ಹಿಂದೂ ಸಂಸ್ಕ್ರತಿಯ ಮಹತ್ವ

‘ವಯೋವೃದ್ಧರು ಕೇವಲ ದೇವರು ಅವರ ಅರ್ಚನೆ ಹಾಗೂ ಪೂಜಾಪಠಣ ಇವುಗಳಲ್ಲಿ ಸಮಯವನ್ನು ಕಳೆಯಬೇಕು’, ಎಂದು ಮನಸ್ಸಿನ ಮೇಲೆ ಬಿಂಬಿಸಲಾಗುತ್ತದೆ ಆದರೆ ವಯೋವೃದ್ಧ ಬಂಧು-ಭಗಿನಿಯರೇ ತಮ್ಮ ಕ್ಷಮತೆಗನುಸಾರ ಯಾರಿಗೆ ಯಾವುದರಲ್ಲಿ ಆಸಕ್ತಿಯಿದೆಯೋ ಅದರಂತೆ ಆಗುವಷ್ಟು ಉಳಿದ ಕಾಲವನ್ನು ಹೆಚ್ಚು ಸಂತೋಷದಿಂದ ಕಳೆಯಬಹುದು.’ – ಓರ್ವ ಲೇಖಕರು

(‘ನಮ್ಮ ಸಮಯವನ್ನು ಮೋಜುಮಜಾದಲ್ಲಿ ಕಳೆಯಬೇಕು’, ಈ ವಿಚಾರ ಪಾಶ್ಚಾತ್ಯರದ್ದಾಗಿದೆ. ಈ ವಿಚಾರಸರಣಿಯಿಂದ ಮನುಷ್ಯ ರಜ-ತಮ ಗುಣದ ಅಧೀನಕ್ಕೆ ಒಳಗಾಗುತ್ತಾನೆ. ಹಿಂದೂ ಸಂಸ್ಕ್ರತಿಯಲ್ಲಿ ಧರ್ಮಾಚರಣೆಗೆ ಮಹತ್ವವಿದೆ. ಧರ್ಮಾಚರಣೆ ಮಾಡಿ ಸ್ವತಃದ ಸತ್ವಗುಣವನ್ನು ಹೆಚ್ಚಿಸುವುದು ಅಂದರೆ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು’ ಇದು ಮನುಷ್ಯಜನ್ಮದ ಮೂಲ ಉದ್ದೇಶವಿರುತ್ತದೆ ಇದನ್ನು ಸಾಕಾರಗೊಳಿಸಲು ಮುಪ್ಪಿನಲ್ಲಿ ಅಲ್ಲ ಚಿಕ್ಕಂದಿನಿಂದಲೂ ಪ್ರಯತ್ನಿಸುವುದು ಆವಶ್ಯಕವಾಗಿದೆ. ಈ ಸಂಸ್ಕಾರ ಮನಸ್ಸಿನ ಮೇಲೆ ಮೂಡಿಸಲು ತಂದೆ-ತಾಯಿ ಹಾಗೂ ಶಿಕ್ಷಕರು ಜೋರು ಮಾಡುತ್ತಾರೆ, ಹೊಡೆಯುತ್ತಾರೆ ಅಥವಾ ಕೆಲವೊಮ್ಮೆ ಶಿಕ್ಷೆಯನ್ನು ನೀಡುತ್ತಾರೆ. ಏಕೆಂದರೆ ಆಯುಷ್ಯವಿಡಿ ‘ತಿನ್ನಿರಿ, ಕುಡಿಯಿರಿ ಹಾಗೂ ಮಜಾ ಮಾಡಿ’, ಈ ಸಂಸ್ಕಾರ ದೃಢವಾದರೆ ಮುಪ್ಪಿನಲ್ಲಿ ಅಂದರೆ ವಾನಪ್ರಸ್ಥಾಶ್ರಮದಲ್ಲಿ ಈ ಮಾಯೆಯ ವಿಚಾರದಿಂದ ಹೊರಗೆ ತೆಗೆಯುವುದು ಹಾಗೂ ಚಿತ್ತವನ್ನು ದೇವರ ಚರಣದಲ್ಲಿ ಸ್ಥಿರಗೊಳಿಸುವುದು ಮನುಷ್ಯನಿಗೆ ಕಠಿಣವಾಗುವುದು’. – ಸಂಕಲನಕಾರರು)