ದೋಹಾ (ಕತಾರ) – ಕಳೆದ 96 ದಿನಗಳಿಂದ ಭಾರತೀಯ ನೌಕಾದಳದ 8 ಮಾಜಿ ಸೈನಿಕರನ್ನು ಕತಾರದ ಜೈಲಿನಲ್ಲಿ ಇಟ್ಟಿದ್ದಾರೆ. ಭಾರತ ಸರಕಾರದಿಂದ ವಿವಿಧ ಪ್ರಯತ್ನಗಳನ್ನು ಮಾಡಿಯೂ ಕತಾರ ಅವರನ್ನು ಬಿಡುಗಡೆ ಮಾಡಲು ಸಿದ್ಧರಿಲ್ಲ. ಈಗ ಸ್ಥಳೀಯ ನ್ಯಾಯಾಲಯವು ಈ ಮಾಜಿ ಸೈನಿಕರನ್ನು ಇನ್ನೂ 1 ತಿಂಗಳು ಕಾರಾಗೃಹದಲ್ಲಿಡುವಂತೆ ಆದೇಶಿಸಿದೆ. `ಈ ಮಾಜಿ ಸೈನಿಕರನ್ನು ಯಾವ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ’, ಎನ್ನುವುದನ್ನು ಕತಾರ ಸ್ಪಷ್ಟ ಪಡಿಸಿಲ್ಲ. ಅಗಸ್ಟ 30 ರಂದು ಈ 8 ಜನರನ್ನು ಕತಾರ ಬಂಧಿಸಿತ್ತು. ಇವರೆಲ್ಲರೂ ಸೇವಾ ನಿವೃತ್ತಿಯ ಬಳಿಕ ಕತಾರನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಸಂಪಾದಕೀಯ ನಿಲುವುಜಿಹಾದಿ ಇಸ್ಲಾಂ ದೇಶ ಕತಾರದ ವಶದಿಂದ ಭಾರತದ ಮಾಜಿ ಸೈನಿಕರನ್ನು ಹೊರತೆಗೆಯಲು ಸರಕಾರಕ್ಕೆ ಏನು ತೊಂದರೆಯಿದೆ, ಎಂಬುದು ಅವರು ಜನತೆಗೆ ಹೇಳಬೇಕು ! |