ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಭಾರತದ ಆವಶ್ಯಕತೆ !

ಅಮೇರಿಕಾದ ಹಿರಿಯ ಸಂಸದ ಶೂಮರ ಇವರ ದಾವೆ

ಅಮೇರಿಕಾದ ಹಿರಿಯ ಸಂಸದ ಶೂಮರ

ನವದೆಹಲಿ – ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪ ದೇಶಗಳಿಗೆ ಭಾರತದ ಆವಶ್ಯಕತೆಯಿದೆ. ಭಾರತ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶವಾಗಿದೆ. ಚೀನಾವನ್ನು ಸರಿಸಾಟಿಯಾಗಿ ಎದುರಿಸಲು ಭಾರತಕ್ಕೆ ಕ್ಷಮತೆಯಿದೆ ಎಂದು ಅಮೇರಿಕಾದ ಹಿರಿಯ ಸಂಸದ ಶೂಮರ ಇವರು ಹೇಳಿದ್ದಾರೆ. ಅವರು ಮ್ಯೂನಿಚನಲ್ಲಿನ ರಕ್ಷಣಾ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.

ಶೂಮರ ತಮ್ಮ ಮಾತನ್ನು ಮುಂದುವರಿಸುತ್ತಾ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಲು ಎಲ್ಲ ದೇಶಗಳು ಒಂದುಗೂಡಿ ಕೆಲಸ ಮಾಡುವ ಆವಶ್ಯಕತೆಯಿದೆ. ಮುಂದಿನ ವಾರದಲ್ಲಿ ಭಾರತದ ಪ್ರವಾಸಕ್ಕೆ ಸಂಸದರ ಒಂದು ಶಕ್ತಿಶಾಲಿ ಗುಂಪಿನ ನೇತೃತ್ವವನ್ನು ನಾನು ವಹಿಸಲಿದ್ದೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಈಗ ಭಾರತದ ಆವಶ್ಯಕತೆ ಭಾಸವಾಗತೊಡಗಿದೆ; ಆದರೆ ಭಾರತಕ್ಕೆ ತೊಂದರೆ ಕೊಡಲು ಅಮೇರಿಕಾ ಮತ್ತು ಯುರೋಪಿನ ದೇಶಗಳು ಇಲ್ಲಿಯವರೆಗೆ ಎಷ್ಟು ಪ್ರಯತ್ನಗಳನ್ನು ಮಾಡಿವೆ ?, ಎನ್ನುವುದನ್ನು ಭಾರತೀಯರು ಎಂದಿಗೂ ಮರೆಯಬಾರದು !