ಕೆಲವರಿಗೆ ಭಾರತ ಹಾಗೂ ಪ್ರಧಾನಮಂತ್ರಿ ಮೋದಿಯವರ ಯಶಸ್ಸನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ !

  • ಬ್ರಿಟೀಶ್ ಸಂಸದ ರಾಮೀ ರೇಂಜರ್ ಇವರಿಂದ ಬಿಬಿಸಿಗೆ ಛೀಮಾರಿ

  • ಮುಷ್ಟಿಯಷ್ಟು ಮೋದಿವಿರೋಧಿಗಳ ಹೇಳಿಕೆಯ ಆಧಾರದ ಸಾಕ್ಷ್ಯಚಿತ್ರವೆಂದು ಆರೋಪ

ಲಂಡನ್ – ಕೆಲವರಿಗೆ ಭಾರತ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಎಂದು ಬ್ರಿಟೀಶ್ ಸಂಸದ ರಾಮೀ ರೇಂಜರ್ ಇವರು ಬಿಬಿಸಿಯ ಹಿಂದೂದ್ವೇಷಿ ಹಾಗೂ ಭಾರತ ವಿರೋಧಿ ಸಾಕ್ಷ್ಯಚಿತ್ರದ ವಿಷಯದಲ್ಲಿ ಬಿಬಿಸಿಗೆ ಛೀಮಾರಿ ಹಾಕಿದರು. ಕೆಲವು ದಿನಗಳ ಹಿಂದೆ ಬಿಬಿಸಿಯು ಗುಜರಾತ ದಂಗೆಯನ್ನು ಆಧರಿಸಿ ‘ಇಂಡಿಯಾ : ದ ಮೋದಿ ಕ್ವೆಶ್ಚನ್’ ಈ ಹೆಸರಿನ ಒಂದು ದ್ವೇಷಪೂರಿತ ಸಾಕ್ಷ್ಯಚಿತ್ರ ನಿರ್ಮಿಸಿತ್ತು. ಅದಕ್ಕೆ ಭಾರತದಾದ್ಯಂತ ಟೀಕೆಯಾಗಿತ್ತು.

ರೇಂಜರ್ ಮಾತು ಮುಂದುವರಿಸುತ್ತಾ, “ಬಿಬಿಸಿ ಪ್ರಸಾರ ಮಾಡಿದ ಸಾಕ್ಷ್ಯಚಿತ್ರ ಕೇವಲ ಅಪಪ್ರಚಾರವಾಗಿತ್ತು. ಈಗ ಭಾರತ ಬದಲಾಗುತ್ತಿದೆ. ಆದ್ದರಿಂದಲೆ ಈ ಸಾಕ್ಷ್ಯಚಿತ್ರದ ವಿಷಯದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಲಾಯಿತು. ಬಿಬಿಸಿ ೨ ದೊಡ್ಡ ದೇಶಗಳಲ್ಲಿನ ಸಂಬಂಧವನ್ನು ಕೆಡಿಸುವ ಕೃತ್ಯ ಮಾಡಿದೆ. ಈ ಸಾಕ್ಷ್ಯಚಿತ್ರ ತಪ್ಪಾದ ಸಮಯದಲ್ಲಿ ಹಾಗೂ ತಪ್ಪು ಸಂದೇಶವನ್ನು ನೀಡುವುದಾಗಿತ್ತು. ಈ ಸಾಕ್ಷ್ಯಚಿತ್ರ ಮುಷ್ಟಿಯಷ್ಟು ಮೋದಿವಿರೋಧಿಗಳ ಹೇಳಿಕೆಯನ್ನು ಆಧರಿಸಿದೆ.” ಎಂದು ಹೇಳಿದರು
ಈ ಹಿಂದೆ ಓರ್ವ ಬ್ರಿಟೀಶ್ ಸಂಸದ ಬಾಬ್ ಬ್ಲಾಕ್‌ಮೆನ್ ಇವರು ಕೂಡ ಬಿಬಿಸಿಯ ಈ ಸಾಕ್ಷ್ಯಚಿತ್ರವನ್ನು ತೀವ್ರವಾಗಿ ವಿರೋಧಿಸಿದ್ದರು.