ತಲೆನೋವಿಗಾಗಿ (Headache) ಹೋಮಿಯೋಪತಿ ಔಷಧಿಗಳ ಮಾಹಿತಿ 

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೮)

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ ಮಾಡಬಹುದು ? ಹೋಮಿಯೋಪತಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ವಿಷಯಗಳ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.

ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳ ಮೇಲೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೩೯ ನೇ ಸಂಚಿಕೆಯಲ್ಲಿ ನಾವು ‘ಘಟನೆಗಳು ಘಟಿಸುವ ಮೊದಲಿನ ಚಿಂತೆ’ ಈ ರೋಗಕ್ಕೆ ತೆಗೆದುಕೊಳ್ಳಬೇಕಾದ ಆರೈಕೆ ಮತ್ತು ಅದಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳ ಮಾಹಿತಿಯನ್ನು ಓದಿದೆವು. ನೇರವಾಗಿ ಕಾಯಿಲೆಗಳಿಗೆ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ತಲೆನೋವಿನ ಕಾರಣಗಳು

ಅ. ಮದ್ಯಪಾನ, ಧೂಮಪಾನ

ಆ. ಅತೀ ಮಾಂಸಾಹಾರ ಸೇವನೆ

ಇ. ಪದೇ ಪದೇ ಊಟದ ಸಮಯವನ್ನು ತಪ್ಪಿಸುವುದು ಅಥವಾ ಊಟ ಮಾಡದಿರುವುದು.

ಈ. ದೀರ್ಘಕಾಲ ಕೆಮ್ಮುವುದು, ಸೀನು ಬರುವುದು, ಅಳುವುದು.

ಮುಂದಿನ ತಲೆನೋವುಗಳಲ್ಲಿ ತುರ್ತಾಗಿ ವೈದ್ಯಕೀಯ ಸಹಾಯವನ್ನು ಪಡೆಯಬೇಕು

ಅ. ಹಠಾತ್ತಾಗಿ ತೀವ್ರ ತಲೆನೋವು ಪ್ರಾರಂಭವಾಗುವುದು (Acute Severe Headache)

ಆ. ತಲೆಗೆ ಪೆಟ್ಟು ಬಿದ್ದ ನಂತರ (Head injury) ತಲೆನೋವು ಪ್ರಾರಂಭವಾಗುವುದು.

ಇ. ತಲೆನೋವಿನ ಜೊತೆಗೆ ಫಿಟ್ಸ್ (Fits/Seizures) ಬರುವುದು.

ಮೇಲಿನ ಮೂರು ಸ್ಥಿತಿಗಳನ್ನು ಬಿಟ್ಟರೆ ಇತರ ಸಾಮಾನ್ಯ ತಲೆನೋವು ಇರುವಾಗ ಇತರ ಯಾವುದೇ ವಿಶಿಷ್ಟ ಲಕ್ಷಣಗಳಿದ್ದರೆ, ಯಾವ ಔಷಧಿಯನ್ನು ತೆಗೆದುಕೊಳ್ಳಬೇಕು, ಎಂಬುದನ್ನು ಔಷಧಿಗಳ ಹೆಸರಿನ ಮುಂದೆ ಕೊಡಲಾಗಿದೆ.

೧. ಬೆಲಾಡೋನಾ (Belladona)

೧. ಅ. ಹಣೆ ಮತ್ತು ಕಿವಿಗಳ ಕೆಳಗಿನ ಭಾಗದಲ್ಲಿ ಜಡತ್ವವೆನಿಸುವುದು, ಹಾಗೆಯೇ ತಲೆ ಜಜ್ಜಿದಂತೆ (Throbbing) ನೋವಾಗುವುದು (Migraine Headache)

೨. ಆ. ಬೆಳಕು, ಗೊಂದಲ, ಚಟುವಟಿಕೆಗಳನ್ನು ಮಾಡುವುದು, ವಿಶ್ರಾಂತಿ ಮಾಡುತ್ತಿರುವುದು, ಕೂದಲನ್ನು ಕತ್ತರಿಸುವುದು ಇವುಗಳ ನಂತರ ತಲೆನೋವು ಹೆಚ್ಚಾಗುವುದು

೧ ಇ. ತಲೆನೋವಿನಿಂದ ಸತತವಾಗಿ ನರಳುವುದು

೧ ಈ. ಮುಖ ಕೆಂಪಾಗುವುದು (flushed), ತಲೆ ಬಿಸಿಯಾಗು ವುದು; ಕಣ್ಣುಗಳು ಉರಿಯುವುದು

೧ ಉ. ತಲೆಯನ್ನು ತಲೆದಿಂಬಿನಲ್ಲಿ ತುರುಕುವುದು, ತಲೆಯನ್ನು ಹಿಂದೆ ಎಳೆಯುವುದು, ತಲೆನೋವಿನಿಂದ ಹೊರಳಾಡುವುದು

