ಭಾರತಕ್ಕೆ ‘ಡೀಪ್‌ ಸ್ಟೇಟ್’ ಅಪಾಯದ ಕರೆಗಂಟೆ !

ಜಗತ್ತಿನಲ್ಲಿನ ಪ್ರತಿಯೊಂದು ದೇಶದ ಸರಕಾರ ಹಾಗೂ ಆ ದೇಶದ ಅರ್ಥವ್ಯವಸ್ಥೆಯನ್ನು ತನ್ನ ಮುಷ್ಟಿಯಲ್ಲಿಟ್ಟು ಕೊಳ್ಳಲು ಪ್ರಯತ್ನಿಸುವ ಪ್ರಭಾವಿ ಜನರ ಗುಂಪು, ಎಂದರೆ ‘ಡೀಪ್‌ ಸ್ಟೇಟ್’ ! ‘ಡೀಪ್‌ ಸ್ಟೇಟ್’ ಇದು ದೊಡ್ಡ ಅಪಾಯಕಾರಿ ವ್ಯವಸ್ಥೆಯಾಗಿದೆ. ಆದ್ದರಿಂದ ಪ್ರತಿಯೊಂದು ದೇಶವೂ ಇದರಿಂದ ಜಾಗರೂಕ ಮತ್ತು ಎಚ್ಚರದಿಂದಿರುವ ಅವಶ್ಯಕತೆಯಿದೆ. ಈ ಗುಂಪು ತನ್ನ ಹಿತ ಸಾಧಿಸಲು ಏನು ಬೇಕಾದರೂ ಮಾಡಬಹುದು. ಸರಕಾರವನ್ನು ಉರುಳಿಸಬಹುದು, ಗೃಹಯುದ್ಧ ಮಾಡಿಸಬಹುದು, ರಾಜಕೀಯ ಅಸ್ಥಿರತೆ ಸೃಷ್ಟಿಸಬಹುದು ಹಾಗೂ ಹಿಂಸಾಚಾರ ಅಥವಾ ಯುದ್ಧ ಮಾಡಿಸಬಹುದು. ತೆರೆಮರೆಯಲ್ಲಿದ್ದು ಜಗತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ‘ಡೀಪ್‌ ಸ್ಟೇಟ್‌’ನ ಜಾಲದಲ್ಲಿ ಸಿಲುಕದಂತೆ ತನ್ನನ್ನು ರಕ್ಷಿಸಿಕೊಳ್ಳುವುದು ಮತ್ತು ಸೂಕ್ಷ್ಮ ನಿಗಾ ಇಟ್ಟುಕೊಂಡು ಅದನ್ನೇ ಮುಷ್ಟಿಯಲ್ಲಿಟ್ಟುಕೊಳ್ಳುವುದೇ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ೨೬/೧೭ ನೇ ಸಂಚಿಕೆಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ‘ತನ್ನ ಪ್ರಭುತ್ವವನ್ನು ಕಾಪಾಡಲು ‘ಡೀಪ್‌ ಸ್ಟೇಟ್’ ಏನು ಮಾಡಬಹುದು ?, ನಿಜವಾಗಿಯೂ ‘ಡೀಪ್‌ ಸ್ಟೇಟ್‌’ಎಂದರೇನು ? ಅದರ ಕಾರ್ಯ ಹೇಗಿರುತ್ತದೆ ?  ಹಾಗೂ ‘ಡೀಪ್‌ ಸ್ಟೇಟ್‌’ನ ಪ್ರಾರಂಭ’ ಈ ವಿಷಯಗಳನ್ನು ಓದಿದ್ದೇವೆ. ಇಂದು ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.   

