ತಲೆನೋವಿಗಾಗಿ (Headache) ಹೋಮಿಯೋಪಥಿ ಔಷಧಿಗಳು

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೬)

ಇಂದಿನ ಒತ್ತಡಮಯ ಜೀವನದಲ್ಲಿ ಯಾರಿಗೂ ಯಾವತ್ತೂ ಸೋಂಕಿನ ಕಾಯಿಲೆ ಅಥವಾ ಇನ್ಯಾವುದೊ, ವಿಕಾರವನ್ನು ಎದುರಿಸಬೇಕಾಗಬಹುದು. ಇಂತಹ ಪ್ರಸಂಗಗಳಲ್ಲಿ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗ ಬಹುದೆಂದು ಹೇಳಲು ಸಾಧ್ಯವಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ(ಎಸಿಡಿಟಿ) ಇತ್ಯಾದಿ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗಬೇಕೆಂಬ ದೃಷ್ಟಿಯಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಸಾಮಾನ್ಯ ಜನರಿಗೆ ಬಹಳಷ್ಟು ಉಪಯೋಗವಾಗಬಹುದು. ಈ ಉಪಾಯಪದ್ಧತಿಯನ್ನು ಮನೆಯಲ್ಲಿಯೆ ಹೇಗೆ ಅವಲಂಬಿಸಬಹುದು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ? ಅವುಗಳನ್ನು ಹೇಗೆ ಜೋಪಾನ ಮಾಡಬೇಕು ? ಇತ್ಯಾದಿ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮ ಮುಂದಿಡುತ್ತಿದ್ದೇವೆ.

ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ಕಾಯಿಲೆಗಳಿಗೆ ಸ್ವಉಪಚಾರವನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೪೫ ರಲ್ಲಿ ನಾವು ‘ತಲೆನೋವಿಗಾಗಿ’ ಔಷಧಿಗಳ ಮಾಹಿತಿಯನ್ನು ನೀಡಿದ್ದೆವು. ಈ ವಾರ ಅದರ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/121480.html

೧೨. ಸಲ್ಫರ್‌ (Sulphur)

೧೨. ಅ. ತಲೆಯ ಮೇಲಿನ ಅಥವಾ ಹಿಂದಿನ ಭಾಗದಲ್ಲಿ ಮಿಡಿಯುತ್ತಿರುವ (throbbing) ಅಥವಾ ಬಟ್ಟೆಯಿಂದ ಬಿಗಿದಂತಹ ತಲೆ ನೋವು

೧೨ ಆ. ನೆತ್ತಿಯ ಮೇಲೆ ಉರಿಉರಿಯಾಗುವುದು. ರಾತ್ರಿ ಹಾಸಿಗೆಯಲ್ಲಿರುವಾಗ ಹೆಚ್ಚಾಗುವುದು

೧೨ ಇ. ಬೆಳಗ್ಗೆ ಎದ್ದ ಮೇಲೆ ಮತ್ತು ತಲೆಯನ್ನು ಒತ್ತಿದ ಮೇಲೆ ತಲೆನೋವು ಕಡಿಮೆಯಾಗುವುದು

೧೨ ಈ. ರಕ್ತವು ತಲೆಯಲ್ಲಿ ವೇಗವಾಗಿ ಪ್ರವಹಿಸುತ್ತಿದೆ ಎಂದು ಅನಿಸುವುದು

೧೨ ಉ. ಪ್ರತಿ ವಾರದಲ್ಲಿ ಒಂದು ಸಲ ತಲೆ ನೋವಾಗುವುದು

೧೩. ಇಗ್ನೆಶಿಯಾ ಅಮಾರಾ (Ignatia Amara)

೧೩ ಅ. ನಿಶ್ಚಿತ ಸ್ಥಳದಲ್ಲಿ ಬಿಗಿದು ಕಟ್ಟಿದಂತಹ ತಲೆ ನೋವು

೧೩ ಆ. ಹಣೆಯ ಮಧ್ಯಭಾಗದಲ್ಲಿ, ಹಾಗೆಯೇ ಮೂಗಿನ ತುದಿಯಲ್ಲಿ, ಅಂದರೆ ಮೂಗು ಹಣೆಗೆ ತಗಲುವಂತಹ ಭಾಗದಲ್ಲಿ ಒತ್ತಡವೆನಿಸುವುದು