೧ ಊ. ಕತ್ತಲಿನ ಕೋಣೆಯಲ್ಲಿ ಒಳ್ಳೆಯದೆನಿಸುವುದು

೨. ಅಕೋನೈಟ್‌ ನೇಪೆಲಸ್‌ (Aconite Napellus)

೨ ಅ. ತಲೆಯನ್ನು ನಾಲ್ಕೂ ಬದಿಯಿಂದ ಗಟ್ಟಿಯಾಗಿ ಕಟ್ಟಿದಂತೆ ತಲೆ ನೋವಾಗುವುದು

೨ ಆ. ತಲೆಬರುಡೆಯಲ್ಲಿರುವುದೆಲ್ಲ ಹಣೆಯಿಂದ ಹೊರ ಬರುವುದು ಎಂದು ಅನಿಸುವುದು

೨ ಇ. ಕಣ್ಣುಗಳ ಮೇಲ್ಭಾಗದಲ್ಲಿ (supraorbital) ತಲೆ ನೋಯುವುದು

೨ ಈ. ಚಿಂತೆ ಮತ್ತು ಅಸ್ವಸ್ಥತೆಯಿಂದಾಗಿ ಮುಖ ಸಪ್ಪಗಾಗುವುದು

೨ ಉ. ಸಾವಿನ ಬಗ್ಗೆ ಭಯವೆನಿಸುವುದು

೩. ನಕ್ಸ್ ವೋಮಿಕಾ (Nux Vomica)

೩ ಅ. ತೆಳ್ಳಗಿನ ಅಂಗಸೌಷ್ಠವ, ಮಲಬದ್ಧತೆ, ಸತತವಾಗಿ ಕುಳಿತುಕೊಳ್ಳುವ ಜೀವನಶೈಲಿಯಿರುವ ವ್ಯಕ್ತಿಗಳಿಗೆ ತಲೆನೋವು ಬರುವುದು

೩ ಆ. ಬಹಳಷ್ಟು ತಿನ್ನುವುದರಿಂದ ಹೊಟ್ಟೆ ಕೆಡುವುದು, ತಂಬಾಕು ಅಥವಾ ಮದ್ಯ ಸೇವನೆ, ಮಾನಸಿಕ ಅತೀಶ್ರಮದಿಂದ ತಲೆನೋವು ಬರುವುದು

೪. ನೆಟ್ರಮ್‌ ಮ್ಯುರಿಯಾಟಿಕಮ್‌ (Natrum Muriaticum)

೪ ಅ. ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತಲೆ ನೋಯುವುದು

೪ ಆ. ರಕ್ತಹೀನತೆ (anaemia) ಇರುವ ವ್ಯಕ್ತಿಗೆ ತಲೆನೋಯುವುದು

೪ ಇ. ತಲೆಯಲ್ಲಿ ಸಾವಿರಾರು ಚಿಕ್ಕ ಸುತ್ತಿಗೆಗಳಿಂದ ಹೊಡೆದಂತಾಗಿ ತಲೆನೋವು.

೪ ಈ. ಸತತವಾಗಿ ಅಧ್ಯಯನ ಅಥವಾ ಹೊಲಿಗೆ ಕೆಲಸ ಮಾಡು ವುದರಿಂದ ಕಣ್ಣಿನ ಮೇಲೆ ಒತ್ತಡ ಬಂದು ತಲೆನೋಯುವುದು

೪ ಉ. ಕಣ್ಣುಗಳೆದುರು ಕತ್ತಲೆ ಕವಿದು ಅಂಕುಡೊಂಕು ಆಕಾರದಲ್ಲಿ ಮಿಂಚು ಹೊಡೆದಂತೆ ಆಗುವುದು (blindness with zig-zag dazzling like lightening) ಮತ್ತು ಅನಂತರ ತಲೆನೋವು ಪ್ರಾರಂಭವಾಗುವುದು

೫. ಜಲ್ಸೇಮಿಯಮ್‌ ಸೆಮ್ಪರ್ವಿರೆನ್ಸ್ (Gelsemium Sempervrens)

೫ ಅ. ವಿಶೇಷವಾಗಿ ತಲೆಯ ಮೇಲಿನ ಭಾಗದಲ್ಲಿ ಮಂದ ಮತ್ತು ತೀವ್ರ (dull and heavy) ನೋವಾಗುವುದು, ಕಿವಿಗಳ ಕೆಳಗಿನ ಭಾಗದಲ್ಲಿ (throbbing) ವೇದನೆ ಆಗುವುದು

