ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ವಿಜ್ಞಾನವು ಒಂದಾದರೂ ಕ್ಷೇತ್ರದಲ್ಲಿ ಧರ್ಮಶಾಸ್ತ್ರಕ್ಕಿಂತ ಮುಂದಿದೆಯೇ ?

ಎಲ್ಲಿ ಪ್ರತಿ ಕ್ಷೇತ್ರದಲ್ಲಿ ಸರ್ವೋಚ್ಚ ಜ್ಞಾನ ನೀಡುವ ಹಿಂದೂ ಧರ್ಮ ಮತ್ತು ಎಲ್ಲಿ ಶಿಶುವಿಹಾರದಂತೆ ಶಿಕ್ಷಣ ನೀಡುವ ಪಾಶ್ಚಾತ್ಯ ದೇಶ

ಎಲ್ಲ ಕ್ಷೇತ್ರಗಳಲ್ಲಿಯೂ ಇಂತಹ ಸ್ಥಿತಿ ಇದೆ. ಅದರ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ.

 ಖಗೋಲಶಾಸ್ತ್ರ

‘ವಿಜ್ಞಾನವು ಬೇರೆ ಬೇರೆ ಗ್ರಹ-ತಾರೆಗಳ ಆಕಾರ, ಭೂಮಿಯಿಂದ ಅವುಗಳ ದೂರ  ಮುಂತಾದ ವಿಷಯಗಳನ್ನು ತಿಳಿಸುತ್ತದೆ. ಆದರೆ, ಜ್ಯೋತಿಷ್ಯಶಾಸ್ತ್ರವು ಗ್ರಹ-ತಾರೆಗಳ ಪರಿಣಾಮ ಮತ್ತು ಪರಿಣಾಮ ಕೆಟ್ಟದಾಗುವುದಾದರೆ ಅವುಗಳಿಗೆ ಉಪಾಯ ಸಹ ತಿಳಿಸುತ್ತದೆ.

ವನಸ್ಪತಿ ಶಾಸ್ತ್ರ

‘ವಿಜ್ಞಾನವು ವನಸ್ಪತಿಗಳ ಕೇವಲ ಭೌತಿಕ ಮಾಹಿತಿ ತಿಳಿಸುತ್ತದೆ. ಆದರೆ ಅಧ್ಯಾತ್ಮ ಶಾಸ್ತ್ರ ಯಾವ ದೇವತೆಗೆ ಯಾವ ಪತ್ರೆ, ಹೂಗಳನ್ನು ಅರ್ಪಿಸಬೇಕು, ಈ ಮಾಹಿತಿಯನ್ನು ಕೂಡ ತಿಳಿಸುತ್ತದೆ

ವಾಸ್ತುಶಾಸ್ತ್ರ

(ಪರಿಣಾಮ, ಜ್ಯೋತಿಷ್ಯ, ಉಪಾಯ)

‘ವಾಸ್ತುವು ವ್ಯಕ್ತಿಯ ಮೇಲೆ ಹಗಲಿರುಳು ಪರಿಣಾಮ ಬೀರುತ್ತದೆ. ಇದನ್ನು ತಿಳಿದು ಕೊಳ್ಳದ ಕಾರಣ ಆಧುನಿಕ ವಾಸ್ತುಶಾಸ್ತ್ರಜ್ಞರು ಕೇವಲ ಗಾಳಿ, ಬೆಳಕು ಮತ್ತು ವಾಸ್ತುವು ಹೇಗೆ ಕಾಣಿಸುತ್ತದೆ, ಎಂಬುದರ ವಿಚಾರ ಮಾಡುತ್ತಾರೆ. ಆದರೆ, ಧರ್ಮದಲ್ಲಿ  ವಾಸ್ತುವಿನ ಕಾರಣ ತೊಂದರೆಯಾಗಬಾರದು ಮತ್ತು ಅದರಲ್ಲಿ ಸಾಧನೆ ಮಾಡಲು ಪೂರಕ ವಾತಾವರಣ ಸಿಗಬೇಕು ಎಂಬುದರ ವಿಚಾರ ಮಾಡಲಾಗುತ್ತದೆ ! (ಕ್ರಮಶಃ)

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