೧೩ ಇ. ಚಿಂತೆ, ಕಾಳಜಿ ಅಥವಾ ದುಃಖ ಇವುಗಳಿಂದ ಉದ್ಭವಿಸುವ ತಲೆನೋವು

೧೪. ಲ್ಯಾಚೆಸಿಸ್‌ ಮ್ಯುಟಸ್‌ (Lachesis Mutus)

೧೪ ಅ. ಸ್ತ್ರೀಯರಲ್ಲಿ ರಜೋನಿವೃತ್ತಿಯ (menopause) (ಸ್ತ್ರೀಯರಲ್ಲಿ ಮುಟ್ಟು ನಿಂತ ಮೇಲೆ) ನಂತರ ಬರುವ ತಲೆನೋವು, ಅದರಲ್ಲಿ ನೆತ್ತಿಯ ಮೇಲೆ ಉರಿಉರಿ ಆಗುತ್ತದೆ

೧೪ ಆ. ತಲೆಯ ಎಡಬದಿ ಬಹಳ ನೋವಾಗುವುದು, ತಲೆ ನೋವಿದ್ದಾಗ ಮುಖ ನಿಸ್ತೇಜವಾಗುವುದು

೧೪ ಇ. ಮಲಗಿ ಎದ್ದ ನಂತರ ತಲೆನೋವು ಹೆಚ್ಚಾಗುವುದು.

೧೫. ಸಿಲಿಶಿಯಾ (Silicea)

೧೫ ಅ. ತಲೆ ನೋವಿನ ಹಳೆಯ ಕಾಯಿಲೆ, ಅದರೊಂದಿಗೆ ಒತ್ತಡ, ಗೊಂದಲ, ಚಲನವಲನ ಮತ್ತು ಬೆಳಕನ್ನು ಸಹಿಸಲು ಆಗದಿರುವುದು

೧೫ ಆ. ತಲೆಯ ಸುತ್ತಲು ಶಾಲು ಸುತ್ತಿಕೊಂಡರೆ (ತಲೆಯ ಸುತ್ತಲು ಬಟ್ಟೆಯನ್ನು ಕಟ್ಟಿದರೆ), ತಲೆಯನ್ನು ಒತ್ತಿದರೆ, ತಲೆನೋವು ತಾತ್ಕಾಲಿಕವಾಗಿ ಕಡಿಮೆಯಾಗುವುದು

೧೫ ಇ. ಅತಿಶ್ರಮದ ನಂತರ ತಲೆನೋವು ಆರಂಭವಾಗುವುದು, ಇದರಲ್ಲಿ ವೇದನೆಗಳು ಕುತ್ತಿಗೆಯ ಕೆಳಗಿನ ಭಾಗದಲ್ಲಿ ಆರಂಭವಾಗಿ ಅವು ಬಲಬದಿಯ ಕಣ್ಣಿನಲ್ಲಿ ಸ್ಥಿರವಾಗುವುದು, ‘ಕುತ್ತಿಗೆ ಬಿಚ್ಚಿ ಬೀಳುತ್ತದೆ’, ಎಂದು ಅನಿಸುವುದು

೧೬. ಕಲ್ಕೆರಿಯಾ ಫಾಸ್ಫೋರಿಕಮ್‌ (Calcarea Phosphoricum)

೧೬ ಅ. ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಅತಿಸಾರದೊಂದಿಗೆ ತಲೆನೋವು

೧೬ ಆ. ಹವಾಮಾನದಲ್ಲಾಗುವ ಬದಲಾವಣೆಯಿಂದ ಬರುವ ತಲೆನೋವು

೧೬ ಇ. ತಲೆನೋವು ಇರುವಾಗ ತಂಬಾಕಿನ ಹೊಗೆಯ ವಾಸನೆ ತೆಗೆದುಕೊಳ್ಳುವ ತೀವ್ರ ಇಚ್ಛೆ ಆಗುವುದು, ವಾಸನೆ ತೆಗೆದುಕೊಂಡ ನಂತರ ತಲೆನೋವು ಕಡಿಮೆಯಾಗುವುದು

೧೬ ಈ. ತಲೆ ನೋಯುತ್ತಿರುವಾಗ ಮುಖ ಮತ್ತು ತಲೆ ಬಿಸಿ ಯಾಗುವುದು, ದಣಿವಾಗುವುದು, ಮನಸ್ಸು ಅಪ್ರಸನ್ನವಾಗಿರುವುದು

೧೭. ಚೈನಾ ಆಫಿಸಿನ್ಯಾಲಿಸ್‌ (China Officinalis)