೫ ಆ. ಕಣ್ಣುರೆಪ್ಪೆಗಳು ಜಡವಾಗಿ ಕೆಳಗೆ ಬಾಗುವುದು, ಕಣ್ಣುಗಳು ಜಡವಾಗುವುದು, ಹಾಗೆಯೇ ತಲೆಸುತ್ತು ಬರುವುದು

೫ ಇ. ತಲೆನೋವು ಪ್ರಾರಂಭವಾಗುವ ಮೊದಲು ಏನೂ ಕಾಣಿಸದಂತಾಗುವುದು ಮತ್ತು ತಲೆನೋವು ಪ್ರಾರಂಭವಾದ ನಂತರ ಮೊದಲಿನಂತೆ ಕಾಣಿಸುವುದು

೫ ಈ. ಮಾನಸಿಕ ತೊಂದರೆ (Mental Tension), ತಂಬಾಕು ಸೇವನೆ, ಬಗ್ಗುವಿಕೆ ಮತ್ತು ಬಿಸಿಲಿನಲ್ಲಿ ಓಡಾಟ ಇವುಗಳಿಂದ ತಲೆನೋವು ಹೆಚ್ಚಾಗುವುದು

೫ ಉ. ಮೂತ್ರವಿಸರ್ಜನೆ ಮಾಡಿದ ನಂತರ ತಲೆನೋವು ಕಡಿಮೆಯಾಗುವುದು

೬. ಗ್ಲೋನೈನ್‌ (Glonine)

೬ ಅ. ಬಿಸಿಲಿನಲ್ಲಿ ತಿರುಗಾಡುವುದರಿಂದ ಬರುವ ತಲೆನೋವು

೬ ಆ. ತಲೆಗೆ ಬಿಸಿಲು ತಗಲಿದ ಕಾರಣ ತಲೆಗೆ ಸಂಬಂಧಿಸಿದ ವಿವಿಧ ತೊಂದರೆಗಳು, ಉದಾ. ತಲೆನೋವು, ತಲೆಸುತ್ತು, ತಲೆತಿರುಗುವಿಕೆ ಇತ್ಯಾದಿ ಪ್ರಾರಂಭವಾಗುವುದು

೬ ಇ. ತಲೆಯಲ್ಲಿ ಹೊಡೆದಂತೆ (throbbing) ವೇದನೆಗಳು ಆಗುವುದು

೬ ಈ. ಬಿಸಿಲಿಗೆ ಹೋದ ನಂತರ ಉಷ್ಣತೆ ಸಹನೆಯಾಗದಿರುವುದು

೬ ಉ. ತಲೆಯ ಮೇಲೆ ಟೊಪ್ಪಿಗೆ ಹಾಕಿಕೊಂಡರೆ ಅಸಹನೆ ಆಗುವುದು

೬ ಊ. ತಲೆಯ ಆಕಾರ ದೊಡ್ಡದಾಗಿದೆ ಎಂದು ಅನಿಸುವುದು

೬ ಎ. ಗರ್ಭಾಶಯದಿಂದ ರಕ್ತಸ್ರಾವ ಆದನಂತರ ಬರುವ ತಲೆನೋವು

೭. ಸಾನ್ಗಿವನೇರಿಯಾ ಕ್ಯನಾಡೆನ್ಸಿಸ್‌ (Sanguinaria Canadensis)

೭ ಅ. ದೈಹಿಕ, ಹಾಗೆಯೇ ಮಾನಸಿಕ ಶ್ರಮದಿಂದಾಗಿ ತಲೆಯ ಬಲಬದಿ ತೀವ್ರವಾಗಿ ನೋಯುವುದು

೭ ಆ. ಮಲಗಿಕೊಂಡಿದ್ದರೆ ಅಥವಾ ಹಾಗೆಯೇ ಬಿದ್ದುಕೊಂಡಿದ್ದರೂ ಆರಾಮ ಅನಿಸುವುದು

೭ ಇ. ಋತುಸ್ರಾವದ ಸಮಯದಲ್ಲಿ ತಲೆ ನೋಯುವುದು, ಜೊತೆಗೆ ಪಿತ್ತ ವಾಂತಿಯಾಗುವುದು

೭ ಈ. ಮಾಸಿಕ ಸರದಿಯ ಸಮಯದಲ್ಲಿ ತಲೆಯಲ್ಲಿ ಮಿಂಚಿನಂತೆ ತಲೆನೋವು ಬರುವುದು, ಹಾಗೆಯೇ ಹೆಚ್ಚು ಪ್ರಮಾಣದಲ್ಲಿ ರಜೋಸ್ರಾವವಾಗುವುದು (ಮೈಮೇಲೆ ಹೋಗುವುದು)

೮. ಸ್ಪೈಜೆಲಿಯಾ ಆಂಥೇಲಮಿಯಾ (Spigelia Anthelmia)

