`ಫೈಝರ’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ಕೊರೊನಾ ಮೇಲಿನ ಪರಿಣಾಮಕಾರಿ ಇಲ್ಲದ ಲಸಿಕೆಗೆ ಸಂಬಂಧಿಸಿರುವ ಪ್ರಶ್ನೆಗಳ ಕಡೆಗೆ ನಿರ್ಲಕ್ಷ್ಯ !

ಫೈಝರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಬರ್ಟ ಬೋರ್ಲಾ

ದಾವೋಸ (ಸ್ವಿಡ್ಜರಲ್ಯಾಂದ) – ಅಮೇರಿಕಾದ ಔಷಧ ಕಂಪನಿ ಫೈಝರನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಬರ್ಟ ಬೋರ್ಲಾ ಇವರು ಫೈಝರ ಕೊರೊನಾ ಲಸಿಕೆಯ ಗುಣಮಟ್ಟಕ್ಕೆ ಸಂಬಂಧಿಸಿರುವ ಪ್ರಶ್ನೆಯನ್ನು ಮೇಲಿಂದ ಮೇಲೆ ನಿರ್ಲಕ್ಷಿಸಿದರು. ಅವರ ಒಂದು ವಿಡಿಯೋ ಸಧ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. `ವರ್ಲ್ಡ ಇಕನಾಮಿಕ್ ಫೋರಮ್’ನ ಸಭೆಯಲ್ಲಿ ಅಲ್ಬರ್ಟ ಬೋರ್ಲಾರನ್ನು ಕೊರೊನಾ ಲಸಿಕೆಯ ಗುಣಮಟ್ಟದ ವಿಷಯದಲ್ಲಿ ಅನೇಕ ಬಾರಿ ಪ್ರಶ್ನಿಸಲಾಯಿತು; ಆದರೆ ಅವರು ಈ ಪ್ರಶ್ನೆಗೆ ಉತ್ತರಿಸುವುದರಿಂದ ತಪ್ಪಿಸಿಕೊಂಡರು. ಅಲ್ಲದೇ ಪತ್ರಕರ್ತರು ಈ ಲಸಿಕೆಯ ವಿಷಯದಲ್ಲಿ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ವಿಚಾರಿಸಿದಾಗ ಅಲ್ಬರ್ಟ ಬೋರ್ಲಾ `ಧನ್ಯವಾದ ಮತ್ತು ಶುಭದಿನ’ ಎಂದು ಹೇಳುತ್ತಾ ಪ್ರಶ್ನೆಗಳನ್ನು ಬದಿಗೆ ಸರಿಸಿದರು.

ರಾಹುಲಗಾಂಧಿ, ಪಿ. ಚಿದಂಬರಮ್ ಮತ್ತು ಜಯರಾಮ ರಮೇಶ ಇವರು ವಿದೇಶಿ ಲಸಿಕೆಗೆ ಭಾರತದಲ್ಲಿ ಪ್ರೋತ್ಸಾಹಿಸುತ್ತಿದ್ದರು ! – ಕೇಂದ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯ ಮಂತ್ರಿ

ಕೇಂದ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯಮಂತ್ರಿ ರಾಜೀವ ಚಂದ್ರಶೇಖರ

ಕೇಂದ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯಮಂತ್ರಿ ರಾಜೀವ ಚಂದ್ರಶೇಖರ ಇವರು ದಾವೋಸನ ಫೈಝರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಬರ್ಟ ಬೋರ್ಲಾ ಇವರ ಸಂದರ್ಶನದ ವಿಡಿಯೋ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು `ಕಾಂಗ್ರೆಸ್ ನಾಯಕ ರಾಹುಲ ಗಾಂಧಿ, ಪಿ. ಚಿದಂಬರಮ್ ಮತ್ತು ಜಯರಾಮ ರಮೇಶ ಈ ಮೂವರೂ ವಿದೇಶಿ ಲಸಿಕೆಯನ್ನು ಭಾರತದಲ್ಲಿ ಪ್ರೋತ್ಸಾಹಿಸುತ್ತಿದ್ದರು’, ಎಂದು ಆರೋಪಿಸಿದ್ದಾರೆ.