(ಭಾಗ ೨)

೫. ಅಮೇರಿಕಾದ ಆರ್ಥವ್ಯವಸ್ಥೆಯಲ್ಲಿಯೂ ‘ಡೀಪ್‌ ಸ್ಟೇಟ್‌’ನ ವ್ಯಾಪಕ ಹಸ್ತಕ್ಷೇಪ

ಅಮೇರಿಕಾದ ಅರ್ಥವ್ಯವಸ್ಥೆಯಲ್ಲಿಯೂ ‘ಡೀಪ್‌ ಸ್ಟೇಟ್‌’ನ ಹಸ್ತಕ್ಷೇಪವು ದೊಡ್ಡದಾಗಿದೆ ಮತ್ತು ವ್ಯಾಪಕ ಸ್ವರೂಪದ್ದಾಗಿರುತ್ತದೆ. ಬಿಲ್‌ ಗೇಟ್ಸ್ ಕಾಲದಲ್ಲಿ ಅಲ್ಲಿನ ಹಲವು ಬ್ಯಾಂಕ್‌ಗಳಲ್ಲಿ ‘ಡೀಪ್‌ ಸ್ಟೇಟ್’ ನೇರವಾಗಿ ಭಾಗಿಯಾಗಿತ್ತು. ಅಷ್ಟು ಅಲ್ಲದೇ, ಅಲ್ಲಿನ ಅರ್ಥವ್ಯವಸ್ಥೆಯನ್ನು ನಡೆಸುತ್ತಿತ್ತು. ದಕ್ಷಿಣ ಆಫ್ರಿಕಾ ಮತ್ತು ಯುರೋಪಿನ ರೈತರು ಅತ್ಯಂತ ಶ್ರೀಮಂತರಾಗಿರುತ್ತಾರೆ. ಪ್ರತಿಯೊಬ್ಬರಲ್ಲಿಯೂ ಹೆಚ್ಚುಕಡಿಮೆ ೫೦೦ ರಿಂದ ೧೦೦೦ ಎಕರೆ ಭೂಮಿ ಇರುತ್ತದೆ. ೫೦-೫೦ ಎಕರೆಯ ಒಂದು ಭೂಮಿ ಇರುತ್ತದೆ. ಒಂದು ಭೂಮಿಯಲ್ಲಿ ಗೋಧಿಯ ಕೃಷಿ, ಇನ್ನೊಂದು ಭೂಮಿಯಲ್ಲಿ ಇನ್ನೇನಾದರೂ ಕೃಷಿ ಮಾಡುತ್ತಾರೆ, ಇಷ್ಟು ದೊಡ್ಡ ಭೂಮಿಯಲ್ಲಿ ಕೃಷಿ ಮಾಡುವುದಿದ್ದರೆ, ಯಂತ್ರಗಳು ಬೇಕಾಗುತ್ತವೆ. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಉಕ್ಕು, ಪೆಟ್ರೋಲ್‌ ಮುಂತಾದ ಸಂಪನ್ಮೂಲಗಳು ಬೇಕಾಗುತ್ತವೆ. ಇದಕ್ಕಾಗಿ ಕಾರ್ಖಾನೆಗಳು ನಿರ್ಮಾಣವಾದರೆ, ಈ ಕಾರ್ಖಾನೆಗಳೂ ಕೂಡ ಬಂಡವಾಳಶಾಹಿ ಗಳದ್ದೇ ಆಗಿರುತ್ತದೆ.

೫ ಅ. ಜಗತ್ತಿನ ಮೇಲೆ ನಿಯಂತ್ರಣವನ್ನು ಸ್ಥಾಪಿಸಲು ಅಮೇರಿಕಾದ ‘ಡೀಪ್‌ ಸ್ಟೇಟ್‌’ನ ತೈಲ ರಾಜಕೀಯ : ಅಮೇರಿಕಾ ಎರಡನೇ ಮಹಾಯುದ್ಧದ ನಂತರ, ಸೌದಿ ಅರೇಬಿಯಾದ ರಾಜಮನೆತನ ಗಳಿಗೆ ‘ಹೌಸ್‌ ಆಫ್‌ ಸೌತ್’ ಎಂಬ ಬಿರುದನ್ನು ನೀಡಿತು. ಇದಲ್ಲದೆ, ಅವರಿಗೆ ಭದ್ರತೆಯ ಭರವಸೆ ನೀಡಿತು; ಏಕೆಂದರೆ ಈ ರಾಜಮನೆತನಗಳಿಗೆ ಸ್ಥಳೀಯರಿಂದ ಸಾಕಷ್ಟು ವಿರೋಧವಿತ್ತು. ವಿಶೇಷವಾಗಿ ಮುಸಲ್ಮಾನ ಮೌಲ್ವಿಗಳಿಂದ (ಇಸ್ಲಾಂನ ಧಾರ್ಮಿಕ ನಾಯಕರಿಂದ) ಕುವೈತ್, ಇರಾಕ್‌ ಮತ್ತು ಸೌದಿ ಅರೇಬಿಯಾದ ರಾಜಮಹಾರಾಜರಿಗೆ ವಿರೋಧವಿತ್ತು. ಇದರಿಂದ ಅವರ ಜೀವಕ್ಕೆ ಅಪಾಯವೂ ಇತ್ತು. ಇವರಿಂದ ರಕ್ಷಿಸಲು ಅಮೇರಿಕಾ ಈ ರಾಜರಿಗೆ ಅಭಯ ನೀಡಿತು. ಇದಕ್ಕೆ ಬದಲಿಯಾಗಿ ತೈಲದ ವ್ಯಾಪಾರವು ನಡೆಯುತ್ತಿತ್ತು, ಅದನ್ನು ಡಾಲರ್‌ನಲ್ಲಿ ನಡೆಸಲು ಸಿದ್ಧರಾದರು. ಅನಂತರ, ಇರಾಕ್‌ನಲ್ಲಿ ತೈಲ, ಪೆಟ್ರೋಲ್‌ ವ್ಯವಹಾರವು ಡಾಲರ್‌ಗಳಲ್ಲಿ ಪ್ರಾರಂಭವಾಯಿತು. ಇದರಿಂದ ಅಮೇರಿಕಾದ ಬಂಡವಾಳಶಾಹಿಗಳಿಗೆ ಲಾಭವಾಯಿತು. ಇತರ ದೇಶದ ಸಂಪನ್ಮೂಲಗಳನ್ನು ಬಳಸಿ ಅಮೇರಿಕಾ ಬಹಳಷ್ಟು ಹಣವನ್ನು ಗಳಿಸಿತು; ಏಕೆಂದರೆ ಅಮೇರಿಕಾ ಬ್ಯಾಂಕುಗಳು, ಹಣ, ಅಧಿಕಾರ ಮತ್ತು ಸರಕಾರ ಎಲ್ಲವೂ ತನ್ನ ಬಳಿಯೇ ಇರಬೇಕೆಂದು ಬಯಸುತ್ತವೆ. ಇದಕ್ಕಾಗಿ ಅವರು ಶಿಕ್ಷಣವ್ಯವಸ್ಥೆಯನ್ನು ಆ ರೀತಿ ರಚಿಸಿದರು. ಇದರಿಂದ ವಿಶೇಷ ‘ಥಿಂಕ್‌ ಟ್ಯಾಂಕ್’ (ವೈಚಾರಿಕ ಗುಂಪುಗಳು) ನಿರ್ಮಾಣವಾಯಿತು. ಅವರು ಜಗತ್ತಿನ ಮೇಲೆ ತಮ್ಮ ಅಧಿಕಾರವನ್ನು ಸ್ಥಾಪಿಸಲು ಉತ್ಸುಕರಾಗಿದ್ದರು. ಅಮೇರಿಕಾದ ರಾಷ್ಟ್ರಾಧ್ಯಕ್ಷರು ತಮ್ಮದೇ ಆದ ‘ಟೀಮ್’ (ಅವರ ಸ್ವಂತ ಸಲಹೆಗಾರರು ಅಥವಾ ತಜ್ಞರ ತಂಡ) ಅನ್ನು ಆಯ್ಕೆ ಮಾಡುತ್ತಾರೆ. ಇದರಿಂದ ಅಧ್ಯಕ್ಷರು ತಮ್ಮದೇ ಆದ ‘ಥಿಂಕ್‌ ಟೀಮ್’ (ತಜ್ಞರ ಸಮೂಹ) ಸಿದ್ಧಗೊಳಿಸುತ್ತಾರೆ; ಆದ್ದರಿಂದಲೇ ‘ಡೀಪ್‌ ಸ್ಟೇಟ್’ ಮೂಲಕ ಜಗತ್ತಿನ ವಿವಿಧ ದೇಶಗಳ ಮೇಲೆ ಅಥವಾ ರಾಜ್ಯದ ಆಡಳಿತದ ಮೇಲೆ ನಿಯಂತ್ರಣ ಸಾಧಿಸಬಹುದು. ಇದೇ ‘ಡೀಪ್‌ ಸ್ಟೇಟ್’ ಅಮೇರಿಕದ ಮಾಜಿ ಅಧ್ಯಕ್ಷ ಜಾನ್‌ ಕೆನಡಿಯನ್ನು ಹತ್ಯೆ ಮಾಡಿತ್ತು.

