೧. ಕಳೆದ ಅನೇಕ ವರ್ಷಗಳಿಂದ ಮುಸಲ್ಮಾನ ದೇಶಗಳಿಂದ ಭಾರತಕ್ಕೆ ಸ್ಥಳಾಂತರವಾಗಿರುವ ಹಿಂದೂಗಳಿಗೆ ನರಕಯಾತನೆ ಭೋಗಿಸಬೇಕಾಗುವುದು
ಮುಸಲ್ಮಾನ ದೇಶಗಳಲ್ಲಿನ ಹಿಂದೂಗಳ ದಯನೀಯ ಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ಮುಸಲ್ಮಾನ ರಾಷ್ಟ್ರಗಳಲ್ಲಿ ಮತಾಂಧರು ಅಲ್ಲಿನ ಹಿಂದೂಗಳಿಗೆ ಪ್ರತಿದಿನ ತೊಂದರೆ ಕೊಡುತ್ತಾರೆ. ಹಿಂದೂ ಹುಡುಗಿಯರನ್ನು ಮತ್ತು ಮಹಿಳೆಯರನ್ನು ಅಪಹರಿಸಿ ಬಲವಂತವಾಗಿ ಮುಸಲ್ಮಾನರೊಂದಿಗೆ ವಿವಾಹವನ್ನು ಮಾಡಿಸುತ್ತಾರೆ, ಹಿಂದೂಗಳ ಭೂಮಿಯನ್ನೂ ಕಸಿದುಕೊಳ್ಳಲಾಗುತ್ತದೆ. ಇಷ್ಟು ಮಾತ್ರವಲ್ಲ, ಹಿಂದೂ ಮಂದಿರಗಳನ್ನು ಒಡೆದು ದೇವತೆಗಳ ಮೂರ್ತಿಗಳ ವಿಡಂಬನೆಯನ್ನು ಮಾಡಲಾಗುತ್ತದೆ. ಆದ್ದರಿಂದ ಅಲ್ಲಿ ಹಿಂದೂಗಳಿಗೆ ಜೀವಿಸಲು ಕಠಿಣವಾಗಿದೆ. ಅವರಿಗೆ ಜೀವವನ್ನು ಉಳಿಸಿಕೊಳ್ಳಲು ಭಾರತ ಬಿಟ್ಟು ಬೇರೆ ಪರ್ಯಾಯವಿಲ್ಲ. ಪಾಕಿಸ್ತಾನದಿಂದ ಸ್ಥಳಾಂತರವಾಗಿರುವ ಹಿಂದೂಗಳು ಈ ಭಾರತ ಭೂಮಿಗೆ ಆಶ್ರಯಕ್ಕೆಂದು ಬಂದರು; ಆದರೆ ಇಲ್ಲಿಯೂ ಅವರು ದುಃಖದಲ್ಲಿಯೇ ಇದ್ದಾರೆ. ಸ್ಥಳಾಂತರವಾಗಿರುವ ಕೆಲವು ಹಿಂದೂಗಳು ದೆಹಲಿಯಲ್ಲಿ ಆದರ್ಶನಗರದ ಪರಿಸರದಲ್ಲಿ ವಾಸಿಸುತ್ತಿದ್ದಾರೆ. ಕಳೆದ ೬ ವರ್ಷಗಳಿಂದ ಅವರಿಗೆ ಅಲ್ಲಿ ವಿದ್ಯುತ್ ಪೂರೈಕೆಯಿಲ್ಲ. ವಿದ್ಯುತ್ ಪೂರೈಕೆಗೆ ‘ಗ್ರಾಹಕರ ಅಧಿಕಾರ ನಿಯಮದಲ್ಲಿನ ನಿಯಮ ೯ (೧)’ ಕ್ಕನುಸಾರ ಗ್ರಾಹಕರಿಗೆ ಒಡೆತನ ಹಕ್ಕಿನ ಪುರಾವೆಯ ಅವಶ್ಯಕತೆ ಇಲ್ಲ. ಇಲ್ಲಿ ಈ ನಿಯಮವನ್ನು ನಿರಾಶ್ರಿತ ಹಿಂದೂಗಳಿಗೆ ಉಪಯೋಗಿಸಿಲ್ಲ.
