ಕ್ರೈಸ್ತರಿಂದಾಗುತ್ತಿರುವ ಸಾಮೂಹಿಕ ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯ ನೀಡಿದ ತೀರ್ಪು !

ಜೋಸ ಪ್ರಕಾಶ ಜಾರ್ಜ ಮತ್ತು ಇತರ ೩೬ ಜನರ ವಿರುದ್ಧ ೧೫.೪.೨೦೨೨ ರಂದು ಮೋಸ, ಪಿತೂರಿ, ಎರಡು ಪಂಥಗಳ ನಡುವೆ ವೈಮನಸ್ಯವನ್ನು ಹುಟ್ಟಿಸುವುದು, ಹೊಡೆತ-ಥಳಿತ ಹಾಗೆಯೇ ‘ಉತ್ತರಪ್ರದೇಶ ಪ್ರೋಹಿಬಿಶನ ಆಫ್ ಅನ್‌ಲಾಫುಲ್ ಕನ್ವರ್ಜನ್ ಆಫ್ ರಿಲಿಜಿಯನ್ಸ ಆರ್ಡಿನೆನ್ಸ್ ೨೦೨೧ (ಉತ್ತರಪ್ರದೇಶ ಕಾನೂನುಬಾಹಿರ ಧರ್ಮಾಂತರ ಪ್ರತಿಪಬಂಧಕ ಕಾನೂನು) ಈ ಕಾನೂನಿನ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿತ್ತು. ಈ ದೂರನ್ನು ರದ್ದುಗೊಳಿಸಬೇಕೆಂದು ಸಂಬಂಧಪಟ್ಟವರು (ಜೋಸ ಪ್ರಕಾಶ ಜಾರ್ಜ ಮತ್ತು ಇತರ ೩೬ ಜನ) ಉತ್ತರಪ್ರದೇಶದ ಉಚ್ಚ ನ್ಯಾಯಾಲಯದ ಪ್ರಯಾಗರಾಜ ದ್ವಿಸದಸ್ಯ ವಿಭಾಗೀಯಪೀಠದಲ್ಲಿ ಅರ್ಜಿಯನ್ನು ದಾಖಲಿಸಿದ್ದರು. ಈ ಪ್ರಕರಣದ ಆಲಿಕೆಯ ನಂತರ ಉಚ್ಚ ನ್ಯಾಯಾಲಯವು ಅವರ ಅರ್ಜಿಯನ್ನು ರದ್ದುಗೊಳಿಸಿತು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಕ್ರೈಸ್ತರಿಂದಾಗುತ್ತಿರುವ ಸಾಮೂಹಿಕ ಮತಾಂತರದ ಪ್ರಕರಣದಲ್ಲಿನ ಅಪರಾಧಗಳನ್ನು ರದ್ದುಗೊಳಿಸುವಂತೆ ಉಚ್ಚ ನ್ಯಾಯಾಲಯದಲ್ಲಿ ಯಾಚಿಕೆ ದಾಖಲಿಸಿದ ಕ್ರೈಸ್ತ ಪ್ರಸಾರಕರು

‘ವಂಚನೆ ಮತ್ತು ಸುಳ್ಳು ಹೇಳಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದು, ಅದು ‘ಉತ್ತರಪ್ರದೇಶ ಕಾನೂನುಬಾಹಿರ ಮತಾಂತರ ಕಾನೂನಿನ ವಿರುದ್ಧವಾಗಿದೆ ಎಂದು ೧೪.೪.೨೦೨೨ ರಂದು ವಿಶ್ವ ಹಿಂದೂ ಪರಿಷತ್ತು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೆ ದೂರನ್ನು ನೀಡಿದ್ದರು. ಇದರೊಂದಿಗೆ ಮತಾಂತರವಾಗಿದ್ದ ಸಂತ್ರಸ್ತ ವೀರೇಂದ್ರನು ಸಹ ೧೫.೪.೨೦೨೨ ರಂದು ಪೊಲೀಸರಲ್ಲಿ ದೂರು ದಾಖಲಿಸಿದನು. ಇವರಿಬ್ಬರ ದೂರಿನ ಮೇಲೆ ೨ ಪ್ರತ್ಯೇಕ  ಅಪರಾಧಗಳನ್ನು ದಾಖಲಿಸಿಕೊಳ್ಳಲಾಯಿತು.

ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಕಲಂ ೧೫೪ ಮತ್ತು ೧೫೮ ರ ಆಧಾರವನ್ನು ಪಡೆದು ಯಾಚಿಕೆದಾರರು ಉತ್ತರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಯುಕ್ತಿವಾದವನ್ನು ಮಾಡಿದರು. ವರ್ಷ ‘೨೦೦೧ ರಲ್ಲಿ ಸರ್ವೋಚ್ಚ ನ್ಯಾಯಾಲಯ ‘ಟಿ.ಟಿ. ಆಂಥೊನಿ ಎಂಬ ಪ್ರಕರಣದಲ್ಲಿ ಒಂದೇ ಕಾರಣ ಮತ್ತು ಒಂದೇ ಪ್ರಸಂಗಕ್ಕಾಗಿ ಮತ್ತು ಒಂದೇ ‘ಕಾಸ್ ಆಫ್ ಎಕ್ಷನ್ ಗಾಗಿ (ದೂರಿನ ಕಾರಣದಿಂದ) ಒಂದಕ್ಕಿಂತ ಹೆಚ್ಚು ಕ್ರಿಮಿನಲ್ ದೂರುಗಳನ್ನು ದಾಖಲಿಸಿಕೊಳ್ಳಬಾರದು ಎಂದು ಹೇಳಿದೆ. ಅದರಂತೆ ಮೋಸದಿಂದ ಮತಾಂತರಗೊಳಿಸಿರುವ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ನೀಡಿದ ದೂರನ್ನು ಮೊದಲೇ ದಾಖಲಿಸಿಕೊಂಡಿರುವಾಗ, ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಸಂತ್ರಸ್ತ ವ್ಯಕ್ತಿಯ ದೂರಿನ ಮೇಲೆ ಕ್ರಿಮಿನಲ್ ದೂರನ್ನು ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದುದರಿಂದ ನ್ಯಾಯಾಲಯವು ಈ ದೂರನ್ನು ರದ್ದುಗೊಳಿಸಬೇಕು ಎಂದು ದೂರುದಾರರು ವಾದಿಸಿದರು.

೨. ಕ್ರೈಸ್ತ ಪ್ರಸಾರಕರ ಯುಕ್ತಿವಾದಕ್ಕೆ ಉತ್ತರಪ್ರದೇಶ ಸರಕಾರದ ಪ್ರತಿವಾದ

ಕ್ರೈಸ್ತ ಪ್ರಸಾರಕರ ಯುಕ್ತಿವಾದಕ್ಕೆ ಪ್ರತಿವಾದ ಮಾಡುವಾಗ ಉತ್ತರಪ್ರದೇಶ ಸರಕಾರದ ಅಪರ ನ್ಯಾಯವಾದಿಗಳು, “ಉತ್ತರಪ್ರದೇಶ ಅನಧಿಕೃತ ಮತಾಂತರ ನಿರ್ಬಂಧ ಕಾನೂನು ೨೦೨೧ರ ಕಲಂ ೪ ಕ್ಕನುಸಾರ ದೂರುದಾರನು ಸಂತ್ರಸ್ತ ಅಥವಾ ಅವನ ಕುಟುಂಬದ ಅಥವಾ ರಕ್ತಸಂಬಂಧಿ ವ್ಯಕ್ತಿಯಾಗಿದ್ದರೆ ಮಾತ್ರ ಅವನು ದಾಖಲಿಸಿರುವ ದೂರನ್ನು ಒಪ್ಪಿಕೊಳ್ಳಲಾಗುತ್ತದೆ. ಈ ಪ್ರಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮೋಸಗೊಳಿಸಿ ಬಲವಂತವಾಗಿ ಮತಾಂತರವಾಗುತ್ತಿರುವ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ದಾಖಲಿಸಿರುವ ಪ್ರಥಮ ಮಾಹಿತಿ ವರದಿಯ (ಎಫ್.ಐ.ಆರ್.) ಕಾನೂನಿಗನುಸಾರ ಅಪರಾಧವಾಗುವುದಿಲ್ಲ. ಆದುದರಿಂದ ಅವರ ತನಿಖೆಯ ಮೇಲೆ ಮುಂದಿನ ಪ್ರಕ್ರಿಯೆ ಮಾಡುವ ಆವಶ್ಯಕತೆಯಿಲ್ಲ ಎಂದು ಹೇಳಿದರು. ಈ ಪ್ರತಿವಾದವನ್ನು ಉಚ್ಚ ನ್ಯಾಯಾಲಯ ಸ್ವೀಕರಿಸಿತು.

