ಮಕ್ಕಳ ಕಣ್ಣಿನ ಆರೋಗ್ಯವನ್ನು ಕಾಪಾಡಿ !

ಪ್ರಸ್ತುತ ಮನೆಮನೆಗಳಲ್ಲಿ ‘ಆ ಮೊಬೈಲ್‌ (ಸಂಚಾರವಾಣಿ) ಇಡು ಮತ್ತು ಅಧ್ಯಯನದ ಕಡೆಗೆ ಗಮನ ಕೊಡು !’, ಎಂಬ ಮಾತು ಕೇಳಿಬರುತ್ತದೆ. ಅನೇಕ ಪಾಲಕರಲ್ಲಿ ಈ ಮಾತುಗಳೇ ಇರುತ್ತವೆ. ಚಿಕ್ಕ ಮಕ್ಕಳಿಗೆ ಸಂಚಾರವಾಣಿಯಲ್ಲಿನ ಎಲ್ಲ ವಿಷಯಗಳು ಬಹುಮಟ್ಟಿಗೆ ತಿಳಿದಿರುತ್ತವೆ ಮತ್ತು ಅದರಿಂದ ಈ ಮಕ್ಕಳು ಅದಕ್ಕೆ ವ್ಯಸನಿಯಾಗುತ್ತಾರೆ. ಸಂಚಾರವಾಣಿ ಯನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದರಿಂದ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಲಘುದೃಷ್ಟಿದೋಷ (ಮಾಯೋಪಿಯಾ) ನಿರ್ಮಾಣವಾಗಿದೆ, ಎಂದು ಆಧುನಿಕ ವೈದ್ಯರು ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ. ‘ಮಾಯೋಪಿಯಾ’, ಅಂದರೆ ಸ್ಪಷ್ಟವಾಗಿ ಕಾಣಿಸದಿರುವುದರಿಂದ ಮಕ್ಕಳಿಗೆ ಕನ್ನಡಕವನ್ನು ಹಾಕಬೇಕಾಗುತ್ತದೆ. ‘ಸಕಾಲದಲ್ಲಿ ಸಂಚಾರವಾಣಿಯ ಬಳಕೆಯನ್ನು ನಿಲ್ಲಿಸದಿದ್ದರೆ ಮುಂಬರುವ ೧೦ ವರ್ಷಗಳಲ್ಲಿ ಈ ಪ್ರಮಾಣವು ಶೇ. ೫೦ ರಷ್ಟು ಹೆಚ್ಚಾಗಬಹುದು’, ಎಂಬ ಭಯವನ್ನು ನೇತ್ರರೋಗತಜ್ಞರು ವ್ಯಕ್ತಪಡಿಸಿದ್ದಾರೆ. ಈ ಸುದ್ದಿಯು ತುಂಬಾ ಅಪಾಯಕರವಾಗಿದೆ. ‘ರೀಲ್ಸ್‌’ ಅಥವಾ ‘ವಿಡಿಯೋ’ ಅಥವಾ ‘ಕಾರ್ಟುನ್‌’ಗಳನ್ನು ಹೆಚ್ಚು ಪ್ರಮಾಣದಲ್ಲಿ ನೋಡುವುದರಲ್ಲಿಯೇ ಮಕ್ಕಳು ಸಮಯ ಕಳೆಯುವುದರಿಂದ ಅವರ ಅಧ್ಯಯನದ ಕಡೆಗೆ ಗಮನ ಕಡಿಮೆಯಾಗಿದೆ. ಮಕ್ಕಳಿಗೆ ಮಗ್ಗಿ ಕಡಿಮೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧವಾಗುವ ಹಾಡುಗಳೇ ಹೆಚ್ಚು ಬಾಯಿಪಾಠವಿರುತ್ತವೆ. ಮಕ್ಕಳು ಊಟ ಮಾಡದಿದ್ದರೆ, ಅವರಿಗೆ ಮೊಬೈಲ್‌ ಕೊಡುವುದು ! ಮಕ್ಕಳು ಕೇಳದಿದ್ದರೆ. ಸಂಚಾರವಾಣಿಯಲ್ಲಿನ ಯಾವುದಾದರೊಂದು ವಿಡಿಯೋ ತೋರಿಸುವುದು !

