ಪ್ರಸಾರಮಾಧ್ಯಮಗಳ ಮೇಲೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ !


ಕಳೆದ ೨೦ ವಷಗಳಲ್ಲಿ ದೇಶದಲ್ಲಿ ಏಳೂ ದಿನಗಳು ಮತ್ತು ೨೪ ಗಂಟೆಗಳು ನಡೆಯುವ ೩೭೫ ‘ನ್ಯೂಸ್ ಚ್ಯಾನೆಲ್ಸ್’ ಪ್ರಾರಂಭವಾಗಿವೆ. ಇದು ಯಾವಾಗಲೂ ಹಸಿದಿರುವ ಒಂದು ಪ್ರಾಣಿಯಾಗಿದೆ. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಅದಕ್ಕೆ ತಿನ್ನಲು ಏನು ಕೊಡಬೇಕು ? ಹಾಗೆ ನೋಡಿದರೆ, ಇವುಗಳ ಸಂಖ್ಯೆಯು ಹೆಚ್ಚಾಗಿದೆ; ಆದರೆ ದುರ್ದೈವದಿಂದ ಗುಣಮಟ್ಟವು ಮಾತ್ರ ಕಡಿಮೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ ಪ್ರಸಾರಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲದಂತಾಗಿದೆ. ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ. ಇಂದಿನ ಪ್ರಸಾರಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ.

– ಓರ್ವ ಹಿರಿಯ ಪತ್ರಕರ್ತರು (ಆಧಾರ : ಲೋಕ ಕಲ್ಯಾಣ ಸೇತು, ಜನವರಿ ೨೦೧೩)