ಲೆಫ್ಟಿನೆಂಟ ಜನರಲ್‌ ವಿನೋದ ಖಂದಾರೆ (ನಿವೃತ್ತ)

ಏಕೆಂದರೆ ಅವರಿಗೆ ಆರ್ಥಿಕ ರಾಜಕಾರಣದಲ್ಲಿ ಅಧಿಕಾರ ಬೇಕಾಗಿರುತ್ತದೆ. ಉತ್ಪಾದನಾ ವಲಯದಲ್ಲಿ ವಿವಿಧ ಕಾರ್ಖಾನೆಗಳು ಪ್ರಾರಂಭವಾದವು. ‘ವಾರ್‌ ಇಂಡಸ್ಟ್ರಿ’ (ಶಸ್ತ್ರಾಸ್ತ್ರ ತಯಾರಿಕಾ ಉದ್ಯಮ) ಪ್ರಾರಂಭವಾಯಿತು. ಇಲ್ಲಿ ತಯಾರಿಸಲಾದ ಯುದ್ಧ ಟ್ಯಾಂಕ್‌ಗಳು, ಬಂದೂಕುಗಳು, ಬಾಂಬ್, ಗುಂಡುಗಳು ಇವುಗಳ ಮಾರಾಟವಾಗುವಂತೆ ಪರಿಸ್ಥಿತಿಯನ್ನು ಸೃಷ್ಟಿಸಲಾಯಿತು. ಒಂದು ದೇಶಕ್ಕೆ ಇನ್ನೊಂದು ದೇಶದಿಂದ ಬೆದರಿಕೆ ಇದೆ ಎಂಬ ಉದ್ದೇಶ ಪೂರ್ವಕವಾಗಿ ಭಯವನ್ನು ಸೃಷ್ಟಿಲಾಗುತ್ತದೆ. ಜಗತ್ತಿನಲ್ಲಿ ಯುದ್ಧವನ್ನು ಪ್ರಾರಂಭಿಸಿ, ಯುದ್ಧ ಟ್ಯಾಂಕ್‌ಗಳು ಮತ್ತು ಯುದ್ಧ ಸಾಮಗ್ರಿಗಳನ್ನು ಅವರು ಖರೀದಿಸಲೇ ಬೇಕಾಗುವಂತೆ ಮಾಡಲಾಗುತ್ತದೆ.

೫ ಆ. ‘ಡೀಪ್‌ ಸ್ಟೇಟ್‌’ನಿಂದ ವಿವಿಧ ದೇಶಗಳ ಮೇಲೆ ಯುದ್ಧದ ಕರಿನೆರಳು : ‘ರಷ್ಯಾದಿಂದಾಗಿ ಯುರೋಪಿಯನ್‌ ದೇಶಗಳ ಮೇಲೆ ದೊಡ್ಡ ಬಿಕ್ಕಟ್ಟು ಇದೆ’, ಎನ್ನುವ ಭಯವನ್ನು ಹಬ್ಬಿಸಲಾಯಿತು. ಇದರಿಂದಲೇ ‘ನಾರ್ಥ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಶನ್‌ (‘ನಾಟೊ’ – ಉತ್ತರ ಅಟ್ಲಾಂಟಿಕ ಒಪ್ಪಂದ ಸಂಘಟನೆ) ಉದಯವಾಯಿತು. ‘ನಾಟೊ’ವು ಯುರೋಪಿಯನ್‌ ರಾಷ್ಟ್ರಗಳಿಗೆ ಯುದ್ಧದಿಂದ ಭದ್ರತೆಯ ಖಾತರಿ ನೀಡಿತು. ಈ ಗುಂಪಿನಲ್ಲಿರುವ ಎಲ್ಲಾ ದೇಶಗಳಿಗೆ ‘ನಾಟೋ’ ವತಿಯಿಂದ ಭದ್ರತೆಯನ್ನು ಒದಗಿಸಲಾಗುತ್ತದೆ. ಈ ಕಾರಣದಿಂದಾಗಿ, ಈ ದೇಶಗಳ ಮೇಲೆ ಈಗಿನ ರಷ್ಯಾ ದಾಳಿ ಮಾಡಲು ಸಾಧ್ಯವಿಲ್ಲ. ಇದರ ಅಧಿಕ ಲಾಭವನ್ನು ಅಮೇರಿಕಾ ಪಡೆಯಿತು. ಆದರೂ ಬಂಡವಾಳಶಾಹಿಗಳು ಹಲವು ಬಾರಿ ಯುದ್ಧವನ್ನು ಪ್ರಾರಂಭಿಸಲು ಪ್ರಯತ್ನಿಸಿದರು; ಅದಕ್ಕಾಗಿಯೇ ವಿಯೆಟ್ನಾಂ, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮುಂತಾದ ಹಲವು ದೇಶಗಳಲ್ಲಿ ಯುದ್ಧ ಪ್ರಾರಂಭ ವಾಯಿತು. ‘ಡೀಪ್‌ ಸ್ಟೇಟ್’ ಕಾರಣದಿಂದಾಗಿ, ಮಧ್ಯ-ಪ್ರಾಚ್ಯ ದೇಶಗಳಲ್ಲಿಯೂ ಅನೇಕ ಯುದ್ಧಗಳು ನಡೆದಿವೆ. ಇದರಲ್ಲಿ ಯುರೋಪ್‌ ಮತ್ತು ಅಮೇರಿಕದ ಬಂಡವಾಳಶಾಹಿಗಳು ಮುಂಚೂಣಿಯಲ್ಲಿದ್ದರು. ದಕ್ಷಿಣ ಏಷ್ಯಾ ಸ್ವತಂತ್ರವಾದ ನಂತರ ಭಾರತದ ಬಳಿ ಹಣವಿರಲಿಲ್ಲ. ಜವಾಹರಲಾಲ್‌ ನೆಹರೂ ಅವರು ಸ್ವತಃ ವಿಚಾರ ಮಾಡಿ ಎಲ್ಲರಿಗೂ ಸಮಬಾಳು ಎಂಬ ನೀತಿಯನ್ನು ಅಳವಡಿಸಿಕೊಂಡರು. ಅವರೊಂದಿಗೆ ೪-೫ ದೇಶಗಳ ರಾಜರು ಇದ್ದರು. ಈ ಕಾರಣದಿಂದ ‘ಡೀಪ್‌ ಸ್ಟೇಟ್’ ಪುನಃ ಆ ದೇಶಗಳನ್ನು ಒಡೆಯಲು ಪ್ರಾರಂಭಿಸಿತು.

