಯನ್ನು ಉಳಿಸಿಕೊಳ್ಳುವುದು ಹಾಗೂ ಸನಾತನದ ಮೂರು ಗುರುಗಳಿಗೆ ಶರಣಾಗುವುದು’, ಇಷ್ಟೇ ನಾವು ಮಾಡಬೇಕಾಗಿದೆ. ಪ.ಪೂ. ಭಕ್ತರಾಜ ಮಹಾರಾಜರು ಯಾವಾಗಲೂ ಹೇಳುತ್ತಿದ್ದರು, “ನನ್ನಲ್ಲಿಗೆ ಯಾರು ಬರುತ್ತಾನೊ, ‘ಅವನು ಹಿಂದೆ ಏನು ಮಾಡಿದ್ದಾನೆ ?’, ಎಂಬುದನ್ನು ನಾನು ನೋಡುವುದಿಲ್ಲ. ‘ಅವನಿಂದ ಮುಂದೇನು ಮಾಡಿಸಿಕೊಳ್ಳಲಿಕ್ಕಿದೆ ?’ ಅಷ್ಟು ಮಾತ್ರ ನಾನು ನೋಡುತ್ತೇನೆ. ಅಂದರೆ ಶ್ರೀ ಗುರು ಸಾಧಕನ ಭೂತಕಾಲವನ್ನು ನೋಡುವುದಿಲ್ಲ. ಅವರು ಕೇವಲ ಅವನ ಭವಿಷ್ಯದ ವಿಚಾರ ಮಾಡುತ್ತಾರೆ ಹಾಗೂ ಅವನಿಂದ ಸಾಧನೆ ಮಾಡಿಸಿಕೊಳ್ಳುತ್ತಾರೆ.
೫. ಸನಾತನದ ಮೂರು ಗುರುಗಳ ಚರಣಗಳಲ್ಲಿ ಪ್ರಾರ್ಥನೆ !
ಸನಾತನದ ಮೂರೂ ಗುರುಗಳೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಚರಣ ಗಳಲ್ಲಿ ಪ್ರಾರ್ಥನೆಯೆಂದರೆ, ‘ನಮ್ಮೆಲ್ಲ ಸಾಧಕರಿಗೆ ಕಠಿಣ ಕಾಲಪ್ರವಾಹದಲ್ಲಿ ಸಾಧನೆಯ ಮಾರ್ಗವನ್ನು ತೋರಿಸಬೇಕು, ಗುರುಕೃಪೆ ಅಖಂಡವಾಗಿರಲು ನಮ್ಮಿಂದ ಅಖಂಡ ಸೇವೆ ಮಾಡಿಸಿಕೊಳ್ಳಬೇಕು. ‘ಮೂರು ಗುರುಗಳ ಸೇವೆಯೆ’, ನಮ್ಮ ಶ್ವಾಸವಾಗಿರಲಿ. ‘ಮೂರು ಗುರುಗಳ ಬಗ್ಗೆ ಸಮರ್ಪಣೆಯೆ’, ನಮ್ಮ ನಿತ್ಯ-ಜೀವನವಾಗಲಿ.
ಯುಗಾದಿಯ ಈ ಶುಭಮುಹೂರ್ತದಲ್ಲಿ ನಾವೆಲ್ಲ ಸಾಧಕರು ಸನಾತನದ ಮೂರೂ ಗುರುಗಳ ಚರಣಗಳಿಗೆ ಶರಣಾಗಿದ್ದೇವೆ. ‘ನಮ್ಮನ್ನು ನಿಮ್ಮ ಚರಣಗಳಲ್ಲಿಟ್ಟುಕೊಳ್ಳಿ, ಎಂದು ನಿಮ್ಮ ಚರಣಗಳಲ್ಲಿ ಪ್ರಾರ್ಥಿಸುತ್ತಿದ್ದೇವೆ.’
– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭), ದೆಹಲಿ (೧೨.೩.೨೦೨೩)