ಇದು ಈ ಉದಾಹರಣೆಯಿಂದ ತಿಳಿಯಬಹುದು, ಒಂದು ಕಟ್ಟಡದ ಒಬ್ಬ ಮಾಲೀಕನಿದ್ದು ಅವನ ಅನುಮತಿಯಿಂದ ಅಲ್ಲಿ ಅನೇಕ ಜನರು ಬಾಡಿಗೆದಾರರೆಂದು ಇರುತ್ತಾರೆ. ಅದರಲ್ಲಿ ಅವರಿಗೆ ಪ್ರತ್ಯೇಕ ವಿದ್ಯುತ್ ಮೀಟರ್‌ನ ಮೂಲಕ ವಿದ್ಯುತ್ ಪೂರೈಕೆಯಾಗುತ್ತದೆ. ದೆಹಲಿಯಲ್ಲಿ ಚಳಿಗಾಲದಲ್ಲಿ ೪ ಡಿಗ್ರಿ ಸೆಲ್ಸಿಯಸ್‌ನ ವರೆಗೆ ಹಾಗೂ ಬೇಸಿಗೆಯಲ್ಲಿ ೪೦-೪೫ ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನವಿರುತ್ತದೆ. ಕಳೆದ ಅನೇಕ ವರ್ಷಗಳಿಂದ ಅವರು ತಮ್ಮ ಮನೆಗಳಲ್ಲಿ ವಿದ್ಯುತ್ ಇಲ್ಲದೆ ದಿನಗಳನ್ನು ಕಳೆಯುತ್ತಿದ್ದಾರೆ.
೨. ಕಾಶ್ಮೀರದಿಂದ ಸ್ಥಳಾಂತರವಾಗಿರುವ ಹಿಂದೂಗಳು ಕಳೆದ ೩೨ ವರ್ಷಗಳಿಂದ ಮಾತೃಭೂಮಿಯ ನಿರೀಕ್ಷೆಯಲ್ಲಿದ್ದಾರೆ
ಮತಾಂಧರ ತೀವ್ರ ಅತ್ಯಾಚಾರಗಳಿಂದ ೧೯೯೦ ನೇ ಇಸವಿಯಲ್ಲಿ ಕಾಶ್ಮೀರದಲ್ಲಿನ ನಾಲ್ಕುವರೆ ಲಕ್ಷ ಹಿಂದೂಗಳಿಗೆ ಅಲ್ಲಿಂದ ಪಲಾಯನ ಮಾಡಬೇಕಾಯಿತು. ಅನಂತರ ಅವರಿಗೆ ದೆಹಲಿ ಮತ್ತು ಇತರ ಅನೇಕ ನಗರಗಳಲ್ಲಿ ಅನೇಕ ವರ್ಷ ನಿರಾಶ್ರಿತರ ಡೇರೆಗಳಲ್ಲಿರಬೇಕಾಯಿತು. ಅವರಿಗೆ ಶೌಚಾಲಯಗಳನ್ನೂ ಕಟ್ಟಿರಲಿಲ್ಲ. ಕಲಮ್ ‘೩೫-ಅ ಮತ್ತು ‘೩೭೦’ ರದ್ದು ಪಡಿಸಿದ ನಂತರವೂ ಅವರಿಗೆ ತಮ್ಮ ಮನೆಗೆ ಹೋಗಲು ಸಾಧ್ಯವಾಗಿಲ್ಲ. ಇದರ ವಿರುದ್ಧದ ಸ್ಥಿತಿ ಮತಾಂಧ ನುಸುಳುಕೋರರು ಮತ್ತು ರೋಹಿಂಗ್ಯಾ ಮುಸಲ್ಮಾನರದ್ದಾಗಿದೆ. ಅವರು ಭಾರತದಲ್ಲಿ ಹಿಂಸಾಚಾರ ಮಾಡುತ್ತಾರೆ. ಆದರೂ ಅವರು ಇಲ್ಲಿ ಸುಖವಾಗಿದ್ದಾರೆ.