೮ ಅ. ಮಳೆಗಾಲ, ತೇವ, ತಂಪು ವಾತಾವರಣದಿಂದಾಗಿ ಬರುವ ತಲೆನೋವು

೮ ಆ. ನರತಂತುಗಳ ಅಂತರ್ಗತ ನೋವು (neuralgia), ವೇದನೆಗಳು ಕುತ್ತಿಗೆಯ ಮೂಲದಿಂದ ಆರಂಭವಾಗಿ ಅವು ಕುತ್ತಿಗೆಯ ಎಡಭಾಗದಲ್ಲಿ ಸ್ಥಿರವಾಗುವುದು

೮ ಇ. ತಲೆನೋವು ನಿರ್ದಿಷ್ಟ ಅವಧಿಯ ನಂತರ (Peridocal) ಮತ್ತು ಬೆಳಗ್ಗಿನಿಂದ ರಾತ್ರಿಯವರೆಗೆ ಇರುವುದು

೮ ಈ. ಸ್ವಲ್ಪ ಅಲುಗಾಡಿದರೂ, ವೇದನೆ ಹೆಚ್ಚಾಗುವುದು, ಅದರೊಂದಿಗೆ ಅಸ್ವಸ್ಥತೆ ಮತ್ತು ಎದೆಬಡಿತ ಜಾಸ್ತಿಯಾಗುವುದು

೯. ಕ್ಯಮೋಮಿಲ್ಲಾ (Chamomilla)

೯ ಅ. ಸಿಟ್ಟು ಬಂದನಂತರ ತಲೆನೋಯುವುದು, ತಲೆಯಲ್ಲಿ ಬಿಗಿದಂತೆ ಎಳೆದಂತೆ ಸಹಿಸಲಾರದಂತಹ ವೇದನೆ ಆಗುವುದು

೯ ಆ. ತಲೆನೋವಿನಕಡೆಗೆ ಗಮನ ಕೊಟ್ಟಾಗ, ಹಾಗೆಯೇ ಊಟದ ನಂತರ ತಲೆನೋವು ಹೆಚ್ಚಾಗುವುದು

೧೦. ಬ್ರಾಯೋನಿಯಾ ಅಲ್ಬಾ (Bryonia Alba)

೧೦ ಅ. ಬಿಗಿದಂತೆ (ಠಿಡಿಎಸ್ಸಿವೆ), ತಲೆ ಒಡೆಯುತ್ತದೆಯೆನೋ, ಸೀಳುತ್ತದೆ ಏನೋ (ಬುಡಿಸ್ಣೈಟಿಗ್, ಸ್ಠಿಟೈಣಣೈಟಿಗ್) ಎನ್ನುವಂತೆ ವೇದನೆಗಳು ಆಗುವುದು

೧೦ ಆ. ಅಲುಗಾಡಿದರೆ ತಲೆನೋವು ಹೆಚ್ಚಾಗುವುದು; ಶಾಂತ ವಾಗಿ ಮಲಗಿದ್ದರೆ, ತಲೆಯನ್ನು ಒತ್ತುವುದರಿಂದ ಮತ್ತು ಕತ್ತಲಲ್ಲಿ ತಲೆನೋವು ಕಡಿಮೆಯಾಗುವುದು

೧೦ ಇ. ತಲೆಯ ಬಲಬದಿಯಲ್ಲಿ ನೋವು ಮತ್ತು ಅದರೊಂದಿಗೆ ಹೊಟ್ಟೆ ತೊಳೆಸಿದಂತಾಗಿ ಪಿತ್ತದ ವಾಂತಿಯಾಗುವುದು

೧೦ ಈ. ಬಾಯಾರಿಕೆಯಾಗಿ ಪ್ರತಿಬಾರಿ ತುಂಬಾ ನೀರು ಕುಡಿಯುವುದು

೧೧. ಪಲ್ಸೇಟಿಲಾ ನಿಗರಿಕನ್ಸ್ (Pulsatilla Nigricans)

೧೧ ಅ. ಅತೀಶ್ರಮದ ನಂತರ ತಲೆನೋಯುವುದು, ನೋಯುವ ಜಾಗ ತಲೆಯ ವಿವಿಧ ಭಾಗಗಳಲ್ಲಿ ಬದಲಾಗುವುದು

೧೧ ಆ. ತಲೆನೋವಿನೊಂದಿಗೆ ಕಣ್ಣುಗಳಿಂದ ಬಿಸಿ ನೀರು ಹರಿಯುವುದು

೧೧ ಇ. ರೋಗಿಗೆ ಸ್ವಚ್ಛಂದ ಹವಾಮಾನದಲ್ಲಿ ಒಳ್ಳೆಯದೆನಿಸುವುದು

(ಮುಂದುವರಿಯುವುದು)