೬. ‘ಡೀಪ್‌ ಸ್ಟೇಟ್’ ಮತ್ತು ಭಾರತ

ಅಮೇರಿಕ ಪಾಕಿಸ್ತಾನಕ್ಕೆ ಯುದ್ಧಸಾಮಗ್ರಿಗಳನ್ನು ಪೂರೈಸಲು ಆರಂಭಿಸಿತು. ಪಾಕಿಸ್ತಾನಕ್ಕೆ ‘ನಾಟೋ’ದ ೨ ‘ಟ್ರೀಟಿ ಸೆಂಟೊ’ ಮತ್ತು ‘ಸಿಟೋ’ ಗುಂಪಿನಲ್ಲಿ ಸೇರಿಸಲಾಯಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ಅಮೇರಿಕದಿಂದ ಸಾಕಷ್ಟು ಹಣ ಸಿಕ್ಕಿತು. ಇದರ ಬದಲಿಗೆ ಅಮೇರಿಕಾ ಪಾಕಿಸ್ತಾನದಲ್ಲಿ ತನ್ನ ಮಿಲಿಟರಿ ನೆಲೆಯನ್ನು ಸ್ಥಾಪಿಸಿತು. ೧೯೬೫ ರ ಯುದ್ಧದಲ್ಲಿ ಪಾಕಿಸ್ತಾನವು ಅಮೇರಿಕದಿಂದ ಪಡೆದ ಯುದ್ಧ ವಿಮಾನಗಳಂತಹ ಯುದ್ಧ ಸಾಮಗ್ರಿಗಳನ್ನು ಭಾರತದ ವಿರುದ್ಧ ಬಳಸಿತು. ಆಗ ಭಾರತದ ಬಳಿ ಯಾವುದೇ ಆಧುನಿಕ ಯುದ್ಧ ಸಾಮಗ್ರಿಗಳು ಇರಲಿಲ್ಲ. ‘ಡೀಪ್‌ ಸ್ಟೇಟ್’ ಮೂಲಕ ಭಾರತವನ್ನು ನಿಯಂತ್ರಿಸಲು ಅಮೇರಿಕ ಯತ್ನಿಸುತ್ತಿತ್ತು. ಇದರಿಂದ ಭಾರತ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಬೇಕಾಯಿತು.

ಆಂಗ್ಲರು ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿದರು. ಆಂಗ್ಲದಲ್ಲಿ ಶಿಕ್ಷಣವು ಪ್ರಾರಂಭವಾಯಿತು. ಭಾರತೀಯರನ್ನು ಆಂಗ್ಲರ ಗುಲಾಮರನ್ನಾಗಿ ಮಾಡಲಾಯಿತು. ಗುಮಾಸ್ತ ವ್ಯವಸ್ಥೆ ಯನ್ನು ನಿರ್ಮಾಣ ಮಾಡಿದರು. ಆಂಗ್ಲ ಮಾಧ್ಯಮದಿಂದ ಶಿಕ್ಷಣ ಉತ್ತಮವಾಗಿರುತ್ತದೆ ಎಂದು ಬಲವಾದ ಪ್ರಚಾರ ಮಾಡಲಾಯಿತು. ಆಂಗ್ಲರಿಗೆ ಕಡಿಮೆ ಹಣಕ್ಕೆ ಒಳ್ಳೆಯ ಗುಮಾಸ್ತರು ಸಿಗಬೇಕು ಎಂದು ಈ ವ್ಯವಸ್ಥೆಯನ್ನು ರಚಿಸಲಾಯಿತು. ಮೊಗಲರು ರಾಜದರಬಾರಿನಲ್ಲಿ ಪಾರ್ಸಿ ಭಾಷೆಯನ್ನು ಜಾರಿಗೆ ತಂದಿದ್ದರು. ಕಾಲಾಂತರದಲ್ಲಿ ಆಂಗ್ಲ ಭಾಷೆಯು ವ್ಯವಹಾರದ ಭಾಷೆಯಾಯಿತು. ಇದು ಭಾರತದಲ್ಲಿ ೨ ವರ್ಗಗಳನ್ನು ರಚಿಸಿತು.

