ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ ನಿರ್ಮಾಣ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸಂಸತ್ತಿನಲ್ಲಿ ಠರಾವ್ ಗೆ ಅನುಮೋದನೆ !

ಇಸ್ಲಾಮಾಬಾದ – ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ನದಿಯ ದಡದಲ್ಲಿರುವ ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ (ಕಾರಿಡಾರ್) ನಿರ್ಮಾಣಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸಂಸತ್ತಿನಲ್ಲಿ ಅನುಮೋದನೆ ದೊರೆಯಿತು. ಇದರಿಂದ ಭಾರತದಲ್ಲಿನ ಭಕ್ತರಿಗೆ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಹೋಗಲು ಸುಲಭವಾಗುವುದು. ಶಾರದಾ ಪೀಠಕ್ಕೆ ಹೋಗುವ ಸಚ್ಚಿತ ರಸ್ತೆಯು ೪೦ ಕಿಲೋಮೀಟರದಷ್ಟು ಇರಲಿದೆ. ಅದು ಕಾಶ್ಮೀರದ ಕುಪವಾಡ ಜಿಲ್ಲೆಯಿಂದ ಆರಂಭವಾಗುವುದು. ಶಾರದಾ ಪೀಠದ ಕಡೆಗೆ ಹೋಗಲು ಭಕ್ತರಿಗೆ ನಾರದ, ಸರಸ್ವತಿ ಮತ್ತು ನಾರಿಲ ಸರೋವರ ದಾಟಬೇಕಾಗುವುದು.
ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು ಕೆಲವು ದಿನಗಳ ಹಿಂದೆ ‘ಕರ್ತಾರಪುರ ಕಾರಿಡಾರ್’ ನಂತೆ ಶಾರದಾ ಮಾತೆಯ ಪೀಠಕ್ಕಾಗಿ ಕೂಡ ಕಾರೀಡಾರ ನಿರ್ಮಾಣ ಆಗಬೇಕು’, ಎಂದು ಹೇಳಿಕೆ ನೀಡಿದ್ದರು. ಈಗ ಪಾಕಿಸ್ತಾನ ವ್ಯಾಪಿತ ಕಾಶ್ಮೀರದಲ್ಲಿ ಸಂಸತ್ತಿನ ಈ ಠರಾವಿಗೆ ಅನುಮೋದನೆ ಸಿಕ್ಕಿದ ನಂತರ ‘ಶಾರದಾ ಉಳಿಸಿ ಸಮಿತಿ’ ಇದನ್ನು ಸ್ವಾಗತಿಸಿದೆ. ‘ಸುಸಜ್ಜಿತ ರಸ್ತೆ ಕಟ್ಟಲು ಒತ್ತಾಯಿಸುವದಕ್ಕಾಗಿ ಈ ಸಮಿತಿ ಅನೇಕ ವರ್ಷ ಹೋರಾಡಿದೆ. ಆದರೆ ಪ್ರಸ್ತುತ ಶಾರದಾ ಪೀಠ ದೇವಸ್ಥಾನದ ಶಿಥಿಲಾವಸ್ಥೆ ಆಗಿದೆ ಎಂದು ಹೇಳಿದರು.

ಪಾಕಿಸ್ತಾನದಿಂದ ಅಕ್ಷೇಪ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸಂಸತ್ತಿನಲ್ಲಿ ಈ ಪ್ರಸ್ತಾವ ಅನುಮೋದಿಸಿದ ಬಗ್ಗೆ ಪಾಕಿಸ್ತಾನ್ ಭಾರತದಲ್ಲಿನ ಮಾಜಿ ರಾಯಭಾರಿ ಅಬ್ದುಲ್ ಬಾಸಿತ ಇವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಶಾರದಾ ಉಳಿಸಿ ಸಮಿತಿಯ’ ಮುಖ್ಯಸ್ಥ ರವೀಂದ್ರ ಪಂಡಿತ ಇವರು ಬಾಸಿತ ಇವರ ಹೇಳಿಕೆ ಖಂಡಿಸಿದ್ದಾರೆ.