ಸದ್ಗುರುಗಳ ಕಾರ್ಯ

ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರು

ಕನ್ನಡಿಯು ಧೂಳಾಗಿದ್ದರೆ, ಅದನ್ನು ಒರೆಸಲು ಸದ್ಗುರುಗಳು ಹೇಳುತ್ತಾರೆ. ನಾವು ಎಲ್ಲಿ ತಪ್ಪುತ್ತಿದ್ದೇವೆಂದು ಸದ್ಗುರುಗಳು ಹೇಳುತ್ತಾರೆ. ಕನಸಿ ನಲ್ಲಿ ಕೆರೆಯೊಳಗೆ ಬಿದ್ದೆನೆಂದು ಚೀರಾಡುವವನು, ಎಚ್ಚರವಾದಾಗ ಚೀರಾಟವನ್ನು ನಿಲ್ಲಿಸುವನು. ಇಲ್ಲಿ ಗುರುಗಳು ಎಚ್ಚರಿಸುವ ಕೆಲಸವನ್ನು ಮಾಡುತ್ತಾರೆ. ಸದ್ಗುರುಗಳು ವಾಹನ ಚಾಲಕನಂತೆ ನಮ್ಮ ದೇಹರೂಪಿ ವಾಹನವನ್ನು ಯೋಗ್ಯ ದಾರಿಯಲ್ಲಿ ಒಯ್ಯುತ್ತಾರೆ. ನಾವು ಭಗವಂತನ ಅನುಸಂಧಾನದಲ್ಲಿರಬೇಕು ಮತ್ತು ಚಾಲಕನಲ್ಲಿ (ಸದ್ಗುರು) ನಂಬಿಕೆಯಿಟ್ಟು ನಿಶ್ಚಿಂತರಾಗಿರಬೇಕು, ಆಗ ಭಯವಿರುವುದಿಲ್ಲ.

– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು, (ಪೂ. (ಪ್ರಾ.) ಕೆ.ವಿ. ಬೆಲಸರೆ ಅಧ್ಯಾತ್ಮಿಕ ಸಾಹಿತ್ಯ ಇವರ ಫೇಸ್‌ಬುಕ್‌ನ ಆಧಾರ)