ನಾವು ಎಂದಿಗು ಪಾಕಿಸ್ತಾನದ ಜೊತೆಗೆ ವ್ಯಾಪಾರ ಸಂಬಂಧ ಮುರಿಯಲಿಲ್ಲ ! – ಭಾರತ

ಲಾಹೋರ – ನಾವು ಎಂದಿಗೂ ಪಾಕಿಸ್ತಾನದ ಜೊತೆಗೆ ವ್ಯಾಪಾರ ಸಂಬಂಧ ಮುರಿಯಲಿಲ್ಲ. ಇದರ ವಿರುಧ್ದ ಪಾಕಿಸ್ತಾನವೇ ಜಮ್ಮು-ಕಾಶ್ಮೀರದಲ್ಲಿನ ಕಮಳ ೩೭೦ ತಗೆದ ನಂತರ ಭಾರತದ ಜೊತೆ ವ್ಯಾಪಾರ ಸಂಬಂಧವನ್ನು ಮುರಿದಿದೆ, ಹೀಗೆ ಪಾಕಿಸ್ತಾನದಲ್ಲಿರುವ ಭಾರತದ ಉಚ್ಚಾಯುಕ್ತ ಸುರೇಶ ಕುಮಾರ ಇವರು ಹೇಳಿದ್ದಾರೆ. ಅವರು ಇಲ್ಲಿ ಮಾರ್ಚ ೧೭ ಈ ದಿನ ‘ಲಾಹೋರ್ ಚೇಂಬರ ಆಫ್ ಕಾಮರ್ಸ ಅಂಡ ಇಂಡಸ್ಟ್ರೀಸ್ ಇವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕುಮಾರ ಇವರು ಮಾತನ್ನು ಮುಂದುವರೆಸುತ್ತಾ, ಭಾರತವು ಪಾಕಿಸ್ತಾನದ ಜೊತೆ ಉತ್ತಮ ಸಂಬಂದವನ್ನೇ ಬಯಸುತ್ತದೆ; ಏಕೆಂದರೆ ನಾವು ನಮ್ಮ ಭೌಗೋಳಿಕತೆ ಬದಲಾಯಿಸಲು ಸಾಧ್ಯವಿಲ್ಲ. ಪಾಕಿಸ್ತಾನದ ಜೊತೆಯಲ್ಲಿ ವ್ಯಾಪಾರ ಸಂಬಂಧ ಸುಗಮವಾಗಿರಬೇಕು, ಹೀಗೆ ನಾವು ಬಯಸುತ್ತೇವೆ. ‘ನಾವು ಪರಿಸ್ಥಿತಿ ಮತ್ತು ಸಮಸ್ಯೆ ಹೇಗೆ ಸುಧಾರಿಸಲು ಸಾಧ್ಯವಾಗಿದೆ ?, ಎಂಬುದು ನೋಡಬೇಕಾಗಿದೆ. ಎಂದು ಕುಮಾರ ಅವರು ಹೇಳಿದರು. ‘ಲಾಹೋರ್ ಚೇಂಬರ ಆಫ್ ಕಾಮರ್ಸ ಅಂಡ ಇಂಡಸ್ಟ್ರೀಸ್ ನ ಅಧ್ಯಕ್ಷ ಕಾಶಿಫ ಅನ್ವರ ಇವರು, ‘ಎರಡು ದೇಶಗಳ ವ್ಯಪಾರ ಸಂಬಂಧ ಸುಗಮವಾಗಿರಲು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಮಟ್ಟದಲ್ಲಿ ಪ್ರಯತ್ನ ಮಾಡುವುದು ಅವಶ್ಯಕವಗಿದೆಯೆಂದು ಹೇಳಿದರು.