ಮೂತ್ರಾಂಗದ ಸೋಂಕು (ಜಂತುಸಂಸರ್ಗ) : ಕಾರಣ, ಲಕ್ಷಣಗಳು ಮತ್ತು ಚಿಕಿತ್ಸೆ

ಅನೇಕ ಜನರಿಗೆ ಮೂತ್ರಾಂಗದ ಸೋಂಕು (ಜಂತುಸಂಸರ್ಗ) ಆಗುವುದು ನಮಗೆ ಕಂಡುಬರುತ್ತದೆ. ಪ್ರತಿದಿನ ವಿವಿಧ ರೋಗಾಣು (ಬ್ಯಾಕ್ಟೇರಿಯಾ)ಗಳೊಂದಿಗೆ ನಮ್ಮ ದೇಹದ ಸಂಪರ್ಕ ಆಗುತ್ತಲೇ ಇರುತ್ತದೆ. ನಮ್ಮ ಶರೀರವು ಈ ರೋಗಾಣುಗಳೊಂದಿಗೆ ಹೋರಾಡುತ್ತಿರುತ್ತದೆ; ಆದರೆ ಕೆಲವೊಮ್ಮೆ ಈ ಹೋರಾಟವು ವ್ಯರ್ಥವಾಗುತ್ತದೆ ಮತ್ತು ನಮಗೆ ಸೊಂಕಾಗುತ್ತದೆ. ಪುರುಷರಿಗಿಂತ ಸ್ತ್ರೀಯರಲ್ಲಿ ಮೂತ್ರಾಂಗದ ಸೊಂಕು ಆಗುವ ಪ್ರಮಾಣ ಹೆಚ್ಚಿರುತ್ತದೆ. ಈ ಸೋಂಕಿನ ಲಕ್ಷಣಗಳನ್ನು ತಿಳಿದುಕೊಂಡು ಅದರ ಮೇಲೆ ಸರಿಯಾದ ಸಮಯಕ್ಕೆ ಔಷಧೋಪಚಾರವನ್ನು ಮಾಡಿದರೆ ಸಕಾಲದಲ್ಲಿ ಕಾಯಿಲೆಯನ್ನು ನಿಯಂತ್ರಿಸಬಹುದು. ಆದ್ದರಿಂದ ನಾವು ಈ ಲೇಖನಗಳ ಮಾಧ್ಯಮದಿಂದ ವಿವಿಧ ರೋಗಗಳ ಲಕ್ಷಣಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಇದರಲ್ಲಿ ಕೆಲವೊಂದು ಮನೆಯಲ್ಲಿ ಮಾಡಬಹುದಾದ ಸಾದಾ, ಸುಲಭ ಉಪಾಯಗಳನ್ನು ಹೇಳಲಾಗಿದೆ. ಅದನ್ನು ವೈದ್ಯಕೀಯ ಔಷಧೋಪಚಾರ ಗಳೊಂದಿಗೆ ಮಾಡುವುದಿದೆ. ರೋಗಾಣುಗಳಿಗೆ ಮನೆಮದ್ದುಗಳನ್ನು ಸಂಪೂರ್ಣ ಅವಲಂಬಿಸುವುದು ತಪ್ಪು.

೧. ಮೂತ್ರಾಂಗದ ಸೋಂಕಿನ ಕಾರಣಗಳು

ಅ. ಮೂತ್ರವನ್ನು ದೀಘ್ರಕಾಲದ ವರೆಗೆ ಹಿಡಿದಿಟ್ಟುಕೊಳ್ಳುವುದು. ದೂರದ ಪ್ರವಾಸದಲ್ಲಿ ಅನೇಕ ಬಾರಿ,ಮೂತ್ರವಿಸರ್ಜನೆಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯು ರೋಗಾಣುಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಆ. ಶಾರೀರಿಕ ಸ್ವಚ್ಛತೆಯ ಅಭಾವ. ವಿಶೇಷವಾಗಿ ಮಹಿಳೆಯರಲ್ಲಿ ಮಾಸಿಕ ಸರದಿಯ ಸಮಯದಲ್ಲಿ ಸರಿಯಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ ಸೋಂಕು ಬರಬಹುದು.

ಇ. ಮಧುಮೇಹ, ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವುದು (ಡಿಹೈಡ್ರೇಶನ್) ಮೂತ್ರಾಂಗದ ಸೋಂಕಿಗೆ ಕಾರಣವಾಗಬಹುದು.

