‘ಸಪ್ಟೆಂಬರ ೧೯೭೨ ರಲ್ಲಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಎಂದರೆ ಸ್ವಾಮಿ ಶ್ರೀಲ ಭಕ್ತಿವೇದಾಂತ ಪ್ರಭುಪಾದ (ಇಸ್ಕಾನ್ ಅರ್ಥಾತ್ ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘದ ಸಂಸ್ಥಾಪಕ) ಇವರಿಂದ ನೈರೋಬಿಯಲ್ಲಿ ಒಂದು ವ್ಯಾಖ್ಯಾನವಾಯಿತು. ಅದರಲ್ಲಿ ಅವರು ಕೆನ್ಯಾ ಎಂಬ ವಿಕಸಿತ ದೇಶ ನಾಗರಿಕರಿಗೆ ಮುಂದಿನ ಸಂದೇಶ ನೀಡಿದರು. ದಯಮಾಡಿ ಆಧ್ಯಾತ್ಮಿಕ ವಿಕಾಸ ಮಾಡಿಕೊಳ್ಳಿ ಏಕೆಂದರೆ ಅದುವೇ ನಿಜವಾದ ವಿಕಾಸವಾಗಿದೆ. ನಾಯಿ-ಬೆಕ್ಕುಗಳಂತೆ ಜೀವಿಸುವ ಅಮೇರಿಕಾ-ಯುರೋಪಿಯನ ಜನರನ್ನು ಅನುಕರಿಸದಿರಿ. ಅಣ್ವಸ್ತ್ರಗಳು ತಯಾರಾಗಿವೆ ಮತ್ತು ಮುಂದೆ ಯುದ್ಧ ಪ್ರಾರಂಭವಾದಂತೆ ಅವರ ಗಗನಚುಂಬಿ ಕಟ್ಟಡಗಳು ಮತ್ತು ಇತರ ಎಲ್ಲವೂ ಸುಟ್ಟು ಭಸ್ಮವಾಗಲಿವೆ. (ಆಧಾರ : ಆತ್ಮಸಾಕ್ಷಾತ್ಕಾರದ ವಿಜ್ಞಾನ)