ಸೌ. ನಮ್ರತಾ ದಿವೇಕರ

ಹಾಗೆಯೇ ಈ ರೀತಿಯಲ್ಲಿನ ಪ್ರಸಂಗಗಳು ಎಲ್ಲೆಡೆ ಹೆಚ್ಚುವರಿ ಪ್ರಮಾಣದಲ್ಲಿ ಕಂಡುಬರುತ್ತದೆ. ‘ಊಟ ಮಾಡುವಾಗ ನೋಡಬಾರದು ಅಥವಾ ಓದಬಾರದು, ಶಾಂತಚಿತ್ತದಿಂದ ಊಟವನ್ನು ಮಾಡಬೇಕು’, ಎಂದು ಹಿಂದಿನ ಕಾಲದಲ್ಲಿ ನಮಗೆ ಹೇಳಲಾಗುತ್ತಿತ್ತು; ಆದರೆ ಸದ್ಯ ಪರಿಸ್ಥಿತಿ ವಿರುದ್ಧವಾಗಿದೆ. ಚಿಕ್ಕ ಮಕ್ಕಳ ಎದುರಿಗೆ ಮೊಬೈಲ್‌ ಇಟ್ಟರೆ, ಅವರು ಅದರಲ್ಲಿಯೇ ಮಗ್ನರಾಗುತ್ತಾರೆ. ಆದ್ದರಿಂದ ತಿಂದ ಆಹಾರದ ಲಾಭವು ಅವರಿಗೆ ಎಷ್ಟಾಗುತ್ತದೆ ಎನ್ನುವಂತಾಗಿದೆ. ಈ ಅತಿಯಾದ ಪರಿಣಾಮವು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೃಷ್ಟಿದೋಷ, ಬೊಜ್ಜು, ಏನು ಹೊಳೆಯದಿರುವುದು ಇಂತಹ ತೊಂದರೆಗಳು ಹೆಚ್ಚಾಗುತ್ತವೆ. ಹಿಂದಿನ ಕಾಲದಲ್ಲಿ ೭೦ ರಿಂದ ೮೦ ವರ್ಷಗಳ ವರೆಗಿನ ವೃದ್ಧರಿಗೆ ಕನ್ನಡಕವೇ ಇರುತ್ತಿರಲಿಲ್ಲ. ಆದ್ದರಿಂದ ಎಷ್ಟೇ ದೂರದ್ದು ಸಹ ಅವರಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅವರ ದೃಷ್ಟಿ ತೀಕ್ಷ್ಣವಾಗಿತ್ತು; ಆದರೆ ಈಗ ೪-೫ ವರ್ಷದ ಮಕ್ಕಳಿಗೆ ಕಣ್ಣಿಗೆ ಕನ್ನಡಕ ಬರುತ್ತದೆ. ಶಾಲೆಯಲ್ಲಿ ಫಲಕದಲ್ಲಿ ಬರೆದಿರುವುದು ಕಾಣಿಸದಿರುವುದು, ಕಣ್ಣುಗಳಲ್ಲಿ ನೀರು ಬರುವುದು, ಸತತವಾಗಿ ಕಣ್ಣುಗಳನ್ನು ಉಜ್ಜುವುದು ಈ ರೀತಿ ಆಗುತ್ತಿರುತ್ತವೆ. ಇದನ್ನು ಸಮಯಕ್ಕೆ ತಡಗಟ್ಟದಿದ್ದರೆ ಕಣ್ಣುಗಳ ಪದರಿಗೆ ಧಕ್ಕೆಯುಂಟಾಗಿ ಶಾಶ್ವತವಾಗಿ ಕುರುಡುತನಕ್ಕೆ ಕಾರಣವಾಗಬಹುದು. ಇಂದಿನ ಪಾಲಕರು ಇದರ ಬಗ್ಗೆ ಜಾಗೃತವಾಗಬೇಕು !

ದೇಶದ ಭಾವೀ ಪೀಳಿಗೆಯು ಅಲ್ಪ ದೃಷ್ಟಿಯ ಅಥವಾ ಇಂದಿನಿಂದಲೇ ಕುರುಡುತನದತ್ತ ಮಾರ್ಗಕ್ರಮಣ ಮಾಡುತ್ತಿದ್ದರೆ, ಭಾರತದ ಭವಿಷ್ಯವು ಕತ್ತಲೆಯಾಗುವುದು. ಇದನ್ನು ತಪ್ಪಿಸಬೇಕು. ಚಿಕ್ಕ ಮಕ್ಕಳ ಕಣ್ಣುಗಳನ್ನು ಆರೋಗ್ಯವಾಗಿಡಲು ಪ್ರಯತ್ನಿಸುವುದು ಮಹತ್ವದ್ದಾಗಿದೆ. ಕಣ್ಣುಗಳ ಸಂದರ್ಭದಲ್ಲಿ ಭವಿಷ್ಯದಲ್ಲಿನ ಅಪಾಯಗಳನ್ನು ಗಮನದಲ್ಲಿಟ್ಟು ಪಾಲಕರು ಎಚ್ಚರಿಕೆಯಿಂದಿರಬೇಕು. ಮಕ್ಕಳಿಗೆ ಸಂಚಾರವಾಣಿ ಅಥವಾ ದೂರಚಿತ್ರವಾಣಿಯನ್ನು ನೋಡುವ ಸಮಯವನ್ನು ಹಾಕಿಕೊಡಬೇಕು ಮತ್ತು ಅದೇ ಸಮಯದಲ್ಲಿ ಮಕ್ಕಳಿಗೆ ಸಂಚಾರವಾಣಿ ಕೊಡಬೇಕು. ಮಕ್ಕಳಿಗೆ ಸುಸಂಸ್ಕಾರ ನೀಡುವುದರಿಂದ, ಅವರಿಗಾಗಿ ಸಮಯ ಕೊಟ್ಟರೆ ಅವರು ಸಂಚಾರವಾಣಿ ಯಿಂದ ದೂರವಿರುತ್ತಾರೆ.

ಸೌ. ನಮ್ರತಾ ದಿವೇಕರ, ಸನಾತನ ಆಶ್ರಮ, ದೇವದ, ಪನವೇಲ.