India Canada Relations: ಭಾರತೀಯ ರಾಯಭಾರ ಕಚೇರಿಯ ಶಿಬಿರಗಳಿಗೆ ಭದ್ರತೆ ನೀಡಲು ನಿರಾಕರಣೆ

  • ಕೆನಡಾದ ಟ್ರುಡೊ ಸರಕಾರದಿಂದ ಮತ್ತೊಂದು ಭಾರತ ವಿರೋಧಿ ಕೃತ್ಯ

  • ಭದ್ರತೆ ಇಲ್ಲದ ಕಾರಣ ಶಿಬಿರಗಳು ರದ್ದು

  • ಖಲಿಸ್ತಾನಿ ಬೆಂಬಲಿಗರು ಶಿಬಿರಗಳನ್ನು ಗುರಿ ಮಾಡುತ್ತಾರೆ

ಒಟಾವಾ (ಕೆನಡಾ) – ಕೆನಡಾವು ಭಾರತದ ತಾತ್ಕಾಲಿಕ ಶಿಬಿರಗಳಿಗೆ ಭದ್ರತೆ ಒದಗಿಸಲು ನಿರಾಕರಿಸಿದೆ. ಟೊರೊಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಮಾಹಿತಿ ನೀಡಿದೆ. ಕೆನಡಾದಲ್ಲಿ ವಾಸಿಸುವ ಭಾರತೀಯರಿಗೆ ಲೈಫ್ ಸರ್ಟಿಫಿಕೇಟ್ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ಈ ಶಿಬಿರಗಳನ್ನು ಪ್ರಾರಂಭಿಸಲಾಗಿದೆ. ಟೊರೊಂಟೊದಲ್ಲಿನ ಭಾರತೀಯ ರಾಯಭಾರ ಕಚೇರಿಯು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಭದ್ರತಾ ಇಲಾಖೆಯು ಸಮುದಾಯ ಶಿಬಿರದ ಸಂಘಟಕರಿಗೆ ಕನಿಷ್ಠ ಭದ್ರತೆಯನ್ನು ಒದಗಿಸಲು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿದ ನಂತರ ರಾಯಭಾರ ಕಚೇರಿಯು ಈಗಾಗಲೇ ಯೋಜಿಸಲಾಗಿದ್ದ ಶಿಬಿರವನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

1. ಈ ಹಿಂದೆಯೂ ಭಾರತೀಯ ರಾಯಭಾರಿ ಕಚೇರಿಯ ಕೆಲಸವನ್ನು ನಿಲ್ಲಿಸಲಾಗಿದೆ. ಖಲಿಸ್ತಾನಿಗಳು ಇಂತಹ ಶಿಬಿರಗಳ ಹೊರಗೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಕೆನಡಾದ ಪೊಲೀಸರು ಖಲಿಸ್ತಾನಿ ಜನರಿಗೆ ಆಶ್ರಯ ನೀಡುತ್ತಿದ್ದಾರೆ. ಇದರಿಂದಾಗಿ ರಾಯಭಾರ ಕಚೇರಿಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಬೇಕಾಗಿದೆ.

2. ಈ ಹಿಂದೆ ಕೆನಡಾದಲ್ಲಿನ ಭಾರತೀಯ ಹೈಕಮಿಷನರ್ ನವೆಂಬರ್ 3 ರಂದು ಕೆಲಸದಲ್ಲಿನ ಅಡಚಣೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು.

3. ಭಾರತೀಯ ಹೈಕಮಿಷನರ್ ಮಾತನಾಡಿ, ಅವರು ಪ್ರತಿ ವರ್ಷ ಇಂತಹ ಶಿಬಿರಗಳನ್ನು ಆಯೋಜಿಸುತ್ತಾರೆ ಮತ್ತು ಈ ಬಾರಿಯೂ ಅವರು ಅಂತಹ ಯೋಜನೆಯನ್ನು ರೂಪಿಸಿದ್ದರು. ಕೆನಡಾದ ಪೊಲೀಸರಿಂದ ಭದ್ರತೆಯನ್ನು ಕೋರಲಾಗಿತ್ತು; ಆದರೆ ಭದ್ರತೆಯನ್ನು ಒದಗಿಸಲಾಗಿಲ್ಲ ಮತ್ತು ಟೊರೊಂಟೊದಲ್ಲಿ ಪ್ರತಿಭಟನೆಗಳು ನಡೆದವು. ಇದಕ್ಕೂ ಮುನ್ನ ನವೆಂಬರ್ 2 ಮತ್ತು 3 ರಂದು ವ್ಯಾಂಕೋವರ್ ಮತ್ತು ಸರ್ರೆಯಲ್ಲಿ ನಡೆದ ಶಿಬಿರಗಳಲ್ಲಿ ಗದ್ದಲವಾಗಿತ್ತು. ನಾವು ಶಿಬಿರಗಳಲ್ಲಿ ಜೀವನ ಪ್ರಮಾಣಪತ್ರಗಳನ್ನು ನೀಡುತ್ತೇವೆ ಮತ್ತು ಸಾವಿರಾರು ಜನರು ಇದರ ಪ್ರಯೋಜನ ಪಡೆಯುತ್ತಾರೆ. ಗದ್ದಲ ನಡೆದ ದಿನಂದು ಕೂಡ ಒಂದು ಸಾವಿರ ಲೈಫ್ ಸರ್ಟಿಫಿಕೇಟ್ ನೀಡಲಾಗಿತ್ತು. ಭದ್ರತೆಯ ಕೊರತೆಯಿಂದಾಗಿ, ಭವಿಷ್ಯದಲ್ಲಿ ಇಂತಹ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ, ಇದು ಭಾರತೀಯ ಮತ್ತು ಕೆನಡಾದ ನಾಗರಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಂದಿನ ವರ್ಷ ಕೆನಡಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಮತ್ತು ಈ ಚುನಾವಣೆಯಲ್ಲಿ ಭಾರತ ವಿರೋಧಿ ಟ್ರುಡೊ ಸರಕಾರವನ್ನು ಕಿತ್ತೊಗೆಯಲು ಅಲ್ಲಿನ ಜನರು ಪ್ರಯತ್ನಿಸಬೇಕು. ಇದಕ್ಕಾಗಿ ಅಲ್ಲಿನ ಭಾರತೀಯ ಮೂಲದ ನಾಗರಿಕರು ಚಳವಳಿಯನ್ನು ನಡೆಸುವ ಆವಶ್ಯಕತೆಯಿದೆ !