ಬೆಂಗಳೂರಿನಲ್ಲಿನ 3 ಹಸುಗಳ ಮೇಲಿನ ಕ್ರೂರತೆ ಮಾಸುವ ಮುನ್ನವೇ ನಂಜನಗೂಡು ಮತ್ತು ಹುಬ್ಬಳ್ಳಿಯಲ್ಲಿ ಕರುಗಳ ಮೇಲೆ ಕ್ರೂರತೆ !

ರಾಜ್ಯದಲ್ಲಿ ಮತಾಂಧರ ವಿಕೃತಿ !

ಬೆಂಗಳೂರು – ಇಲ್ಲಿನ ಚಾಮರಾಜಪೇಟೆಯಲ್ಲಿ 3 ಹಸುಗಳ ಕೆಚ್ಚಲು ಕತ್ತರಿಸಿದ ಘಟನೆ ಭಾರಿ ಸಂಚಲನ ಮೂಡಿಸಿತ್ತು. ಈ ಹೇಯ ಕೃತ್ಯ ಎಸಗಿದ ಮತಾಂಧರಲ್ಲಿ ಒಬ್ಬನಾದ ಸೈಯದ್ ನಸ್ರು (ವಯಸ್ಸು 30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಮೈಸೂರಿನ ನಂಜನಗೂಡು ಮತ್ತು ಹುಬ್ಬಳ್ಳಿಯಲ್ಲಿ ಕರುಗಳ ಮೇಲೆ ಕ್ರೂರವಾಗಿ ದಾಳಿ ನಡೆಸಿರುವ ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ.

ನಂಜನಗೂಡಿನಲ್ಲಿ ದೇವಸ್ಥಾನದಲ್ಲಿ ಹರಕೆಗಾಗಿ ಬಿಟ್ಟಿದ್ದ ಕರುವಿನ ಮೇಲೆ ಮತಾಂಧರು ಹರಿತವಾದ ಆಯುಧಗಳಿಂದ ದಾಳಿ ಮಾಡಿ ಗಾಯಗೊಳಿಸಿದ್ದರೆ, ಹುಬ್ಬಳ್ಳಿಯಲ್ಲಿ 7 ತಿಂಗಳ ಕರುವಿನ ಹೊಟ್ಟೆ ಹರಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. (ವಿಕೃತಿಯಿಂದ ತುಂಬಿರುವ ಮತಾಂಧ ಮುಸ್ಲಿಮರು ಮೂಕ ಪ್ರಾಣಿಗಳ ಮೇಲೂ ಕ್ರೂರವಾಗಿ ದಾಳಿ ಮಾಡುತ್ತಿದ್ದಾರೆ. ಇದು ಹಿಂದೂಗಳ ಮೇಲಿನ ದ್ವೇಷ ಅವರ ರಕ್ತದ ಕಣಕಣಗಳಲ್ಲಿಯೂ ಸೇರಿದೆ ಎಂದು ಗಮನಕ್ಕೆ ಬರುತ್ತದೆ ! ಹಿಂದೂಗಳು ಸಂಘಟಿತರಾಗಿ ಇದರ ವಿರುದ್ಧ ಹೋರಾಡುವುದು ಅಗತ್ಯ ಎಂದು ಹೇಳಿದರೆ ತಪ್ಪಾಗಲಾರದು ! – ಸಂಪಾದಕರು)

ಅಸಹ್ಯಕರ ಮತ್ತು ರಾಕ್ಷಸ ಕೃತ್ಯ ! – ಕೇಂದ್ರ ಸಚಿವ ಕುಮಾರಸ್ವಾಮಿ

ಕೇಂದ್ರ ಸಚಿವ ಕುಮಾರಸ್ವಾಮಿ ಇವರು ಈ ಹೇಯ ಕೃತ್ಯವನ್ನು ಖಂಡಿಸಿದ್ದಾರೆ. ‘ಇದು ರಾಕ್ಷಸೀ ಕೃತ್ಯವಾಗಿದೆ. ಈ ಹೇಯ ಕೃತ್ಯವು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದನ್ನು ತೋರಿಸುತ್ತದೆ” ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.