ಸತತ ಇತರರ ದೋಷಗಳನ್ನೇ ನೋಡಿ ಬಹಿರ್ಮುಖರಾಗಬೇಡಿ !

(ಪೂ.) ಸಂದೀಪ ಆಳಶಿ

(ಪೂ.) ಸಂದೀಪ ಆಳಶಿ‘ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿರುವ ಅನೇಕ ಸಾಧಕರು ಹಲವು ಬಾರಿ ಇತರರ ದೋಷವನ್ನೇ ಹೆಚ್ಚು ನೋಡುತ್ತಿರುತ್ತಾರೆ. ಆದ್ದರಿಂದ ಇಂತಹ ಸಾಧಕರಿಗೆ ಇತರರ ಬಗ್ಗೆ ಪ್ರತಿಕ್ರಿಯೆಗಳು ಬರುತ್ತವೆ ಅಥವಾ ಅವರು ಅವರ ಬಗ್ಗೆ ಟೀಕಿಸಿ ಮಾತನಾಡುತ್ತಾರೆ ಅಥವಾ ವಿಕಲ್ಪವನ್ನು ಹರಡುತ್ತಾರೆ. ಹೀಗೆ ಮಾಡುವ ಸಾಧಕರ ಮನಸ್ಸು ಕಲುಷಿತವಾಗಿ ವೃತ್ತಿಯು ಬಹಿರ್ಮುಖವಾಗುತ್ತದೆ. ಇದರಿಂದ ಈಶ್ವರೀ ಅನುಸಂಧಾನದಲ್ಲಿಯೂ ಅವರು ಹೆಚ್ಚು ಸಮಯ ಇರುವುದಿಲ್ಲ. ಸಾಧಕರಲ್ಲಿ ಇತರರ ದೋಷಗಳನ್ನು ನೋಡುವುದೇ ಹೆಚ್ಚಾಗುತ್ತಿದ್ದರೆ, ಅವರು ಆ ಸಮಯದಲ್ಲಿ ಗುರುಗಳಲ್ಲಿ ಅಥವಾ ದೇವರಲ್ಲಿ ಕ್ಷಮೆ ಯಾಚನೆಯನ್ನು ಮಾಡಿ, ‘ಪ್ರಭು, ನೀವೇ ಆ ಸಾಧಕನಿಗೆ ಸದ್ಬುದ್ಧಿಯನ್ನು ನೀಡಿರಿ; ನನಗೆ ಈಶ್ವರೀ ಅನುಸಂಧಾನದಲ್ಲಿ ಸ್ಥಿರವಾಗಿಡಿ’, ಎಂದು ಪ್ರಾರ್ಥಿಸಬೇಕು. ಸಾಧಕರು ದೋಷ-ನಿರ್ಮೂಲನೆಗಾಗಿ ಸ್ವಯಂಸೂಚನೆಗಳೊಂದಿಗೆ ಇತರರ ಗುಣಗಳನ್ನು ನೆನಪಿಸಿಕೊಳ್ಳಲು ಸಹ ಪ್ರಯತ್ನಿಸಬೇಕು. ಇದರಿಂದ ಅವರ ಮನಸ್ಸು ಇತರರ ಬಗೆಗಿನ ನಕಾರಾತ್ಮಕ ವಿಚಾರಗಳಿಂದ ಬೇಗ ಹೊರಗೆ ಬರುತ್ತದೆ.’

– (ಪೂ.) ಸಂದೀಪ ಆಳಶಿ (೧೮.೧೨.೨೦೨೨)