‘ಸನಾತನದ ಸಮಷ್ಟಿ ಸ್ತರದ ಕಾರ್ಯವು ಆರಂಭವಾದ ನಂತರ ಕೆಟ್ಟ ಶಕ್ತಿಗಳು ಅದನ್ನು ವಿರೋಧಿಸಲು ವಿವಿಧ ಸ್ತರಗಳಲ್ಲಿ ಮತ್ತು ವಿವಿಧ ಮಾಧ್ಯಮಗಳಿಂದ ತೊಂದರೆ ನೀಡಲು ಆರಂಭಿಸಿದವು. ಈ ತೊಂದರೆಗಳಿಂದಾಗಿ ಸನಾತನಕ್ಕೆ ಅನೇಕ ಸಂತರಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಮಾಡಬೇಕಾದ ವಿವಿಧ ಉಪಾಯಗಳನ್ನು ಕಲಿಯಲು ಸಾಧ್ಯ ವಾಗುತ್ತಿದೆ. ತೊಂದರೆಯ ನಿವಾರಣೆಗಾಗಿ ವಿವಿಧ ಉಪಚಾರ ಪದ್ಧತಿಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತು ಮತ್ತು ಕಾಲಕ್ಕನುಸಾರ ಸನಾತನಕ್ಕೆ ಅವುಗಳ ಬಗ್ಗೆಯೂ ಬಹಳ ಪ್ರಮಾಣದಲ್ಲಿ ಸಂಶೋಧನೆಯನ್ನು ಮಾಡಲು ಸಾಧ್ಯವಾಯಿತು. ಸದ್ಯದ ಕಾಲದಲ್ಲಿ ಮಹರ್ಷಿಗಳ ಮಾಧ್ಯಮದಿಂದಲೂ ವಿವಿಧ ಉಪಚಾರ ಪದ್ಧತಿಗಳು ತಿಳಿಯುತ್ತಿವೆ. ಸಾಧಕರಿಗೆ ಕೆಲವು ವರ್ಷಗಳ ಕಾಲ ಈ ತೊಂದರೆಗಳನ್ನು ಸಹಿಸಬೇಕಾಗಿ ಬಂದರೂ, ಅದರಿಂದ ಮುಂದಿನ ಪೀಳಿಗೆಗಳಿಗಾಗಿ ಈ ಉಪಾಯಪದ್ಧತಿಗಳು ಸಿದ್ಧವಾಗಿವೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೫.೧೨.೨೦೨೨)
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |