ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ

ರಾತ್ರಿಯ ಜಾಗರಣೆಯಿಂದತೊಂದರೆಯಾಗಬಾರದೆಂದು, ಇದನ್ನು ಮಾಡಿರಿ !

`ಕೆಲವೊಮ್ಮೆ ಸೇವೆಯ ನಿಮಿತ್ತ ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ. ರಾತ್ರಿಯ ಊಟ ಬೇಗ ಆಗಿರುವುದರಿಂದ ಜಾಗರಣೆಯಾದಾಗ ರಾತ್ರಿ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಶೇವು, ಚಿವಡಾ ಇವುಗಳಂತಹ ಪದಾರ್ಥಗಳನ್ನು ತಿನ್ನಬಾರದು. ಜಾಗರಣೆಯಾದಾಗ ಹೊಟ್ಟೆಯಲ್ಲಿ ಪಿತ್ತ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಎಣ್ಣೆಯುಕ್ತ ಮತ್ತು ಖಾರಯುಕ್ತ ಪದಾರ್ಥಗಳನ್ನು ತಿನ್ನುವುದರಿಂದ ಪಿತ್ತದ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಶರೀರ ತನ್ನನ್ನು ಒಳ್ಳೆಯ ಸ್ಥಿತಿಯಲ್ಲಿಡಲು ತುಂಬಾ ಪ್ರಯತ್ನಿಸುತ್ತಿರುತ್ತದೆ. ಆದುದರಿಂದ ಪಿತ್ತ ತುಂಬಾ ಹೆಚ್ಚಾದರೂ ಒಂದೆರಡು ದಿನ ಅದರ ದುಷ್ಪರಿಣಾಮ ಕಂಡುಬರುವುದಿಲ್ಲ; ಆದರೆ ಮೇಲಿಂದ ಮೇಲೆ ಹೀಗೆ ಮಾಡಿದರೆ, ಆರೋಗ್ಯದ ಮೇಲೆ ಅದರ ವಿಪರೀತ ಪರಿಣಾಮವಾಗುತ್ತದೆ. ಜಾಗರಣೆಯನ್ನು ಮಾಡುವಾಗ ತೊಂದರೆಯಾಗಬಾರದೆಂದು, ತಮ್ಮ ಹತ್ತಿರ ತುಪ್ಪವನ್ನು ಇಟ್ಟುಕೊಳ್ಳಬೇಕು ಮತ್ತು ರಾತ್ರಿ ಅವೇಳೆಯಲ್ಲಿ ಹಸಿವಾದಾಗ ಹಸಿವಿನ ಪ್ರಮಾಣಕ್ಕನುಸಾರ ೧ ರಿಂದ ೪ ಚಮಚದಷ್ಟು ತುಪ್ಪವನ್ನು ಜಗಿದು ತಿನ್ನಬೇಕು. ಕೇವಲ ತುಪ್ಪವನ್ನು ತಿನ್ನಲು ಕಠಿಣವೆನಿಸಿದರೆ, ತುಪ್ಪದಲ್ಲಿ ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ತಿನ್ನಬಹುದು. ತುಪ್ಪ ಪಚನವಾಗುವುದಕ್ಕಾಗಿ ಅನಂತರ ಅರ್ಧ ಬಟ್ಟಲು ಬಿಸಿ ನೀರು ಕುಡಿಯಬೇಕು. (ತುಪ್ಪವನ್ನು ಅಳತೆ ಮಾಡಲು ಚಹಾದ ಚಮಚವನ್ನು ಬಳಸಿರಿ. ೧ ರಿಂದ ೪ ಚಮಚ ಇದು ತೆಳು ತುಪ್ಪದ ಪ್ರಮಾಣವಾಗಿದೆ. ಆದುದರಿಂದ ತುಪ್ಪ ಗಟ್ಟಿಯಾಗಿದ್ದರೆ ಅದರ ಅಂದಾಜಿನಿಂದ ತೆಗೆದುಕೊಳ್ಳಬೇಕು.)

ಹೆಚ್ಚಾಗಿರುವ ಪಿತ್ತವನ್ನು ಶಾಂತ ಮಾಡಲು ಇದು ಎಲ್ಲಕ್ಕಿಂತ ಒಳ್ಳೆಯ ಉಪಾಯವಾಗಿದೆ; ಆದರೆ `ಅನಗತ್ಯ ಜಾಗರಣೆಯನ್ನು ತಡೆಗಟ್ಟುವುದು’, ಮೂಲ ಉಪಾಯವಾಗಿದೆ.’

ನೀರಿನ ಬದಲು ಶರಬತ್ತು ಕುಡಿಯಬಹುದೇ ?

`ಕೆಲವೊಮ್ಮೆ ಮೋಜಿಗಾಗಿ ಶರಬತ್ತನ್ನು ಕುಡಿಯಬಹುದು; ಆದರೆ ಪ್ರತಿದಿನ ಶರಬತ್ತನ್ನು ಕುಡಿಯುವ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಶರಬತ್ತು ಕುಡಿಯುವುದರಿಂದ ಅನಾವಶ್ಯಕವಾಗಿ ಸಕ್ಕರೆಯು ಹೊಟ್ಟೆಯಲ್ಲಿ ಹೋಗುತ್ತದೆ. ಸಕ್ಕರೆಯು ಆರೋಗ್ಯಕ್ಕೆ ಹಾನಿಕರವಾಗಿದೆ. ಸಕ್ಕರೆಯ ಬದಲು ಬೆಲ್ಲವನ್ನು ಹಾಕಿದರೂ, ಬೆಲ್ಲವು ಸಹ ಹೆಚ್ಚು ಪ್ರಮಾಣದಲ್ಲಿ ಪ್ರತಿದಿನ ತಿನ್ನುವುದು ಒಳ್ಳೆಯದಲ್ಲ. ಬೆಲ್ಲದ ಪದಾರ್ಥಗಳನ್ನು ಮೇಲಿಂದ ಮೇಲೆ ತಿನ್ನುತ್ತಿದ್ದರೆ ಪ್ರತಿದಿನವೂ ಆ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತಿರುತ್ತದೆ. ಆದುದರಿಂದ ಶರಬತ್ತಿನ ಬದಲಾಗಿ ಸಾಮಾನ್ಯ ನೀರನ್ನೇ ಕುಡಿಯಬೇಕು.’

ಮೂತ್ರಮಾರ್ಗ ಉರಿಯುವುದಕ್ಕೆಆಯುರ್ವೇದದಲ್ಲಿನ ಪ್ರಾಥಮಿಕ ಉಪಚಾರ

`ಚಹಾದ ಚಮಚದಿಂದ ಕಾಲುಚಮಚದಷ್ಟು ಸನಾತನ ಉಶೀರ (ಲಾವಂಚ) ಚೂರ್ಣವನ್ನು ದಿನಕ್ಕೆ ೪ ಬಾರಿ ಅರ್ಧ ಬಟ್ಟಲು ನೀರಿನಲ್ಲಿ ಸೇರಿಸಿ ಕುಡಿಯಬೇಕು. ೭ ದಿನಗಳಲ್ಲಿ ಗುಣವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.’

ಇತರರ ನಿದ್ರೆ ಹಾಳಾಗದಂತೆ ನೋಡಿಕೊಳ್ಳಿ !

`ನ ಶಯಾನಂ ಪ್ರಬೋಧಯೇತ್ |’ (ಯಾಜ್ಞವಲ್ಕ್ಯ ಸ್ಮೃತಿ, ಅಧ್ಯಾಯ ೧, ಶ್ಲೋಕ ೧೩೮)

ಅಂದರೆ `ಯಾರಾದರೊಬ್ಬರು ಮಲಗಿದ್ದಾಗ, ಅವರ ನಿದ್ರೆ ಯನ್ನು ಹಾಳು ಮಾಡಬಾರದು. ಅನೇಕರಿಗೆ ಇದರ ಅರಿವು ಇರುವುದಿಲ್ಲ. ಇತರರು ಮಲಗಿದ್ದಾಗ ದೊಡ್ಡ ಧ್ವನಿಯಲ್ಲಿ ಮಾತನಾಡುವುದು, ಚೀಲ ಅಥವಾ ಇತರ ಧ್ವನಿಯನ್ನು ಮಾಡುವುದು, ಹಾಗೆಯೇ ಮಲಗಿದ್ದವರು ಎಚ್ಚರವಾಗುವಂತಹ ಯಾವ ಕೃತಿಗಳನ್ನು ಮಾಡುವುದನ್ನು ತಡೆಯಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