‘ಹೋಳಿಯನ್ನು ಸಣ್ಣದಾಗಿ ಆಚರಿಸಿರಿ, ಹೋಳಿಗೆಯನ್ನು ದಾನ ಮಾಡಿರಿ !’ (ಅಂತೆ) – ಅಂಧಶ್ರದ್ಧಾ ನಿರ್ಮೂಲನಾ ಸಮಿತಿ

  • ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ನಾಸಿಕ ಜಿಲ್ಲಾ ಶಾಖೆಯಿಂದ ಕರೆ

  • ಹೋಳಿಗೆಯನ್ನು ಅವಶ್ಯಕತೆಯಿರುವವರಿಗೆ ನೀಡುತ್ತೇವೆ

ನಾಸಿಕ – ಹೋಳಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ನಾಸಿಕ ಜಿಲ್ಲಾ ಶಾಖೆಯ ಪರವಾಗಿ ‘ಹೋಳಿಯನ್ನು ಸಣ್ಣದಾಗಿ ಆಚರಿಸಿರಿ, ಹೋಳಿಗೆಯನ್ನು ದಾನ ಮಾಡಿರಿ’ ಎಂದು ಜನತೆಗೆ ಕರೆ ನೀಡಿದ್ದಾರೆ. ಇದರಲ್ಲಿ ಹೋಳಿಗೆ ಅಥವಾ ಖಾದ್ಯಪದಾರ್ಥಗಳನ್ನು ಹೋಳಿಯಲ್ಲಿ ಹಾಕದೇ ಅದನ್ನು ದಾನ ಮಾಡಬೇಕು ಎಂದು ಹೇಳಲಾಗಿದೆ. ಹೋಳಿಯ ಸ್ಥಳದಲ್ಲಿ ಸಂಗ್ರಹಿಸುವ ಹೋಳಿಗೆಯನ್ನು ಅವಶ್ಯಕತೆಯಿರುವವರಿಗೆ ಮತ್ತು ಬಡ ಕುಟುಂಬದವರಿಗೆ ಹಾಗೆಯೇ ಅನಾಥಾಶ್ರಮ ಅಥವಾ ವೃದ್ಧಾಶ್ರಮದಲ್ಲಿ ಹಂಚಲಾಗುತ್ತದೆ ಎಂದು ಹೇಳಲಾಗುತ್ತಿದೆ.

ನೀರಿಲ್ಲದೇ ಬಣ್ಣದೋಕುಳಿ ಆಡುವಂತೆ ಕರೆ !

‘ಹೋಳಿಗಾಗಿ ಕಟ್ಟಿಗೆ ಮತ್ತು ಬೆರಣಿಯನ್ನು ಸುಡಬಾರದು. ಬಣ್ಣದೋಕುಳಿಗೆ ನೀರು ಮತ್ತು ರಾಸಾಯನಿಕ ಬಣ್ಣಗಳ ಬದಲಾಗಿ ಕೇವಲ ವನಸ್ಪತಿ ಬಣ್ಣವನ್ನು ಉಪಯೋಗಿಸಿ ನೀರಿಲ್ಲದೇ ಬಣ್ಣದೋಕುಳಿಯನ್ನು ಆಡಬೇಕು’, ಎಂದೂ ಸಹ ಅಂಧಶ್ರದ್ಧೆ ನಿರ್ಮೂಲನೆ ಸಮಿತಿ ಕರೆ ನೀಡಿದೆ. (ಇತರೆ ಧರ್ಮದವರ ಹಬ್ಬಗಳ ಸಂದರ್ಭದಲ್ಲಿ ಆಗುವ ಮಾಲಿನ್ಯದ ಕುರಿತು ‘ಚಕಾರ’ವನ್ನೂ ಎತ್ತದಿರುವ ಅಂಧಶ್ರದ್ಧೆ ನಿರ್ಮೂಲನೆ ಸಮಿತಿ ಹಿಂದೂಗಳ ಹಬ್ಬ ಬಂದಕೂಡಲೇ ಪರಿಸರಕ್ಕೆ ಪೂರಕವಾಗಿರುವ ನಿಲುವನ್ನು ತೆಗೆದುಕೊಳ್ಳುತ್ತದೆ, ಎನ್ನುವುದನ್ನು ಗಮನಿಸಬೇಕು – ಸಂಪಾದಕರು)

ಸಂಪಾದಕೀಯ ನಿಲುವು

ಹೋಳಿಯಲ್ಲಿ ಅಗ್ನಿದೇವತೆಗೆ ಅರ್ಪಿಸುವ ಹೋಳಿಗೆಯನ್ನು ಬಡವರಿಗೆ ಹಂಚುವಂತೆ ಹೇಳುವ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಕಾರ್ಯಕರ್ತರೇ, ನಿಮಗೆ ಬಡವರಿಗೆ ಹೋಳಿಗೆಯನ್ನು ಹಂಚುವುದಿದ್ದರೆ, ಅದನ್ನು ಸ್ವತಂತ್ರವಾಗಿ ಸಂಗ್ರಹಿಸಿ ಏಕೆ ಹಂಚುವುದಿಲ್ಲ ? ಹಿಂದೂಗಳ ಹಬ್ಬಗಳಲ್ಲಿ ಸಿಗುವ ‘ಅನ್ನ’ ಕ್ಕಾಗಿ ಸಾಮಾಜಿಕ ಕಾರ್ಯಗಳಿಗೆ ಏಕೆ ‘ಅಡ್ಡಗಾಲು’ ಹಾಕುತ್ತೀರಿ ?