ಭೂಕಂಪ ಪೀಡಿತ ಟರ್ಕಿಯ ನಾಗರಿಕರಿಗೆ ದೇವದೂತರಾದ ಭಾರತೀಯ ಸೈನ್ಯ !

ಟರ್ಕಿಯ ಮಹಿಳೆಯರು ಭಾರತೀಯ ಸೈನಿಕರ ಕೃತಜ್ಞತೆ ಸಲ್ಲಿಸಿದರು !

ಟರ್ಕಿಯ ಮಹಿಳೆ ಓರ್ವ ಭಾರತೀಯ ಸೈನಿಕನನ್ನು ಕೃತಜ್ಞತೆ ವ್ಯಕ್ತಪಡಿಸುವ ಛಾಯಾಚಿತ್ರ

ಅಂಕಾರಾ (ಟರ್ಕಿ) – ಭೂಕಂಪ ಪೀಡಿತ ಟರ್ಕಿಯ ನಾಗರಿಕರಗಾಗಿ ಭಾರತೀಯ ಸೈನ್ಯ ದೇವದೂತರಾದರು. ಅದಕ್ಕಾಗಿ ಟರ್ಕಿಯ ಮಹಿಳೆ ಓರ್ವ ಭಾರತೀಯ ಸೈನಿಕನನ್ನು ಕೃತಜ್ಞತೆ ವ್ಯಕ್ತಪಡಿಸುವ ಛಾಯಾಚಿತ್ರ ಭಾರತೀಯ ಸೈನ್ಯ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರಸಾರಗೊಳಿಸಿ ಅದರ ಕೆಳಗೆ ‘ವಿ ಕೆಯರ್’ (ನಾವು ಕಾಳಜಿ ತೆಗೆದುಕೊಳ್ಳುತ್ತೇವೆ) ಎಂದು ಬರೆದಿದೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸೈನ್ಯದ ಬಗ್ಗೆ ಎಲ್ಲಾ ಕಡೆಯಿಂದ ಶ್ಲಾಘಿಸಲಾಗುತ್ತಿದೆ. ಭೂಕಂಪ ಪೀಡತರ ಸಹಾಯಕ್ಕಾಗಿ ಭಾರತೀಯ ಸೈನ್ಯದಿಂದ ‘ಆಪರೇಷನ್ ದೋಸ್ತ’ ಅಭಿಯಾನ ನಡೆಸುತ್ತಿದ್ದಾರೆ. ಇದರ ಅಡಿಯಲ್ಲಿ ವೈದ್ಯಕೀಯ ಸಾಹಿತ್ಯ, ಚಲಿಸುವ ಆಸ್ಪತ್ರೆ, ಹುಡುಕಾಟ ಮತ್ತು ರಕ್ಷಣಾ ತಂಡ ಮುಂತಾದವುಗಳನ್ನು ಕಳುಹಿಸಿದೆ. ಭಾರತೀಯ ತಂಡದಿಂದ ಓರ್ವ ೬ ವರ್ಷದ ಹುಡುಗನನ್ನು ಕಟ್ಟಡದ ರಾಶಿಯಿಂದ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.

ಮೃತರ ಸಂಖ್ಯೆ ೨೧ ಸಾವಿರಗಿಂತಲೂ ಹೆಚ್ಚು !

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಇಲ್ಲಿಯವರೆಗೆ ೨೧ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಇವುಗಳ ಪೈಕಿ ಟರ್ಕಿಯಲ್ಲಿ ೧೭ ಸಾವಿರ ಕ್ಕಿಂತಲೂ ಹೆಚ್ಚು ಹಾಗೂ ಸಿರಿಯಾದಲ್ಲಿ ೩ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ.