‘ಸಾಧನೆಯಲ್ಲಿ ಮನಸ್ಸಿನ ಸ್ತರದಲ್ಲಾಗುವ ಅಯೋಗ್ಯ ವಿಚಾರಪ್ರಕ್ರಿಯೆ ಹೆಚ್ಚು ಬಾಧಕವಿರುತ್ತದೆ. ಅಂತರ್ಮುಖತೆಯ ಅಭಾವದಿಂದ ಸಾಧಕನಿಗೆ ತನ್ನ ತಪ್ಪು ತಿಳಿಯುವುದಿಲ್ಲ ಮತ್ತು ಅದು ಮನಸ್ಸಿನ ಸ್ತರದ ತಪ್ಪಾಗಿರು ವುದರಿಂದ ಇತರರ ಗಮನಕ್ಕೆ ಬರುವುದಿಲ್ಲ. ಈ ವಿಚಾರಪ್ರಕ್ರಿಯೆ ಅಯೋಗ್ಯಕೃತಿಯ ಮಾಧ್ಯಮದಿಂದ ವ್ಯಕ್ತವಾಗುತ್ತಿರುತ್ತದೆ. ಆದುದರಿಂದ ಈ ಅಯೋಗ್ಯ ಕೃತಿಯನ್ನು ಸಂಬಂಧಪಟ್ಟವರಿಗೆ ಅರಿವು ಮಾಡಿಕೊಟ್ಟರೆ ಅವನಿಗೆ ಅವನ ಅಯೋಗ್ಯ ವಿಚಾರಪ್ರಕ್ರಿಯೆಯ ಅರಿವಾಗಲು ಸಹಾಯ ವಾಗುತ್ತದೆ, ಉದಾ. ಓರ್ವ ಸಾಧಕನ ಮನಸ್ಸಿನಲ್ಲಿ ಇನ್ನೊಬ್ಬ ಸಾಧಕನ ಬಗ್ಗೆ ಇರುವ ಪೂರ್ವಗ್ರಹ ಇತರರ ಗಮನಕ್ಕೆ ಬರುವುದಿಲ್ಲ; ಆದರೆ ಯಾವುದೇ ಪ್ರಸಂಗದಲ್ಲಿ ‘ಓರ್ವ ಸಾಧಕನಿಗೆ ಸಾಧ್ಯವಿದ್ದರೂ ಅವನು ಇನ್ನೊಬ್ಬ ಸಾಧಕನಿಗೆ ಸಹಾಯ ಮಾಡದಿದ್ದರೆ’, ಈ ಅಯೋಗ್ಯ ಕೃತಿಯ ಅರಿವನ್ನು ಸಾಧಕನಿಗೆ ಮಾಡಿಕೊಟ್ಟರೆ, ‘ನಾನು ಪೂರ್ವಗ್ರಹದಿಂದ ಆ ಸಾಧಕನಿಗೆ ಸಹಾಯ ಮಾಡಿಲ್ಲ’, ಎಂಬುದು ಅವನ ಗಮನಕ್ಕೆ ಬರಬಹುದು. ಆದುದರಿಂದ ಸಾಧನೆಯಲ್ಲಿ ಸ್ಥೂಲದಲ್ಲಾಗುವ ತಪ್ಪುಗಳನ್ನುಸಂಬಂಧಪಟ್ಟವರಿಗೆ ಹೇಳುವುದು, ಅವನ ಸಾಧನೆಗಾಗಿ ಅತ್ಯಂತ ಮಹತ್ವದ್ದಾಗಿರುತ್ತದೆ.’
– (ಪರಾತ್ಪರ ಗುರು) ಡಾ. ಆಠವಲೆ (೩೦.೧೨.೨೦೨೧)