ಒಬ್ಬನಿಗೆ ಬಹಳಷ್ಟು ಬಳಗಗಳಿದ್ದರೂ ಅವನು ಬೇರೆಯಾಗಿ ಇರಬಹುದು, ಹಾಗೆ ಭಗವಂತನು ಸರ್ವವ್ಯಾಪಿ ಆಗಿದ್ದರೂ ನಮ್ಮ ಹೃದಯದಲ್ಲಿ ಇರಬಹುದು. ಅವನು ಸೂರ್ಯನ ಪ್ರಕಾಶದಂತೆ ಒಂದೇ ಜಾಗದಲ್ಲಿದ್ದರೂ ಎಲ್ಲ ಕಡೆಗೂ ಅವನ ಅಧಿಪತ್ಯ ಇರುತ್ತದೆ. ಯಾರ ಭಾವನೆ ನಿಜವಾಗಿಯೂ ಶುದ್ಧ, ಅಂದರೆ ನಿಸ್ಸಂದೇಹವಾಗಿರುತ್ತದೆಯೋ, ಅವನಿಗೆ ಕಲ್ಲಿನ ಮೂರ್ತಿಯೂ ದೇವರಾಗುತ್ತದೆ; ಆದರೆ ಭಾವ ಮಾತ್ರ ನೂರಕ್ಕೆ ನೂರರಷ್ಟು ಇರಬೇಕು. ಒಳಗೆ ಭಗವಂತನ ಅನುಸಂಧಾನದಲ್ಲಿದ್ದು ಹೊರಗೆ ವೃತ್ತಿಯನ್ನು ಹತೋಟಿಯಲ್ಲಿಡಲು ಯಾರು ಪ್ರಯತ್ನಿಸುತ್ತಾರೋ ಅವರಿಗೆ ಪರಮಾರ್ಥದ ಅನುಭವ ಬಹಳ ಬೇಗ ಬರುತ್ತದೆ. ಹೇಗೆ ನಾಮದ ಅನುಭವ ನಾಮದಲ್ಲೇ ಪಡೆಯಬೇಕು, ಹಾಗೆ ಭಗವಂತನ ಅನುಭವ ಅನುಸಂಧಾನದಲ್ಲೇ ಬರುವುದು. ಆರಾಧಕನು ದೇಹವನ್ನು ಮರೆತರೆ, ಉಪಾಸ್ಯಮೂರ್ತಿಯಲ್ಲಿ ಅವನಿಗೆ ಜೀವಂತಿಕೆ ಅನುಭವವಾಗಲು ಪ್ರಾರಂಭವಾಗುವುದು.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
(ಆಧಾರ : ಪೂ. ಕೆ.ವಿ. ಬೆಲಸರೆ – ಆಧ್ಯಾತ್ಮಿಕ ಸಾಹಿತ್ಯ ಫೇಸ್ಬುಕ್)