ರಷ್ಯಾ ಸೋಲುವುದು !

ಬ್ರಿಟನ್ನಿನ ಸಂಸತ್ತಿನಲ್ಲಿ ಝೆಲೆನ್ಸ್ಕಿ ಇವರ ದಾವೆ

ಲಂಡನ್ (ಬ್ರಿಟನ್) – ಸ್ವಾತಂತ್ರ್ಯಕ್ಕೆ ಗೆಲುವಾಗುತ್ತದೆ, ಎಂಬುದು ನಮಗೆ ತಿಳಿದಿದೆ. ರಷ್ಯಾಗೆ ಸೋಲಾಗುತ್ತದೆ ಹಾಗೂ ವಿಜಯ ಜಗತ್ತನ್ನು ಬದಲಾಯಿಸುತ್ತದೆ, ಎಂದು ಯುಕ್ರೇನ್‌ನ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಇವರು ಬ್ರಿಟನ್ನಿನ ಸಂಸತ್ತಿನಲ್ಲಿ ಹೇಳಿದರು. ಝೆಲೆನ್ಸ್ಕಿ ಇವರು ಯುಕ್ರೇನ್‌ಗೆ ನೀಡಿದ ಸಹಾಯಕ್ಕಾಗಿ ಬ್ರಿಟನ್ನಿನ ನಾಗರಿಕರಿಗೆ ಧನ್ಯವಾದವನ್ನು ಅರ್ಪಿಸಿದರು. ರಷ್ಯಾವು ಯುಕ್ರೇನ್‌ನ ಮೇಲೆ ದಾಳಿ ಮಾಡಿದನಂತರ ಮೊದಲ ಬಾರಿ ಝೆಲೆನ್ಸ್ಕಿ ಬ್ರಿಟನ್ನಿನ ಪ್ರವಾಸಕ್ಕೆ ಹೋಗಿದ್ದಾರೆ.

ಬ್ರಿಟನ್ನಿನ ಪ್ರಧಾನಮಂತ್ರಿ ಋಷಿ ಸುನಕ್ ಇವರು, ಝೆಲೆನ್ಸ್ಕಿ ಇವರ ಬ್ರಿಟನ್ನಿನ ಪ್ರವಾಸದಿಂದ ಅವರ ಸಾಹಸ, ದೃಢ ಸಂಕಲ್ಪ ಹಾಗೂ ಹೋರಾಡುವ ಶಕ್ತಿಯ ಅರಿವಾಗುತ್ತದೆ, ಎಂದು ಹೇಳಿದರು. ೨೦೧೪ ರ ನಂತರ ಬ್ರಿಟನ್ ಯುಕ್ರೇನ್‌ನ ಸೈನಿಕರಿಗೆ ಮಹತ್ವಪೂರ್ಣ ತರಬೇತಿ ನೀಡಿತು. ಆದ್ದರಿಂದ ಅವರು ತಮ್ಮ ದೇಶದ ರಕ್ಷಣೆ ಮಾಡಿದರು. ನನಗೆ ಅವರ ಅಭಿಮಾನವಿದೆ. ಈಗ ನಾವು ನೌಕಾದಳ ಹಾಗೂ ವಾಯುದಳದ ಸೈನಿಕರಿಗೂ ತರಬೇತಿ ನೀಡುವೆವು ಎಂದು ಹೇಳಿದರು.