೧೭ ಅ. ತಲೆಯಲ್ಲಿ ಅಪ್ಪಳಿಸಿದಂತೆ, ಹರಿದಂತೆ ನೋವು (jerking, tearing pains)

೧೭ ಆ. ಮೆದುಳು ಅಲೆ ಗಳಂತೆ ತಲೆಬುರುಡೆಗೆ ಅಪ್ಪಳಿಸುತ್ತಿರುವಂತೆ ಅರಿವಾಗುವುದು

೧೭ ಇ. ತಲೆಯ ಕೇವಲ ಒಂದೇ ಬದಿಯಲ್ಲಿ ನೋವಾಗುವುದು

೧೭ ಈ. ಕಿವಿಯಲ್ಲಿ ಧ್ವನಿ ಕೇಳಿಸುವುದು

೧೭ ಉ. ತಲೆನೋವಿನಿಂದಾಗಿ ನಿದ್ದೆ ಬರದಿರುವುದು

೧೭ ಊ. ರಾತ್ರಿ ಜಾಗರಣೆ ಮಾಡುವುದು ಮತ್ತು ನಡೆದಾಡುವುದು ಇವುಗಳಿಂದ ತಲೆನೋವು ಹೆಚ್ಚಾಗುವುದು

೧೭ ಎ. ಶಾಂತ ಮಲಗಿದರೆ ತಲೆನೋವು ಕಡಿಮೆಯಾಗುವುದು

೧೮. ಎಂಟಿಮೊನಿಯಮ್‌ ಕ್ರೂಡಮ್‌ (Antimonium Crudum)

ತುಂಬಾ ಉಪ್ಪಿನಕಾಯಿ ತಿನ್ನುವುದು, ಹುಳಿ ಪದಾರ್ಥಗಳನ್ನು ತಿನ್ನುವುದು, ನದಿಯಲ್ಲಿ ಸ್ನಾನ ಮಾಡುವುದು ಇವುಗಳಿಂದ ತಲೆನೋವು ಬರುವುದು

೧೯. ಸೆಪಿಯಾ ಆಫಿಸಿನ್ಯಾಲಿಸ್‌ (Sepia Officinails)

೧೯ ಅ. ಪ್ರತಿದಿನ ಬೆಳಗ್ಗೆ ಬರುವ ತಲೆನೋವಿನಿಂದಾಗಿ ಕಣ್ಣು ಗಳನ್ನು ತೆರೆಯಲು ಕಷ್ಟವಾಗುವುದು

೧೯ ಆ. ತಲೆನೋವಿರುವಾಗ ಸಂಭೋಗದ ತೀವ್ರ ಇಚ್ಛೆಯಾಗುವುದು

೧೯ ಇ. ತಲೆನೋವಿನ ತೀವ್ರ ಆಘಾತಗಳಾಗುವುದು

೨೦. ಕ್ಯನ್ಯಬಿಸ್‌ ಇಂಡಿಕಾ (Cannabis Indica)

೨೦ ಅ. ತಲೆನೋವು ಇರುವಾಗ ‘ನೆತ್ತಿ (ತಲೆಯ ಮೇಲಿನ ಮಧ್ಯದ ಭಾಗ) ತೆರೆಯುತ್ತಿದೆ ಮತ್ತು ಮುಚ್ಚುತ್ತಿದೆ ಎಂದು ಅನಿಸುವುದು’

೨೦ ಆ. ತಲೆನೋವು ಇರುವಾಗ ತಲೆ ಬುರುಡೆ (ತಲೆಯ ಮೇಲಿನ ಮೂಳೆಯ ಭಾಗ) ಮೇಲೆ ಸೆಳೆಯಲ್ಪಡುತ್ತಿದೆ, ಎಂದು ಅನಿಸುವುದು

೨೦ ಇ. ತಲೆನೋವಿನ ಜೊತೆಗೆ ಹೊಟ್ಟೆಯಲ್ಲಿ ವಾಯು ಸಂಗ್ರಹವಾಗುವುದು

೨೦ ಈ. ತಲೆ ತನ್ನಷ್ಟಕ್ಕೆ ತಾನೇ ಅಲುಗಾಡುವುದು

೨೦ ಉ. ಮೂತ್ರಪಿಂಡದ ಕಾಯಿಲೆಯಿಂದಾಗಿ ತಲೆ ನೋಯುವುದು

೨೦ ಊ. ಅಸಾಮಾನ್ಯ ಉದ್ರೇಕ (excitement) ಮತ್ತು ವಟಗುಟ್ಟುವಿಕೆಯೊಂದಿಗೆ ಅರೆತಲೆನೋವು (ಮೈಗ್ರೇನ್) ಬರುವುದು

೨೧. ಕ್ಯಾಕ್ಟಸ್‌ ಗ್ರಾಂಡಿಫ್ಲೊರಸ್‌ (Cactus Grandiflorus)

೨೧ ಅ. ತಲೆಯ ಮೇಲ್ಭಾಗವನ್ನು ಪಟ್ಟಿಯಿಂದ ಬಿಗಿದಂತೆ, ಎಲ್ಲ ಬದಿಗಳಿಂದ ಪಟ್ಟಿಯಿಂದ ಬಿಗಿದಂತೆ ಅಥವಾ ತಲೆಯ ಮೇಲೆ ದೊಡ್ಡ ಭಾರ ಇಟ್ಟಂತೆ ತಲೆ ನೋಯುವುದು, ಈ ರೀತಿಯ ತಲೆ ನೋವು ವಿಶೇಷವಾಗಿ ಮಾಸಿಕ ಸರದಿಯ (ಋತುಸ್ರಾವದ) ತಕರಾರುಗಳ ಜೊತೆಗೆ ಅಥವಾ ರಜೋನಿವೃತ್ತಿಯ (menopause ನ) ಸಮಯದಲ್ಲಿ ಇರುವುದು

೨೧ ಆ. ಬೆಳಗ್ಗೆ ೧೧ ರಿಂದ ರಾತ್ರಿ ೧೧ ಈ ಕಾಲಾವಧಿಯಲ್ಲಿಯೇ ತಲೆ ನೋವಾಗುವುದು

೨೨. ಆರ್ಸೆನಿಕಮ್‌ ಆಲ್ಬಮ್‌ (Arsenicum Album)

೨೨ ಅ. ಕಣ್ಣುಗಳ ಮೇಲ್ಭಾಗದಲ್ಲಿ ತಲೆ ನೋವು ಮತ್ತು ನೆತ್ತಿಯ ಮೇಲೆ ಉರಿಯುವುದು

೨೨ ಆ. ನಿಶ್ಚಿತ ಕಾಲಾವಧಿಯ ನಂತರ ತಲೆನೋವು ಬರುವುದು ಮತ್ತು ಅದರ ಜೊತೆಗೆ ನಿತ್ರಾಣದ ಅರಿವಾಗುವುದು ಅಥವಾ ನಿತ್ರಾಣದಿಂದ ತಲೆನೋವು ಬರುವುದು

೨೨ ಇ. ಉಷ್ಣತೆಯ ಸಂಪರ್ಕಕ್ಕೆ ಬಂದಾಗ ತಲೆ ನೋವಾಗುವುದು, ತಲೆಯನ್ನು ಎತ್ತರದಲ್ಲಿರಿಸಿ ಮಲಗುವುದರಿಂದ ಒಳ್ಳೆಯದೆನಿಸುವುದು

೨೨ ಈ. ಪ್ರತಿ ಬಾರಿ ಸ್ವಲ್ಪ-ಸ್ವಲ್ಪ; ಆದರೆ ಮೇಲಿಂದ ಮೇಲೆ ನೀರು ಕುಡಿಯುವುದು

೨೩. ಲೈಕೊಪೊಡಿಯಮ್‌ ಕ್ಲ್ಯವ್ಹ್ಯಟಮ್‌ (Lycopodium Clavatum)

೨೩ ಅ. ತಲೆನೋವು ಇರುವಾಗ ನೆತ್ತಿಯ ಮೇಲೆ, ಮೆಲಕಿನ ಮೇಲೆ (ಕಿವಿ ಮತ್ತು ಕಣ್ಣಿನ ನಡುವಿನ ಭಾಗ) (ಣಎಮ್ಠಿಟಎ) (ಹೆಚ್ಚಿನ ಬಾರಿ ಬಲಬದಿಗೆ) ಕಣ್ಣುಗಳ ಮೇಲೆ, ಮೂಗಿನ ತುದಿಯಲ್ಲಿ ವೇದನೆಗಳು ಆಗುವುದು