ಈ. ಮೂತ್ರಾಂಗದ ಸೊಂಕಾದ ನಂತರ ಮೂತ್ರವಿಸರ್ಜನೆಗೆ ಶ್ರಮಪಡಬೇಕಾಗುತ್ತದೆ. ಈ ರೀತಿ ಸ್ವಲ್ಪ ಸ್ವಲ್ಪ ಮತ್ತು ಶ್ರಮಪಟ್ಟು ಆಗುವ ಮೂತ್ರವಿಸರ್ಜನೆಯ ಕಾರಣಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ.

ನಮ್ಮ ಶಾರೀರಿಕ ಕ್ಷಮತೆಗಿಂತ ಹೆಚ್ಚು ವ್ಯಾಯಾಮ ಮಾಡುವುದು, ಅತೀಮದ್ಯಪಾನ, ಹೆಚ್ಚು ಪ್ರಮಾಣದಲ್ಲಿ ಮೀನು ತಿನ್ನುವುದು ಇತ್ಯಾದಿ.

ವೈದ್ಯಾ (ಸೌ.) ಮುಕ್ತಾ ಲೊಟಲೀಕರ

೨. ಲಕ್ಷಣಗಳು

ಅ. ಮೇಲಿಂದ ಮೇಲೆ ಮತ್ತು ಸ್ವಲ್ಪ ಸ್ವಲ್ಪ ಮೂತ್ರ ವಿಸರ್ಜನೆಯಾಗುವುದು.

ಆ. ಮೂತ್ರವಿಸರ್ಜನೆಯ ಸಮಯದಲ್ಲಿ ಮೂತ್ರಾಂಗ ಉರಿಯುವುದು.

ಇ. ಮೂತ್ರಕ್ಕೆ ತುಂಬಾ ವಾಸನೆ ಬರುವುದು.

ಈ. ಮೂತ್ರವು ಕಡು ಹಳದಿ ಬಣ್ಣದ ಅಥವಾ ತಿಳಿಗೆಂಪಾಗುವುದು.

ಉ. ಮೂತ್ರವಿಸರ್ಜನೆಯ ನಂತರ ಮೂತ್ರ ಸಂಪೂರ್ಣ ಆಗಲಿಲ್ಲ ಎಂದೆನಿಸುವುದು.

ಊ. ಕೆಲವೊಮ್ಮೆ ಮೂತ್ರವಿಸರ್ಜನೆಯಲ್ಲಿ ರಕ್ತವೂ ಬರಬಹುದು.

ಎ. ಮೂತ್ರವಿಸರ್ಜನೆ ಮಾಡುವಾಗ ಮೂತ್ರಾಂಗದಲ್ಲಿ ವೇದನೆಗಳು ಆಗುವುದು, ಹಾಗೆಯೇ ಸೊಂಟದಲ್ಲಿ ಮತ್ತು ತೊಡೆಸಂದಿಯಲ್ಲಿಯೂ ವೇದನೆಗಳು ಆಗುವುದು.

ಮೂತ್ರಾಂಗದ ಸೋಂಕಾಗಿದೆ, ಎಂಬುದನ್ನು ಸರಳ ಮೂತ್ರದ ಪರೀಕ್ಷಣೆಯಿಂದ ನಿರ್ಣಯಿಸಲಾಗುತ್ತದೆ; ಆದರೆ ಮೇಲಿಂದ ಮೇಲೆ ಸೋಂಕಾಗುತ್ತಿದ್ದರೆ ಅದರ ಕಾರಣವನ್ನು ಹುಡುಕಲು ವೈದ್ಯರು ನಮಗೆ ಮುಂದುಮುಂದಿನ ಪರೀಕ್ಷಣೆಗಳನ್ನು ಮಾಡಲು ಹೇಳಬಹುದು. ಸೋಂಕಿನ ಲಕ್ಷಣಗಳು ಕಂಡುಬಂದರೆ ೧-೨ ದಿನಗಳಲ್ಲಿ ಮನೆಮದ್ದನ್ನು ಮಾಡಿದರೂ ಗುಣವಾಗದಿದ್ದರೆ ತಕ್ಷಣ ವೈದ್ಯಕೀಯ ಸಲಹೆಯನ್ನು ಪಡೆಯುವುದು ಆವಶ್ಯಕವಾಗಿದೆ.

