ಬಿಬಿಸಿಯ ಸಾಕ್ಷ್ಯಚಿತ್ರದಲ್ಲಿ ಅತಿಶಯೋಕ್ತಿ !

ಬ್ರಿಟನ್ನಿನ ಸಂಸದ ಬಾಬ ಬ್ಲೆಕಮನರ ಸ್ಪಷ್ಟೋಕ್ತಿ !

(ಎಡದಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ನಿನ ಸಂಸದ ಬಾಬ ಬ್ಲೆಕಮನ)

ಲಂಡನ (ಬ್ರಿಟನ) – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗುಜರಾತ ದಂಗೆಯ ಪ್ರಕರಣದ ಬಗ್ಗೆ ನಿರ್ಮಿಸಲಾದ ಬಿಬಿಸಿಯ ಸಾಕ್ಷ್ಯಚಿತ್ರವು ಅತಿಶಯೋಕ್ತಿಯಿಂದ ತುಂಬಿದೆ, ಎಂಬ ಹೇಳಿಕೆಯನ್ನು ಬ್ರಿಟನ್ನಿನ ಸಂಸದ ಬಾಬ ಬ್ಲೆಕಮನರು ನೀಡಿದ್ದಾರೆ.

೧. ಸಂಸದ ಬಾಬ ಬ್ಲೆಕಮನರವರು ಮಾತನಾಡುತ್ತ, ಈ ಸಾಕ್ಷ್ಯಚಿತ್ರವು ಒಂದು ಅಪಪ್ರಚಾರದ ಹೊರತು ಬೇರೆ ಏನೂ ಅಲ್ಲ. ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಲು ಮಾಡಲಾದ ಕೆಳಮಟ್ಟದ ಪತ್ರಕೊದ್ಯಮದ ಹೀನ ಉದಾಹರಣೆಯಾಗಿದೆ. ಈ ಸಾಕ್ಷ್ಯಚಿತ್ರವು ಸತ್ಯಕ್ಕಿಂತಲೂ ಬಹಳ ದೂರವಿದೆ. ಇದನ್ನು ಬಿಬಿಸಿಯು ಪ್ರಸಾರಣ ಮಾಡುವ ಆವಶ್ಯಕತೆ ಇರಲಿಲ್ಲ. ಈ ಸಾಕ್ಷ್ಯಚಿತ್ರವನ್ನು ಬಿಬಿಸಿಯ ಹೊರಗಿನ ಸಂಘಟನೆಯು ಮಾಡಿದೆ. ಇದರಲ್ಲಿ ಗುಜರಾತ ದಂಗೆಯ ಕಾರಣಗಳನ್ನು ವಿಸ್ತೃತವಾಗಿ ಉಲ್ಲೇಖಿಸಲಾಗಿಲ್ಲ. ಸರ್ವೋಚ್ಚ ನ್ಯಾಯಾಲಯವು ಈ ದಂಗೆಯ ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ಯಾವುದೇ ಪುರಾವೆ ಇಲ್ಲದಿರುವುದನ್ನು ಸ್ಪಷ್ಟಪಡಿಸಿತ್ತು. ಬಿಬಿಸಿಯು ಬ್ರಿಟಿಷ ಸರಕಾರದ ಭಾಗವಲ್ಲ. ನನಗೆ ಬಿಬಿಸಿಯು ಭಾರತ ಮತ್ತು ಬ್ರಿಟನ್ನಿನ ನಡುವಿನ ಸಂಬಂಧವನ್ನು ಕೆಡಿಸುವ ಉದ್ದೇಶವನ್ನು ಹೊಂದಿದೆ ಎಂದು ಅನಿಸುತ್ತದೆ, ಎಂದು ಹೇಳಿದರು.

೨. ಬಿಬಿಸಿಯ ಭಾರತದಲ್ಲಿನ ದೆಹಲಿ ಮತ್ತು ಮುಂಬೈನ ಕಾರ್ಯಾಲಯದ ಸಮೀಕ್ಷೆಯ ವಿಷಯದಲ್ಲಿ ಸಂಸದ ಬ್ಲೆಕಮನರು ಮಾತನಾಡುತ್ತ, ಇಲ್ಲಿ ಯಾವುದೇ ಹೊಸ ವಿಷಯವಿಲ್ಲ. ಇದು ಹಿಂದಿನಿಂದಲೂ ನಡೆದು ಬಂದಿದೆ. ಬಿಬಿಸಿಯಿಂದಲೇ ಅವರ ಕೆಲಸಗಳು ನಿಯಮಾನುಸಾರ ನಡೆಯುತ್ತಿದೆ, ಇದನ್ನು ಸ್ಪಷ್ಟಪಡಿಸುವ ಆವಶ್ಯಕತೆಯಿಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

* ಭಾರತ ಮತ್ತು ಬ್ರಿಟನ್ನಿನ ನಡುವಿನ ಸಂಬಂಧವನ್ನು ಕೆಡವಿ ಹಾಕುವುದೇ ಬಿಬಿಸಿಯ ಉದ್ದೇಶವಾಗಿದೆ ಎಂಬ ಆರೋಪ !