೨೩ ಆ. ಸಾಯಂಕಾಲ ೪ ರಿಂದ ೮ ಈ ಸಮಯದಲ್ಲಿ ತಲೆನೋವು ಅತ್ಯಧಿಕ ಇರುವುದು

೨೪. ಫಾಸ್ಫೋರಮ್‌ ಯಸಿಡಮ್‌ ( Phosphorum acidum)

ಸಂಭೋಗ, ಹಾಗೆಯೇ ಕಣ್ಣುಗಳ ಅತಿ ಬಳಕೆ ಇವುಗಳಿಂದಾಗಿ ತಲೆ ನೋವಾಗುವುದು

೨೫. ಕ್ಯಾಲಿಯಮ್‌ ಬಾಯಕ್ರೋಮಿಕಮ್‌ ( Kalium Bichromicum)

೨೫ ಅ. ಔಷಧಿಯನ್ನು ತೆಗೆದುಕೊಂಡು ಶೀತವನ್ನು ತಾತ್ಕಾಲಿಕವಾಗಿ ನಿಗ್ರಹಿಸಿದುದರಿಂದ ಸಣ್ಣ ಸಣ್ಣ ಭಾಗಗಳಲ್ಲಿ ತಲೆ ನೋಯುವುದು

೨೫ ಆ. ಒಂದು ಕಣ್ಣಿನ ಮೇಲೆ, ವಿಶೇಷವಾಗಿ ಬಲ ಕಣ್ಣಿನ ಮೇಲೆ ತಲೆ ನೋವಾಗುವುದು

೨೫ ಇ. ತಲೆನೋವು ಆರಂಭವಾಗುವ ಮೊದಲು ದೃಷ್ಟಿ ಅಸ್ಪಷ್ಟ (ಬ್ಟಉಡಿಡಿಎಜ)ವಾಗುವುದು ಮತ್ತು ವೇದನೆ ಆರಂಭವಾದ ನಂತರ ದೃಷ್ಟಿ ಸುಧಾರಿಸುವುದು

೨೬. ಕ್ಯಾಪ್ಸಿಕಮ್‌ (Capsicum)

೨೬ ಅ. ಕೆಮ್ಮುವಾಗ ತಲೆನೋವು ಆರಂಭವಾಗಿ ‘ತಲೆಬುರುಡೆ ಒಡೆಯುತ್ತದೋ ಏನೋ ?’, ಎಂದು ಅನಿಸುವುದು

೨೬ ಆ. ಸಂಪೂರ್ಣ ತಲೆಯಲ್ಲಿ ನೋವು

೨೭. ಇಪಿಕ್ಯಾಕುಆನ್ಹಾ (Ipecacuanha) : ತಲೆನೋವಿನ ಜೊತೆಗೆ ಹೊಟ್ಟೆ ತೊಳೆಸಿದಂತಾಗುವುದು (ವಾಂತಿಬಂದಂತೆ ಆಗುವುದು)

೨೮. ಸೆಡ್ರಾನ್‌ (Cedron) : ಪ್ರತಿದಿನ ಅದೇ ಸಮಯದಲ್ಲಿ ತಲೆನೋವು ಬರುವುದು

೨೯. ಸೆಲೆನಿಯಮ್‌ ಮೆಟ್ಯಾಲಿಕಮ್‌ (Selenium Metalicum) : ಹೆಚ್ಚು ಚಹಾ ಕುಡಿಯುವುದರಿಂದ ಬರುವ ತಲೆನೋವು

೩೦. ಅಂಬ್ರಾ ಗ್ರಿಸಿಯಾ (Ambra Grisea)  : ಮುಪ್ಪಿನ ಕಾಲದಲ್ಲಿ ಬರುವ ತಲೆನೋವು ಮತ್ತು ಅದರೊಂದಿಗೆ ಉದಾಸೀನತೆ ಅನಿಸುವುದು

೩೧ : ಬರಾಯಟಾ ಮ್ಯುರಿಯಾಟಿಕಮ್‌ (Baryta Muriaticum) : ಉಚ್ಚ ರಕ್ತದೊತ್ತಡದಿಂದಾಗಿ ಬರುವ ತಲೆನೋವು

೩೨. ಯಗಾರಿಕಸ್‌ ಮಸ್ಕೆರಿಯಸ್‌ (Agaricus Muscarius) : ತಲೆನೋವು ಮತ್ತು ಅದರ ಜೊತೆಗೆ ಮೂಗಿನಿಂದ ರಕ್ತಸ್ರಾವವಾಗುವುದು

(ಮುಕ್ತಾಯ)

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಾಯ !’

ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ  ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು  ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು.