ಬ್ರಿಟನ್ನಿನ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಸ್ಟಿಕರ !

ಆಕ್ರೋಶಗೊಂಡ ಹಿಂದೂಗಳಿಂದ ಉತ್ಪಾದನೆಯನ್ನು ಹಿಂಪಡೆಯುವಂತೆ ಒತ್ತಾಯ !

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೇ ನಿಜ ಸ್ಥಿತಿಯನ್ನು ತಿಳಿಸುವುದಾಗಿದೆ

ಲಂಡನ್ (ಬ್ರಿಟನ್) – ಬ್ರಿಟನ್ನಿನ ‘ಬಿ.ಎನ್. ಮ್ಯಾಂಗರ್’ ಈ ಮದ್ಯ ತಯಾರಿಕಾ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಚಿತ್ರವಿರುವ ಸ್ಟಿಕ್ಕರ್‌ಅನ್ನು ಹಾಕಿದೆ. ಅದರಿಂದ ಹಿಂದೂಗಳು ಕಂಪನಿಯ ವಿರುದ್ಧ ಪ್ರತಿಭಟಿಸಿದ್ದಾರೆ ಮತ್ತು ‘ಈ ಉತ್ಪನ್ನವನ್ನು ಹಿಂಪಡೆಯಿರಿ ಮತ್ತು ಈ ಸ್ಟಿಕ್ಕರ್ ಅನ್ನು ತೆಗೆದುಹಾಕಿ, ಇಲ್ಲದಿದ್ದರೆ ತೀವ್ರ ಆಂದೋಲನ ಮಾಡಲಾಗುವುದು’ ಎಂದು ಎಚ್ಚರಿಸಿದ್ದಾರೆ. ಬ್ರಿಟನ್ನನಲ್ಲಿ ಹಿಂದೂಗಳು ಮತ್ತು ಭಾರತೀಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ `ಇನ್ ಸೈಟ್ ಯುಕೆ’ ಈ ಸಾಮಾಜಿಕ ಮಾಧ್ಯಮದ ವೇದಿಕೆಯು ಈ ಬಗ್ಗೆ ಮಾಹಿತಿ ನೀಡಿದೆ.

ಈ ಹಿಮದೆಯೂ ೨೦೨೧ ರಲ್ಲಿ ಫ್ರಾನ್ಸ್ನ ಗ್ರೆನೇಡ್-ಸುರ್-ಗೊರಾನ್ ಎಂಬ ಮದ್ಯ ಉತ್ಪಾದನಾ ಕಂಪನಿಯಿಂದ `ಶಿವಾ ಬಿಯರ್’ ಮಾರುಕಟ್ಟೆಗೆ ತಂದಿತ್ತು. ಹಿಂದೂಗಳು ಅದನ್ನೂ ಕೂಡ ವಿರೋಧಿಸಿದ್ದರು. ೨೦೧೮ ರಲ್ಲಿ ಡರ್ಬಿಶೈರ್ ಎಂಬ ಮದ್ಯ ಉತ್ಪಾದನಾ ಸಂಸ್ಥೆಯು ಬಿಯರ್ ಬಾಟಲಿಯ ಮೇಲೆ ಶ್ರೀ ಕಾಳಿಮಾತೆಯ ಚಿತ್ರವಿರುವ ಸ್ಟಿಕ್ಕರ್‌ಗಳನ್ನು ಹಾಕಿತ್ತು. ಇದನ್ನು ಸಹ ಹಿಂದೂ ಸಂಘಟನೆಗಳು ವಿರೋಧಿಸಿದವು.

ಸಂಪಾದಕೀಯ ನಿಲುವು

ಇಂತಹ ಘಟನೆಗಳಿಗೆ ಸ್ಥಳೀಯ ಹಿಂದೂಗಳು ಹಾಗೆಯೇ ಭಾರತದಲ್ಲಿನ ಹಿಂದೂ ಸಂಘಟನೆಗಳು ವಿರೋಧಿಸಿದರೂ ಭಾರತ ಸರಕಾರವು ಇದರ ಬಗ್ಗೆ ವಿರೋಧಿಸಿ ಸಂಬಂಧಪಟ್ಟ ಕಂಪನಿಗಳ ಮೇಲೆ ಒತ್ತಡ ಹೇರುವ ಅಗತ್ಯವಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !