ತಾಲಿಬಾನ್ ನಿಂದ ಮೋಸ ಹೋದ `ತೆಹರಿಕ್-ಏ-ತಾಲಿಬಾನ್ ಪಾಕಿಸ್ತಾನ’ !
ಇಸ್ಲಾಮಾಬಾದ – ಪಾಕಿಸ್ತಾನದಲ್ಲಿ ಕಾರ್ಯನಿರತವಾಗಿರುವ `ತೆಹರಿಕ್-ಏ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನಕ್ಕೆ ನೇರ ಸಾರ್ವಭೌಮತಗೆ ಸವಾಲು ಹಾಕಿದೆ . ಈ ಸಂಘಟನೆಯಿಂದ ದೇಶದಲ್ಲಿ ಸಮಾಂತರ ಸರಕಾರ ಮತ್ತು ಮಂತ್ರಿ ಮಂಡಲದ ಸ್ಥಾಪನೆ ಮಾಡಿರುವ ಘೋಷಣೆ ಮಾಡಿದೆ. ಈ ಭಯೋತ್ಪಾದಕ ಸಂಘಟನೆಯ ರಕ್ಷಣಾ ಸಚಿವ ಮತ್ತು ಶಿಕ್ಷಣ ಸಚಿವರ ಕೂಡ ನೇಮಕ ಮಾಡಲಾಗಿದೆ. ಇದರ ಜೊತೆಗೆ ರಾಜಕೀಯ ಘಟನಾವಳಿ, ಫತ್ವಾ, ಗೂಢಾಚಾರ ಮತ್ತು ಕಟ್ಟಡ ಕಾಮಗಾರಿ ಇದಕ್ಕಾಗಿ ಸ್ವತಂತ್ರ ಸಚಿವಾಲಯ ಇರಲಿದೆ.
Tehreek-e-Taliban Pakistan challenges Pakistan’s sovereignty, declares parallel government with new cabinet https://t.co/Vh8RdvWN3W
— OpIndia.com (@OpIndia_com) January 1, 2023
ಈ ಸಂಘಟನೆಯ ಉತ್ತರ ಪಾಕಿಸ್ತಾನದಲ್ಲಿ ಮಲಾಕಂದ, ಗಿಲಗಿಟ್-ಬಾಲ್ಟಿಸ್ತಾನ್, ಮರ್ದಾನ್ ಮತ್ತು ಪೇಶಾವರ್ ಹಾಗೂ ದಕ್ಷಿಣ ಪಾಕಿಸ್ತಾನದಲ್ಲಿ ಡೇರಾ ಇಸ್ಮಾಯಿಲ್ ಖಾನ್, ಬನ್ನು ಮತ್ತು ಕೊಹಟ್ ಈ ಪ್ರದೇಶದಲ್ಲಿ ಪ್ರಭಾವವಿದೆ. `ಟಿಟಿಪಿ’ಯ ರಕ್ಷಣಾ ಸಚಿವಾಲಯದ ನೇತೃತ್ವ ಮುಫ್ತಿ ಮುಜಾಹಿಮ ಈ ಭಯೋತ್ಪಾದಕ ಸಂಘಟನೆ ಮಾಡುತ್ತಿದೆ. ಈ ಭಯೋತ್ಪಾದಕ ಸಂಘಟನೆಯ ಬಳಿ ಆತ್ಮಹುತಿ ಭಯೋತ್ಪಾದಕರ ತಂಡವಿದೆ. ತೆಹರಿಕ್-ಏ-ತಾಲಿಬಾನದ ಬಳಿ ೭ ಸಾವಿರದಿಂದ ೧೦ ಸಾವಿರದ ವರೆಗೆ ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದೆ, ಎಂದು ಪಾಕಿಸ್ತಾನದ ಸರಕಾರಿ ಸೂತ್ರಗಳಿಂದ ಮಾಹಿತಿ ನೀಡಲಾಗಿದೆ. ಈ ಭಯೋತ್ಪಾದಕ ಸಂಘಟನೆಯಿಂದ ೨೦೨೨ ರಲ್ಲಿ ಪಾಕಿಸ್ತಾನದ ರಕ್ಷಣಾ ನೆಲೆಗಳ ಮೇಲೆ ೧೪೮ ಸಲ ದಾಳಿ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನದ ಸರಕಾರ ಇದ್ದರಿಂದ ಪಾಕಿಸ್ತಾನದಲ್ಲಿ `ಟಿಟಿಪಿ’ಗೆ ಪುಷ್ಟಿ ದೊರೆತಿದೆ. ೨೦೨೧ ರಲ್ಲಿ ಕೂಡ ಟಿಟಿಪಿಯು ಖೈಬರ್ ಪಖ್ಟುನಖ್ವಾ ಮತ್ತು ಬಲೂಚಿಸ್ತಾನ ಇಲ್ಲಿ ಕೂಡ ನೂರಾರು ಸಲ ಸೈನ್ಯದ ನೆಲೆಯ ಮೇಲೆ ದಾಳಿ ಮಾಡಿದೆ. ಇತರ ಸೂತ್ರಗಳು ನೀಡಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನದಲ್ಲಿ ಇತರ ಭಯೋತ್ಪಾದಕ ಸಂಘಟನೆಗಳು ಕೂಡ ಟಿಟಿಪಿ ಜೊತೆ ಕೈಜೋಡಿಸಿವೆ.
ಸಂಪಾದಕೀಯ ನಿಲುವು
|