ಆಮ್ ಆದಮಿ ಪಕ್ಷ, ಸಮಾಜವಾದಿ ಪಕ್ಷ, ಕಾಂಗ್ರೆಸ್, ಸಾಮ್ಯವಾದಿ ಈ ಎಲ್ಲ ಧರ್ಮನಿರಪೇಕ್ಷ ರಾಜಕೀಯ ಪಕ್ಷಗಳು ಮತಾಂಧರನ್ನು ಓಲೈಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತವೆ. ಇವರು ಯಾವಾಗಲೂ ಮತಾಂಧರನ್ನು ಮುಂದೆ ಮುಂದೆ ಮಾಡುತ್ತಿರುತ್ತಾರೆ. ಅವರಿಗಾಗಿ ಅವರು ವಿವಿಧ ಯೋಜನೆಗಳ ಘೋಷಣೆಗಳನ್ನು ಮಾಡುತ್ತಾರೆ. ಕೇಂದ್ರ ಸರಕಾರ ಈ ನುಸುಳುಕೋರರನ್ನು ಹುಡುಕಿ ಅವರನ್ನು ಅವರ ದೇಶಕ್ಕೆ ಕಳುಹಿಸುವ ಪ್ರಯತ್ನ ಮಾಡುವಾಗ, ಅವರ ರಕ್ಷರಾಗಿರುವ ಪ್ರಗತಿಪರರು, ಸರ್ವಧರ್ಮಸಮಭಾವದವರು, ಮತಾಂಧರನ್ನು ಬೆಂಬಲಿಸುವವರು ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ದಾಖಲಿಸಿ ಈ ಸರಕಾರೀ ಕಾರ್ಯಕ್ಕೆ ರದ್ದತಿಯನ್ನು (Stay Order) ಪಡೆಯುತ್ತಾರೆ.
೩. ಸ್ಥಳಾಂತರವಾಗಿರುವ ಹಿಂದೂಗಳಿಗೆ ಸಹಾಯ ಮಾಡಲು ಕೇಂದ್ರ ಸರಕಾರ ಪ್ರಯತ್ನಶೀಲ !
ಹಿಂದೂಗಳ ಮತಗಳಿಂದ ಕಳೆದ ೯ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರಕಾರ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಿಂದೂಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಯಾವಾಗ ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಕಾರಣ ಕೇಳಿ ನೋಟೀಸನ್ನು ಜ್ಯಾರಿ ಮಾಡಿತೋ, ಆಗ ಹಿಂದೂ ಪೀಡಿತರು ಹಾಗೂ ಅವರ ದೈನ್ಯಾವಸ್ಥೆಯ ವಿಷಯದಲ್ಲಿ ಸಹಾನುಭೂತಿಯಿಂದ ವಿಚಾರ ಮಾಡಲಾಗುವುದು ಎಂದು ಕೇಂದ್ರ ಸರಕಾರದ ವಕೀಲರು ಹೇಳಿದ್ದರು. ಸಂಬಂಧಿತರಿಗೆ ಯೋಗ್ಯ ನಿರ್ದೇಶನ ಕೊಡಲಾಗುವುದು. ಇದರೊಂದಿಗೆ ಇಂತಹ ಪ್ರತಿಜ್ಞಾಪತ್ರವನ್ನು ನ್ಯಾಯಾಲಯಕ್ಕೆ ಕೊಡಲಾಗುವುದು. ಸ್ಥಳಾಂತರಗೊಂಡವರಿಗೆ ಆಧಾರಕಾರ್ಡ್, ದೀರ್ಘಕಾಲದ ವೀಸಾ ಸಹ ಕೊಡಲಾಗಿದೆ.
