ಕತಾರ ವಿಶ್ವವಿದ್ಯಾಲಯದ `ಇಸ್ಲಾಂ’ ಪ್ರಾಧ್ಯಾಪಕ ಡಾ. ಶಫಿ ಅಲ್ ಹಜರಿ ಇವರ ಹೇಳಿಕೆ
ದೋಹಾ(ಕತಾರ)– ಕತಾರ ವಿಶ್ವವಿದ್ಯಾಲಯದ `ಇಸ್ಲಾಂ’ ವಿಷಯದ ಪ್ರಾಧ್ಯಾಪಕ ಡಾ. ಶಫಿ ಅಲ್ ಹಜರಿ ಕತಾರನ `ಅಲ್ ರೆಯಾನ ಟಿವ್ಹಿ’ ಈ ವಾಹಿನಿಯ ಒಂದು ಕಾರ್ಯಕ್ರಮದಲ್ಲಿ ದೇಶದಲ್ಲಿರುವ ಮುಸಲ್ಮಾನೇತರರಿಂದ ತೆರಿಗೆಯನ್ನು ವಸೂಲಿ ಮಾಡುವುದನ್ನು ಸಮರ್ಥಿಸಿದ್ದಾರೆ. ಹಾಗೆಯೇ ಅವರು ಮುಸಲ್ಮಾನೇತರರನ್ನು ಇಸ್ಲಾಂ ಧರ್ಮಕ್ಕೆ ಕರೆತರಲು 3 ಹಂತದಲ್ಲಿ ಪ್ರಯತ್ನಿಸಲು ಹೇಳಿದ್ದು, ಕೊನೆಯ ಹಂತದಲ್ಲಿ ತಲವಾರಿನ ಬಲಪ್ರಯೋಗದ ಮೇಲೆ ಇಸ್ಲಾಂ ಪ್ರಸಾರ ಮಾಡಬೇಕು ಎಂದು ಅವರು ಹೇಳಿದರು. ಪ್ರಾಧ್ಯಾಪಕ ಡಾ. ಶಫಿ ಅಲ್ ಹಜರಿ ಇವರು ಹೇಳಿರುವುದೇನೆಂದರೆ, ಮೊದಲ ಹಂತದಲ್ಲಿ ಮುಸಲ್ಮಾನೇತರರಿಗೆ ಪ್ರೀತಿಯಿಂದ ಇಸ್ಲಾಂ ಸ್ವೀಕರಿಸಲು ಹೇಳಬೇಕು.
‘First, ask them to convert, then make them pay Jizya tax, if they refuse, fight them’: Qatari professor Dr Shafi Al-Hajrihttps://t.co/P3JIsR5wCl
— OpIndia.com (@OpIndia_com) December 2, 2022
ಅವರನ್ನು ಅದಕ್ಕಾಗಿ ಆಮಂತ್ರಿಸಬೇಕು. ಒಂದು ವೇಳೆ ಅವರು ಕೇಳಿಸಿಕೊಳ್ಳದಿದ್ದರೆ, ಅವರ ಮೇಲೆ ಜಿಝಿಯಾ ತೆರಿಗೆಯನ್ನು ಹೇರಬೇಕು ಮತ್ತು ಅವರಿಗೆ ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಬೇಕು. ಆದಾಗ್ಯೂ ಅವರು ಇಸ್ಲಾಂ ಸ್ವೀಕರಿಸದಿದ್ದರೆ, ಅವರೊಂದಿಗೆ ಕೊನೆಯ ಪರ್ಯಾಯವೆಂದರೆ ಯುದ್ಧ ಮಾಡಬೇಕು. ತಲವಾರಿನ ಶಕ್ತಿಯ ಮೇಲೆ ಇಸ್ಲಾಂ ಪ್ರಸಾರ ಮಾಡುವುದು ಸೂಕ್ತವೆಂದು ಅವರು ಹೇಳಿದರು.
ಸಂಪಾದಕೀಯ ನಿಲುವು
|