ಸಂಭಲ್ (ಉತ್ತರ ಪ್ರದೇಶ)ನಲ್ಲಿ ಮುಸ್ಲಿಮರು ವಶಪಡಿಸಿಕೊಂಡಿದ್ದ ಭೂಮಿ 47 ವರ್ಷಗಳ ನಂತರ ಹಿಂದೂ ಕುಟುಂಬಕ್ಕೆ ಮರಳಿ ಸಿಕ್ಕಿತು !

ಸಂಭಲ್ (ಉತ್ತರ ಪ್ರದೇಶ) – 1978 ರ ಗಲಭೆಯ ನಂತರ ಹಿಂದೂಗಳು ಇಲ್ಲಿಂದ ಪಲಾಯನ ಮಾಡಿದ್ದರು. ಇದರಿಂದಾಗಿ, ಮತಾಂಧ ಮುಸ್ಲಿಮರು ಹಿಂದೂಗಳ ಅನೇಕ ಆಸ್ತಿಗಳು ಮತ್ತು ಭೂಮಿಗಳ ಮೇಲೆ ಅಕ್ರಮವಾಗಿ ನಿಯಂತ್ರಣ ಸಾಧಿಸಿದ್ದರು. ಅಂತಹ ಅಕ್ರಮ ನಿಯಂತ್ರಣವನ್ನು ಪಡೆದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಈಗ ಸರಕಾರ ಗಲಭೆ ಪ್ರಕರಣವನ್ನು ಮತ್ತೆ ತೆರೆದು ತನಿಖೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ, ಆಡಳಿತವು ಓರ್ವ ಹಿಂದೂ ಕುಟುಂಬದ ಭೂಮಿಯನ್ನು ಮುಸಲ್ಮಾನನು ಕಬಳಿಸಿದ್ದನ್ನು ಹಿಂದೂಗಳಿಗೆ ಹಿಂದಿರುಗಿಸಿದೆ. ಈ ಜಮೀನು ‘ಆಜಾದ ಜನ್ನತ ನಿಶಾ ಕನ್ಯಾ ಉಚ್ಚ ಮಾಧ್ಯಮಿಕ ಶಾಲೆ’ಯ ಪರಿಸರದಲ್ಲಿದೆ. ಈ ಭೂಮಿಯ ಬೆಲೆ 3 ಕೋಟಿ ರೂಪಾಯಿ ಆಗಿದೆಯೆಂದು ಹೇಳಲಾಗುತ್ತಿದೆ.

1. ಸಂಭಲ್‌ನ ನರೌಲಿ ನಗರದ ನಿವಾಸಿ ರಘುನಂದನ ಇವರ ಕುಟುಂಬ, 1978 ರವರೆಗೆ ಸಂಭಲ್‌ನ ಮಹಮೂದ ಖಾನ ಸರಾಯಿಯಲ್ಲಿ ವಾಸಿಸುತ್ತಿದ್ದರು. 1978 ರಲ್ಲಿ ಗಲಭೆಗಳು ಭುಗಿಲೆದ್ದಾಗ, ಅವರು ನರೋಲಿಗೆ ತೆರಳಿ ಅಲ್ಲಿ ನೆಲೆಸಿದರು. ಪೂರ್ವಜರ ಭೂಮಿ ಮೊಹಲ್ಲಾ ಜಗತ ಇಲ್ಲಿತ್ತು. ಅದರಲ್ಲಿ ಮೊದಲು ಹೂವಿನ ತೋಟವಾಗಿತ್ತು.

2. ರಘುನಂದನ ಇವರು, ಮುಸಲ್ಮಾನರು ಅವರ ಪೂರ್ವಜರ ಭೂಮಿಯ ಮೇಲೆ ಹಿಡಿತ ಸಾಧಿಸಿದರು ಮತ್ತು ಅದನ್ನು ಶಾಲೆಯ ಭೂಮಿಯಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಇದರ ಬಗ್ಗೆ ಹಲವು ಬಾರಿ ದೂರು ನೀಡಿದರು; ಆದರೆ ಎಲ್ಲಿಯೂ ಯಾವುದೇ ವಿಚಾರಣೆ ನಡೆಯಲಿಲ್ಲ.

3. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಪಾನಸಿಯಾ ಅವರಿಗೆ ದೂರು ನೀಡಲಾಯಿತು. ಆಗ ಅವರು ತನಿಖೆಗೆ ಆದೇಶಿಸಿದರು. ಈ ಶಾಲೆಯ ಆಡಳಿತ ಸಮಿತಿಗೆ ಈ ಭೂಮಿಯ ಯಾವುದೇ ದಾಖಲೆಗಳನ್ನು ತೋರಿಸಲು ಸಾಧ್ಯವಾಗಲಿಲ್ಲ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಯಾವ ರೀತಿ ಹಿಂದೂಗಳಿಗೆ ನ್ಯಾಯ ಒದಗಿಸಲಾಗುತ್ತಿದೆಯೋ, ಅದೇ ರೀತಿ ಇತರ ರಾಜ್ಯಗಳ ಸರಕಾರಗಳು ಹಿಂದೂಗಳಿಗೆ ನ್ಯಾಯ ಸಿಗುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ. ಹಿಂದೂಗಳು ‘ಏಕ್ ಹೈ ತೋ ಸೇಫ್ ಹೈ’ (ನಾವು ಒಗ್ಗಟ್ಟಿನಿಂದ ಇದ್ದರೆ, ನಾವು ಸುರಕ್ಷಿತವಾಗಿರುತ್ತೇವೆ) ಎಂಬ ಘೋಷಣೆಯಂತೆ ಅಧಿಕಾರಕ್ಕೆ ಬಂದಾಗ ಅಂತಹ ಕೆಲಸಗಳನ್ನು ಮಾಡುವುದು ಸರಕಾರಗಳ ಕರ್ತವ್ಯವಾಗಿದೆ !