೪. ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ದುರ್ಲಕ್ಷಿಸುವ ಆಯೋಗಗಳು ಮತಾಂಧರನ್ನು ಓಲೈಸುವುದು
ಇತರ ಸಮಯದಲ್ಲಿ ಸರ್ವಧರ್ಮಸಮಭಾವದವರು ಹಗಲಿರುಳು ಸಂವಿಧಾನದ ವೈಭವೀಕರಣ ಮಾಡುತ್ತಾರೆ. ಮಾನವೀ ಹಕ್ಕುಗಳನ್ನು ಕಾಪಾಡುವ ಬಗ್ಗೆ ಭಾಷಣಗಳನ್ನು ಬೀಗುತ್ತಾರೆ; ಆದರೆ ಯಾವಾಗ ಹಿಂದೂಗಳ ಮಾನವಾಧಿಕಾರದ ರಕ್ಷಣೆ ಮಾಡುವ ವಿಷಯ ಬರುತ್ತದೆಯೋ, ಆಗ ಅವರು ಅದನ್ನು ದುರ್ಲಕ್ಷ ಮಾಡುತ್ತಾರೆ ಹಾಗೂ ಅವರನ್ನು ದುಃಖದಾರಿದ್ರ್ಯವನ್ನು ಸಹಿಸಿಕೊಳ್ಳಲು ಬಿಡುತ್ತಾರೆ. ಮಾನವಾಧಿಕಾರ ಆಯೋಗ, ಮಹಿಳಾ ಅಥವಾ ಬಾಲಕಲ್ಯಾಣ ಆಯೋಗಗಳಿಗೆ ಹಿಂದೂಗಳ ಮೇಲಿನ ಅತ್ಯಾಚಾರಗಳು ಯಾವತ್ತೂ ಕಾಣಿಸುವುದೇ ಇಲ್ಲ. ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾಗಿದ್ದಾರೆ, ಹಾಗೆಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಕೂಡ ಬಹಳ ಅತ್ಯಾಚಾರಗಳಾದವು. ಆಗ ಅವರ ಸಹಾಯಕ್ಕಾಗಿ ಒಂದು ಆಯೋಗವೂ ಮುಂದೆ ಬರಲಿಲ್ಲ. ಈ ಎಲ್ಲ ಆಯೋಗಗಳು ಮತಾಂಧರ ಅಡಚಣೆಗಳನ್ನು ದೂರಗೊಳಿಸುವಲ್ಲಿ ವ್ಯಸ್ತವಾಗಿರುತ್ತವೆ.
೫. ಭಾರತದಲ್ಲಿನ ಹಿಂದೂಗಳು ದಿನದ ಸ್ವಲ್ಪ ಸಮಯವನ್ನು ಹಿಂದೂ ಧರ್ಮಕ್ಕಾಗಿ ಕೊಡುವುದು ಆವಶ್ಯಕ !
ಈ ಸ್ಥಿತಿಯನ್ನು ಬದಲಾಯಿಸಲು ಎಲ್ಲ ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ದಿನದಲ್ಲಿ ಸ್ವಲ್ಪ ಸಮಯವನ್ನಾದರೂ ಧರ್ಮಕಾರ್ಯ, ಹಿಂದೂಗಳ ಪುನರ್ವಸತಿ ಹಾಗೂ ಹಿಂದೂಗಳ ರಕ್ಷಣೆಗಾಗಿ ಕೊಡುವುದು ಆವಶ್ಯಕವಾಗಿದೆ. ಆದಷ್ಟು ಬೇಗ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು, ಎಂಬುದಕ್ಕಾಗಿ ಭಗವಂತನಿಗೆ ಶರಣಾಗಬೇಕು ಹಾಗೂ ಸರಕಾರಕ್ಕೆ ಸನ್ಮಾರ್ಗದಿಂದ ಹಿಂದೂ ರಾಷ್ಟ್ರಕ್ಕಾಗಿ ಆಗ್ರಹವನ್ನು ಮಾಡುತ್ತ ಪ್ರಯತ್ನಿಸುತ್ತಿರಬೇಕು, ಹೀಗಾದರೆ ಮಾತ್ರ ಹಿಂದೂಗಳ ದಯನೀಯ ಸ್ಥಿತಿ ದೂರವಾಗಬಹುದು.’
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ. (೧೯.೯.೨೦೨೨)