ವಿದ್ಯುತ್ ಬಿಕ್ಕಟ್ಟನ್ನು ಎದುರಿಸುವುದಕ್ಕಾಗಿ ಜರ್ಮನಿಯಿಂದ ೮೩ ಲಕ್ಷ ಕೋಟಿ ರೂಪಾಯಿಗಳ ಏರ್ಪಾಡು

ರಷ್ಯಾದ ಮೇಲೆ ನಿಷೇಧ ಹೇರಿದ ಪರಿಣಾಮ !

ಬರ್ಲಿನ್ (ಜರ್ಮನಿ) – ವಿದ್ಯುತ್ ಬಿಕ್ಕಟ್ಟಿನಿಂದ ನಿರ್ಮಾಣವಾಗಿರುವ ಅಪಾಯ ಮತ್ತು ಸವಾಲು ಎದುರಿಸುವುದಕ್ಕೆ ೨೦೩೦ ವರೆಗೆ ಜರ್ಮನಿ ಸರಕಾರಕ್ಕೆ ೧ ಸಾವಿರ ಅಬ್ಜ ಡಾಲರ್ ಎಂದರೆ ಸುಮಾರು ೮೩ ಲಕ್ಷ ಕೋಟಿ ರೂಪಾಯಿಯ ಏರ್ಪಾಡು ಮಾಡಬೇಕಾಗುವುದು, ಎಂದು ಆರ್ಥಿಕ ಕ್ಷೇತ್ರದಲ್ಲಿನ ಅಂತರರಾಷ್ಟ್ರೀಯ ಕಂಪನಿ ‘ಬ್ಲೂಮಬರ್ಗ್’ ಅಂದಾಜು ವ್ಯಕ್ತಪಡಿಸಿದೆ. ರಷ್ಯಾದ ಒಂದು ವರ್ಷದ ಹಿಂದೆ ಯುಕ್ರೇನ ಜೊತೆಗೆ ನಡೆಯುತ್ತಿರುವ ಯುದ್ಧದಿಂದ ಪಾಶ್ಚಾತ್ಯ ಶಕ್ತಿಗಳು ರಷ್ಯಾದ ಜೊತೆಗಿನ ಎಲ್ಲಾ ಒಪ್ಪಂದಗಳು ರದ್ದುಪಡಿಸಲು ಆರಂಭಿಸಿದರು. ರಷ್ಯಾದ ನೈಸರ್ಗಿಕ ವಾಯು ಮತ್ತು ಇತರ ವಿದ್ಯುತ್ ಪ್ರಕಾರ ಇದರ ಮೇಲೆ ಅವಲಂಬಿಸಿರುವ ಜರ್ಮನಿ ಆರ್ಥಿಕ ವ್ಯವಸ್ಥೆಗೆ ಮಾತ್ರ ದೊಡ್ಡ ಪೆಟ್ಟು ಬಿದ್ದಿದ್ದೂ ಇಲ್ಲಿ ಕಳೆದ ೩೦ ವರ್ಷಗಳಲ್ಲಿ ಎಲ್ಲಾಕ್ಕಿಂತ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ.

‘ಬ್ಲೂಮಬರ್ಗ್’ ಅದರ ವರದಿಯಲ್ಲಿ,

೧. ಜರ್ಮನಿಯಲ್ಲಿನ ವಿದ್ಯುತ್ ವ್ಯವಸ್ಥೆಯ ಆಧುನಿಕೀಕರಣದ ಜೊತೆಗೆ ಪರಮಾಣು ಮತ್ತು ಕಲ್ಲಿದ್ದಲಿನಿಂದ ನಡೆಯುವ ವಿದ್ಯುತ್ ಪ್ರಕಲ್ಪಗಳನ್ನು ನಿಲ್ಲಿಸುವುದಕ್ಕಾಗಿ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ.

೨. ವಿದ್ಯುತ್ ವಾಹನಗಳ ಹೆಚ್ಚುತ್ತಿರುವ ಬೇಡಿಕೆಯ ಪೂರೈಕೆ ಮಾಡುವುದಕ್ಕಾಗಿ ಕೂಡ ಜರ್ಮನಿ ಟೊಂಕ ಕಟ್ಟಿ ನಿಲ್ಲಬೇಕಾಗುವುದು.

೩. ವಿದ್ಯುತ್ ಪ್ರಕಲ್ಪದಲ್ಲಿನ ಈ ಬದಲಾವಣೆ ಮಾಡುವುದಕ್ಕಾಗಿ ಪ್ರತಿದಿನ ಫುಟ್ಬಾಲ್ ಮೈದಾನದ ೪೩ ಮೈದಾನಗಳಷ್ಟು ದೊಡ್ಡ ಕ್ಷೇತ್ರದಲ್ಲಿ ಸೌರ ಶಕ್ತಿಯ ಪ್ಯಾನಲ್ ಅಳವಡಿಸುವ ಕಾರ್ಯ ಮಾಡಬೇಕಾಗುವುದು.

೪. ವಿದ್ಯುತ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ ಎದುರಿಸಲು ಗೃಹ ಉಪಯೋಗಿ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಅನುದಾನ ನೀಡುವುದಕ್ಕಾಗಿ ಜರ್ಮನಿಯಿಂದ ೬೮೧ ಅಬ್ಜ ಯುರೋದ (ಸುಮಾರು ೬೦ ಲಕ್ಷ ಕೋಟಿ ರೂಪಾಯಿಯ) ವ್ಯವಸ್ಥೆ ಮಾಡಿದೆ.