ಕೋರೋನಾದ ಉತ್ಪತ್ತಿಯ ಬಗ್ಗೆ ನಮಗೆ ಮಾಹಿತಿ ನೀಡಿ ! – ವಿಶ್ವ ಆರೋಗ್ಯ ಸಂಸ್ಥೆಯಿಂದ ಎಲ್ಲಾ ದೇಶಗಳಿಗೆ ಕರೆ

ಅಮೇರಿಕಾದ ಏಎಫ್ಬಿಐ ಮುಖ್ಯಸ್ಥರಿಂದ ಕೊರೋನಾದ ಉತ್ಪತ್ತಿ ಚೀನಾದಲ್ಲಿ ಆಗಿರುವ ದಾವೆ

ಜಿನೀವಾ (ಸ್ವೀಝರ್ಲ್ಯಾಂಡ್) – ಯಾವುದೇ ದೇಶದ ಬಳಿ ಕೊರೋನಾದ ಉತ್ಪತ್ತಿ ಸಂಬಂಧಿತ ಏನೇ ಮಾಹಿತಿ ಇದ್ದರೂ ಅದನ್ನು ನಮಗೆ ನೀಡಿರಿ. ಮಹಾಮಾರಿ ಹೇಗೆ ಮತ್ತು ಎಲ್ಲಿಂದ ಪ್ರಾರಂಭವಾಯಿತು ? ಎಂಬುದು ನಮಗೆ ಕೇವಲ ತಿಳಿದುಕೊಳ್ಳಬೇಕಿದೆ, ನಮಗೆ ಕೆಲವು ನಿಖರ ಮಾಹಿತಿ ದೊರೆತರೆ ನಾವು ಮುಂಬರುವ ಸಮಯದಲ್ಲಿ ಬರುವ ಮಹಾಮಾರಿ ತಡೆಯಲು ಮಾರ್ಗ ಹುಡುಕಬಹುದು. ಹಾಗೂ ಮುಂದಿನ ಸಮಸ್ಯೆ ಎದುರಿಸುವುದು ಸುಲಭವಾಗುವುದು, ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಎಲ್ಲಾ ದೇಶಗಳಿಗೆ ಕರೆ ನೀಡಿದೆ. ಕೆಲವು ದಿನಗಳ ಹಿಂದೆ ಅಮೇರಿಕಾದ ತನಿಕಾ ಇಲಾಖೆ ಎಫ್ಬಿಐ ನ ಮುಖ್ಯಸ್ಥ ಕ್ರಿಸ್ತೋಫಾರ್ ಇವರು, ‘ಚೀನಾದ ಉಹಾನ ಪ್ರಯೋಗ ಶಾಲೆಯಿಂದ ಕೊರೋನ ಎಲ್ಲಾ ಕಡೆಗೆ ಪಸರಿಸಿತ್ತು.’ ಎಂದು ದಾವೆ ಮಾಡಿದ್ದಾರೆ.

ಚೀನಾವು ಈ ದಾವೆ ತಳ್ಳಿಹಾಕಿದೆ; ಆದರೆ ಈ ದಾವೆಯ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಘಟನೆ ಮೇಲಿನ ಕರೆ ನೀಡಿದೆ. ಆರೋಗ್ಯ ಸಂಘಟನೆಯ ಮುಖ್ಯಸ್ಥ ಟೆಡ್ರೋಸ್ ಘೆಬ್ರೆಯಸಸ್ ಇವರು, ಅಮೇರಿಕಾವು ಈ ದಾವೆಗೆ ಸಂಬಂಧಿಸಿದಂತೆ ಯಾವುದೇ ವರದಿ ಮಂಡಿಸಿಲ್ಲ. ಅಮೇರಿಕಾದ ಉರ್ಜಾ ವಿಭಾಗದ ಅಧಿಕಾರಿಗಳು ಕೂಡ ಗುಪ್ತಚರ ವರದಿಯ ಆಧಾರ ನೀಡುತ್ತಾ ಚೀನಾದ ಮೇಲೆ ಆರೋಪ ಮಾಡಿದೆ; ಆದರೆ ನಮ್ಮ ಬಳಿ ಅಂತಹ ಯಾವುದೇ ರೀತಿಯ ವರದಿ ಬಂದಿಲ್ಲ.