೩. ಮೂತ್ರಾಂಗದ ಸೋಂಕಾದರೆ ತೆಗೆದುಕೊಳ್ಳಬೇಕಾದ ಕಾಳಜಿ

ಅ. ಕಿಬ್ಬೊಟ್ಟೆಯಲ್ಲಿ ಮತ್ತು ಸೊಂಟದಲ್ಲಾಗುವ ವೇದನೆಗಾಗಿ ಬಿಸಿ ನೀರಿನ ಚೀಲದಿಂದ ಶಾಖ ನೀಡಬಹುದು.

ಆ. ಯೋಗ್ಯ ಪ್ರಮಾಣದಲ್ಲಿ ನೀರು ಕುಡಿಯುವುದು, ಏಳನೀರು, ಲಿಂಬೆಹಣ್ಣಿನ ಶರಬತ್ತನ್ನು ಕುಡಿಯಬೇಕು. ದ್ರಾಕ್ಷಿಹಣ್ಣು, ಕಲ್ಲಂಗಡಿ, ಡಾಳಿಂಬ ಇಂತಹ ಹಣ್ಣುಗಳನ್ನು ತಿನ್ನಬಹುದು.

ಇ. ಹತ್ತಿಯ, ಹಾಗೆಯೇ ಸಡಿಲವಾದ ಅಂತರ್ವಸ್ತ್ರಗಳನ್ನು ಧರಿಸಬೇಕು.

ಈ. ಶೀತಪೇಯ, ಕಾಫಿ ಇಂತಹ ಪದಾರ್ಥಗಳನ್ನು ಕುಡಿಯಬಾರದು. ಮಸಾಲೆಯುಕ್ತ, ಉಪ್ಪು ಮತ್ತು ಹುಳಿ ಪದಾರ್ಥಗಳು, ಮೊಸರು, ಮೀನು ತಿನ್ನುವುದನ್ನು ತಡೆಯಬೇಕು.

ಉ. ೨೫೦ ಮಿಲಿಲೀಟರ್‌ ನೀರಿನಲ್ಲಿ ೨೦ ಮಿಲಿಲೀಟರ್‌ ಲಿಂಬೆಹಣ್ಣಿನ ರಸ ಮತ್ತು ಒಂದೂವರೆ ಗ್ರಾಮ್‌ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ ಕುಡಿಯಬೇಕು.

೪. ಸೋಂಕಾಗಬಾರದೆಂದು ತೆಗೆದುಕೊಳ್ಳಬೇಕಾದ ಕಾಳಜಿ

ಅ. ನೀರು ಕುಡಿಯುವ ಪ್ರಮಾಣವನ್ನು ಸರಿಯಾಗಿ ಇಡುವುದು. ಮೂತ್ರವನ್ನು ಹಿಡಿದಿಟ್ಟುಕೊಳ್ಳಬಾರದು.

ಆ. ಶೌಚಾಲಯಕ್ಕೆ ಹೋಗಿ ಬಂದ ನಂತರ, ಹಾಗೆಯೇ ಶಾರೀರಿಕ ಸಂಬಂಧದ ನಂತರ ವಿಶೇಷವಾಗಿ ಸ್ತ್ರೀಯರು ಯೋಗ್ಯ ರೀತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಆವಶ್ಯಕವಾಗಿದೆ.

ಇ. ಸ್ತ್ರೀಯರು ಮಾಸಿಕ ಸರದಿಯ ಅವಧಿಯಲ್ಲಿ ಮತ್ತು ನಂತರ ಶಾರೀರಿಕ ಸ್ಚಚ್ಛತೆಗಾಗಿ ಯಾವುದೇ ರೀತಿಯ ರಾಸಾಯನಿಕ ಪದಾರ್ಥವನ್ನು ಬಳಸಬಾರದು. ಕೇವಲ ನೀರಿನಿಂದ ಸ್ವಚ್ಛಗೊಳಿಸಬೇಕು.

ಈ.  ಪದೇಪದೇ ಸೋಂಕಾಗುತ್ತಿದ್ದರೆ ಇಂತಹ ವ್ಯಕ್ತಿಗಳು ತುಂಬಾ ಬೆವರು ಬರುತ್ತಿದ್ದರೆ ತಕ್ಷಣ ಬೆವರಿದ ಅಂತರ್ವಸ್ತ್ರಗಳನ್ನು ಬದಲಾಯಿಸಬೇಕು.

– ವೈದ್ಯಾ (ಸೌ.) ಮುಕ್ತಾ ಲೊಟಲೀಕರ, ಪುಣೆ. (೨೯.೪.೨೦೨೪)