೩. ಕ್ರೈಸ್ತ ಪ್ರಚಾರಕರ ಯಾಚಿಕೆಯನ್ನು ತಿರಸ್ಕರಿಸಿದ ಉತ್ತರಪ್ರದೇಶ ಉಚ್ಚ ನ್ಯಾಯಾಲಯ

ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ದಾಖಲಿಸಿದ್ದ ದೂರಿನಿಂದ ಪೊಲೀಸರು ನೋಂದಾಯಿಸಿದ ಅಪರಾಧವು ಕಾನೂನಿಗನ್ವಯ ಅಪರಾಧವಲ್ಲ ಎಂದು ಪರಿಗಣಿಸಲ್ಪಟ್ಟಿದೆ ಎಂಬ ಒಂದೇ ಕಾರಣಕ್ಕಾಗಿ ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಲು ಬರುವುದಿಲ್ಲ. ಉತ್ತರ ಪ್ರದೇಶ ಉಚ್ಚ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ‘ಟಿ.ಟಿ. ಅಂಥೋನಿ ಪ್ರಕರಣದ ತೀರ್ಪು ಮತ್ತು ಸಂತ್ರಸ್ತನು ದಾಖಲಿಸಿದ್ದ ದೂರಿಗನುಸಾರ ಪೊಲೀಸರು ದಾಖಲಿಸಿಕೊಂಡ ಅಪರಾಧವನ್ನು ನೊಂದಾಯಿಸಿಕೊಂಡಿತು. ನ್ಯಾಯಾಲಯದಲ್ಲಿನ ಎಲ್ಲ ಯುಕ್ತಿವಾದಗಳ ವಿಚಾರ ಮಾಡಿ ಉಚ್ಚ ನ್ಯಾಯಾಲಯವು ಜೋಸ ಪ್ರಕಾಶ ಜಾರ್ಜ ಮತ್ತು ಇತರ ಕ್ರೈಸ್ತರ ವಿರುದ್ಧ ದಾಖಲಿಸಿದ್ದ ದೂರನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿತು.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಎಲ್ಲಕ್ಕಿಂತ ಮೊದಲು ಕಾನೂನು, ನಂತರ ಅದರ ಅರ್ಥ ಮತ್ತು ಉದ್ದೇಶವನ್ನು ಅರಿತುಕೊಳ್ಳುವುದು, ಇದು ನ್ಯಾಯವಾದಿಗಳ ಕೆಲಸವಾಗಿದೆ. ಹಾಗೆಯೇ ಅದನ್ನು ಯೋಗ್ಯ ಪದ್ಧತಿಯಿಂದ ನ್ಯಾಯಾಲಯದ ಗಮನಕ್ಕೆ ತಂದುಕೊಡುವುದು, ಇದು ಅವರ ಜವಾಬ್ದಾರಿಯಾಗಿದೆ. ಈ ಪ್ರಕರಣದಲ್ಲಿ  ಉತ್ತರಪ್ರದೇಶ ಸರಕಾರ ಮತ್ತು ಅಪರ ನ್ಯಾಯವಾದಿಗಳು ಚೆನ್ನಾಗಿ ಕರ್ತವ್ಯವನ್ನು ನಿರ್ವಹಿಸಿದರು. ಈ ಪ್ರಕರಣದಲ್ಲಿ  ಉಚ್ಚ ನ್ಯಾಯಾಲಯವು ಯಾವ ವಿಚಾರಗಳನ್ನು ಇಂಟರಪ್ರೀಟೇಶನ (ವ್ಯಾಖ್ಯೆ) ಮಾಡಿತೋ ಅದು ಕೂಡ ತುಂಬಾ ಒಳ್ಳೆಯ ವಿಚಾರವಾಗಿದೆ. ಅವರು ಅವರ ‘ಯೋಗ್ಯ-ಅಯೋಗ್ಯವನ್ನು ನಿರ್ಧರಿಸುವ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿದರು ಮತ್ತು ದೂರನ್ನು ವಜಾಗೊಳಿಸಿದರು.

೪. ಹಿಂದೂಗಳ ಪಕ್ಷದಲ್ಲಿ ಹೋರಾಡುವ ನ್ಯಾಯವಾದಿಗಳ ಸಮಯಸೂಚಕತೆ ಮತ್ತು ಜವಾಬ್ದಾರಿಯುತ ಕೃತಿ

ನ್ಯಾಯವಾದಿಯು ತನ್ನ ಪಕ್ಷಕಾರನಿಗಾಗಿ ಸಂತ್ರಸ್ತ ವೀರೇಂದ್ರನ ಮೇಲೆ ಹೇರಿದ್ದ ಕ್ರಿಮಿನಲ್ ಅಪರಾಧವನ್ನು  ರದ್ದು ಗೊಳಿಸಿಕೊಳ್ಳುತ್ತಿದ್ದರೆ ಮತ್ತು ಕಲಂ ೪ ರಂತೆ ವಿಶ್ವ ಹಿಂದೂ ಪರಿಷತ್ತಿನ ಜನರು ದೂರು ದಾಖಲಿಸಿದ್ದು ಕಾನೂನುಬಾಹಿರವಾಗುತ್ತಿತ್ತು. ಇದರಿಂದ ಕಾಲಾಂತರದಲ್ಲಿ ಆ ಅಪರಾಧವೂ ಬೇರೆ ಯಾಚಿಕೆಗಳ ಪ್ರಕರಣದಲ್ಲಿಯೂ ವಜಾಗೊಳ್ಳುತ್ತಿತ್ತು.ಆದುದರಿಂದ ಈ ಪ್ರಕರಣದಲ್ಲಿ ಸಮಯಸೂಚಕತೆ ಮತ್ತು ಕಾನೂನಿನ ಸರಿಯಾದ ಅರ್ಥವನ್ನು ಮಾಡಿಕೊಳ್ಳುವ ವಿಷಯವನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸಲಾಯಿತು. ಇದು ದೇವರ ಕೃಪೆಯೆಂದೇ ಹೇಳಬೇಕಾಗುವುದು. ಇಂತಹ ಪ್ರಕರಣಗಳಲ್ಲಿ ಹಿಂದೂಗಳಿಗಾಗಿ ಹೋರಾಡುವ ಒಳ್ಳೆಯ ನ್ಯಾಯವಾದಿಗಳು ಯೋಗ್ಯ ರೀತಿಯಲ್ಲಿ ಹೇಗೆ ಸಹಾಯ ಮಾಡಬಹುದು, ಎನ್ನುವುದಕ್ಕೆ ಇದೊಂದು ಉತ್ಕೃಷ್ಟ ಉದಾಹರಣೆಯಾಗಿದೆ.

ಶ್ರೀಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ(೨೬.೨.೨೦೨೩)