ಯಾರಿಗೆ ಆಂಗ್ಲ ಬರುತ್ತಿತ್ತೋ, ಅವರು ಕಾನೂನು ರಚಿಸಿದರು. ಅಧಿಕಾರವನ್ನು ಸ್ಥಾಪಿಸಿ ಅಧಿಕಾರದಲ್ಲಿ ಸಕ್ರಿಯವಾಗಿ ಭಾಗ ವಹಿಸಿದರು. ಇನ್ನೊಂದು ವರ್ಗದವರು ಗುಲಾಮರಾದರು. ಇದರಿಂದ ಬ್ರಿಟಿಷ್ ರು ದೇಶದಲ್ಲಿ ಆಡಳಿತದ ಮೇಲೆ ಹಿಡಿತವನ್ನು ಸಾಧಿಸಿದರು. ಜಾತಿಗಳ ಮೂಲಕ ಸಮಾಜದಲ್ಲಿ ವಿಷವನ್ನು ಬಿತ್ತಿದರು. ಕಾನ್ವೆಂಟ್‌ ಸಂಸ್ಕೃತಿಯಿಂದಾಗಿ ಭಾರತೀಯ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ಇಳಿಯಿತು. ಬ್ರಿಟಿಷರು ಬರುವ ಮೊದಲು ಭಾರತದಲ್ಲಿ ಗುರುಕುಲಗಳಿದ್ದವು. ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿತ್ತು. ಸಂಸ್ಕೃತ, ಯೋಗವಿದ್ಯೆ, ಆಯುರ್ವೇದ ಇವು ನಮ್ಮ ಶಕ್ತಿಸ್ಥಾನಗಳಾಗಿದ್ದವು, ಅದನ್ನು ಕ್ರಮೇಣ ಆಂಗ್ಲರು ನಾಶಗೊಳಿಸಿದರು. ‘ಡೀಪ್‌ ಸ್ಟೇಟ್’ ಭಾರತವನ್ನು ಪೊಳ್ಳು ಮಾಡಲು ಪ್ರಾರಂಭಿಸಿತು.

ಬ್ರಿಟಿಷರು ವ್ಯಾಪಾರಿಗಳೆಂದು ಬಂದು ಭಾರತವನ್ನು ಲೂಟಿ ಮಾಡಿ ಹೋದರು. ನಂತರ ಅವರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು. ರಾಜನಿಗೆ ಮಕ್ಕಳಿಲ್ಲದಿದ್ದರೆ, ಅವನ ರಾಜ್ಯವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಜನರಿಗೆ ಸತ್ಯವನ್ನು ತಲುಪದಂತೆ ಇತಿಹಾಸ ಪುಸ್ತಕಗಳಿಂದ ತಪ್ಪು ಮಾಹಿತಿ ಹರಡಲು ಪ್ರಾರಂಭಿಸಿದರು. ಇದರಿಂದ ಭಾರತೀಯರ ವಿಚಾರ ಪದ್ಧತಿ ಬದಲಾಯಿತು. ರಾಜಕೀಯವು ಯಾವಾಗ ಅರ್ಥವ್ಯವಸ್ಥೆ ನಿಯಂತ್ರಿಸಲು ಪ್ರಯತ್ನಿಸುವುದೋ, ಆಗ ರಾಷ್ಟ್ರೀಯ ಭದ್ರತೆ ಅಪಾಯಕ್ಕೆ ಒಳಗಾಗಲು ಪ್ರಾರಂಭವಾಗುತ್ತದೆ.

(ಮುಂದುವರಿಯುವುದು)

– ಲೆಫ್ಟಿನೆಂಟ ಜನರಲ್‌ ವಿನೋದ ಖಂದಾರೆ (ನಿವೃತ್ತ), ಸಲಹೆಗಾರ, ರಕ್ಷಣಾ ಸಚಿವಾಲಯ, ನವ ದೆಹಲಿ.

(ಆಧಾರ: ಸಾಪ್ತಾಹಿಕ ‘ಹಿಂದುಸ್ಥಾನ ಪೋಸ್ಟ್‌’)