ಬುದ್ಧಿವಾದಿಗಳಿಗಿಂತ ‘ನನಗೆ ಕಾಣಿಸುತ್ತಿಲ್ಲ’, ಎಂಬ ಸತ್ಯ ಸ್ವೀಕರಿಸುವವರು ಶ್ರೇಷ್ಠರು !
‘ಕಣ್ಣಿನಪೊರೆ ಬಂದ ವ್ಯಕ್ತಿಗೆ ಸಣ್ಣ ಅಕ್ಷರ ಕಾಣಿಸುವುದಿಲ್ಲ. ಅವನಿಗೆ ಯಾರಾದರೂ ಸಣ್ಣ ಅಕ್ಷರವನ್ನು ಓದಲು ಹೇಳಿದರೆ, ಅವನು ‘ಅಲ್ಲಿ ಅಕ್ಷರವಿದೆ ಎಂದು ನೀವು ಸುಳ್ಳು ಹೇಳಿ ನನಗೆ ಭ್ರಮೆ ಯನ್ನು ಉಂಟು ಮಾಡುತ್ತಿರುವಿರಿ’ ಎಂದು ಹೇಳುವುದಿಲ್ಲ. ಬದಲಾಗಿ ‘ನನಗೆ ಸಣ್ಣ ಅಕ್ಷರ ಕಾಣಿಸುವುದಿಲ್ಲ’ ಎಂದು ಹೇಳುತ್ತಾನೆ. ಕನ್ನಡಕ ಹಾಕಿಕೊಂಡಾಗ ಅವನಿಗೆ ಸಣ್ಣ ಅಕ್ಷರ ಓದಲು ಸಹಾಯವಾಗುತ್ತದೆ. ತದ್ವಿರುದ್ಧ ಬುದ್ಧಿವಾದಿಗಳಿಗೆ ಯಾವುದು ಸ್ವೀಕಾರವಾಗುವುದಿಲ್ಲವೋ, ಅದನ್ನು ಅವರು ಸುಳ್ಳು ಎಂದು ಹೇಳುತ್ತಾರೆ. ‘ಸಾಧನೆಯಿಂದ ಸೂಕ್ಷ್ಮ ದೃಷ್ಟಿ ಪ್ರಾಪ್ತವಾದ ಮೇಲೆ ಬಹಳಷ್ಟು ಅರ್ಥ ಮಾಡಿಕೊಳ್ಳಬಹುದು’, ಇದು ಅವರಿಗೆ ಸ್ವೀಕಾರವಾಗುವುದಿಲ್ಲ !’
ಸರ್ವಧರ್ಮಸಮಭಾವದವರ ಸತ್ಯ ಸ್ವರೂಪ !
‘ಸರ್ವಧರ್ಮಸಮಭಾವ’ ಎಂದು ಹೇಳುವವರು ಕುರುಡರು, ಕಿವುಡರು ಮತ್ತು ಮಂದಬುದ್ಧಿಯವರಾಗಿದ್ದಾರೆ ಮತ್ತು ಅವರಲ್ಲಿ ಸತ್ಯ ತಿಳಿದುಕೊಳ್ಳಬೇಕೆಂಬ ಇಚ್ಛೆಯೂ ಇಲ್ಲ !’
ಅಧ್ಯಾತ್ಮದ ಮಹತ್ವ ತಿಳಿಯದರಾಜಕಾರಣಿಗಳಿಂದ ದೇಶದ ನಾಶವಾಗಿದೆ !
‘ಅಧ್ಯಾತ್ಮದ ಹೊರತಾಗಿ, ಬೇರೆ ಯಾವುದಾದರೂ ವಿಷಯ’ಸಾತ್ತ್ವಿಕ, ಸಜ್ಜನ, ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿ’ ಆಗುವುದನ್ನು ಕಲಿಸುವುದೇ ? ಹೀಗಿರುವಾಗಲೂ, ಸ್ವಾತಂತ್ರ್ಯ ನಂತರದ ೭೫ ವರ್ಷಗಳಿಂದ ಅಧ್ಯಾತ್ಮದ ಹೊರತಾಗಿ ಎಲ್ಲ ವಿಷಯಗಳನ್ನು ಕಲಿಸಿದ ಇಲ್ಲಿಯ ವರೆಗಿನ ಭಾರತದ ರಾಜಕಾರಣಿಗಳು ದೇಶವನ್ನು ನಾಶ ಮಾಡಿದ್ದಾರೆ.’
ರಾಜಕಾರಣಿಗಳಂತೆ, ಸಂತರು ಎಂದಿಗೂ ಜಗಳವಾಡುವುದಿಲ್ಲ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