ಭಗವದ್ಗೀತೋಪದೇಶವನ್ನು ‘ಜಿಹಾದ್’ಗೆ ಹೋಲಿಸಿದ ಕಾಂಗ್ರೆಸ್ ನಾಯಕ : ಅತಾರ್ಕಿಕ ಹಾಗೂ ಕಾಂಗ್ರೆಸ್ಸಿನ ಮೇಲೆಯೆ ತಿರುಗಿ ಬೀಳುವ ಸಾಧ್ಯತೆ !

ಕಾಂಗ್ರೆಸ್‌ನಲ್ಲಿ ತನ್ನದೆ ಕುಕರ್ಮಗಳಿಂದ ಕಳಂಕಿತರಾಗಿ ಕಾರುಬಾರು ನಡೆಸಿದ ದೇಶದ ಮಾಜಿ ಗೃಹಮಂತ್ರಿ ಶಿವರಾಜ ಪಾಟೀಲ-ಚಾಕೂರರ್ಕರ್ ಇವರು ಒಂದು ಕಾರ್ಯಕ್ರಮದಲ್ಲಿ ‘ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಿಂದ ‘ಜಿಹಾದ್’ ಹೇಳಿದನು’, ಎಂಬ ಅತ್ಯಂತ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು. ಅದರಿಂದ ಪಾಟೀಲರ ಹಿಂದೂದ್ವೇಷವು ಕಂಡು ಬಂದಿತು.

೪೮ ವರ್ಷಗಳ ರಾಜಕೀಯ ಕಾರುಬಾರು, ಅದರಲ್ಲಿಯೂ ೩೦ ವರ್ಷ ಸಂಸದರೆಂಬ ಬಿರುದು ಪಡೆದಿರುವ ದೀರ್ಘಕಾಲದ ಅನುಭವ, ದೇಶದ ರಕ್ಷಣಾ ಸಚಿವ, ಗೃಹಸಚಿವ, ಲೋಕಸಭಾ ಅಧ್ಯಕ್ಷ, ರಾಜ್ಯಪಾಲರಂತಹ ಅತ್ಯಂತ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ ನಾಯಕನಿಗೆ ‘ಧರ್ಮಜ್ಞಾನದ ಪ್ರಾಥಮಿಕ ತಿಳುವಳಿಕೆಯಾದರೂ ಇರಬೇಕು’, ಎಂಬ ಕಿಂಚಿತ್ ಅಪೇಕ್ಷೆ; ಆದರೆ ಕಾಂಗ್ರೆಸ್ಸಿನ ಹಿರಿಯ ನಾಯಕ ಶಿವರಾಜ ಪಾಟೀಲ-ಚಾಕೂರ್ಕರರು ಇವೆಲ್ಲದಕ್ಕೂ ಅಪವಾದವಾಗಿದ್ದಾರೆ. ಇದರ ಕಾರಣವೆಂದರೆ ಅವರು ಶ್ರೀಕೃಷ್ಣನು ಅರ್ಜುನನಿಗೆ ನೀಡಿರುವ ಭಗವದ್ಗೀತೋಪದೇಶಕ್ಕೆ ನೇರವಾಗಿ ‘ಜಿಹಾದ್’ನ ಉಪಮೆಯನ್ನು ನೀಡಿ ಅವರು ತನ್ನ ಅಜ್ಞಾನವನ್ನು ಮಾತ್ರವಲ್ಲ, ಅಧರ್ಮದ ಕಾಂಗ್ರೆಸ್‌ದರ್ಶನವನ್ನೂ ಪುನಃ ತೋರಿಸಿದರು. ಇಷ್ಟಕ್ಕೆ ನಿಲ್ಲದೆ ವಯಸ್ಸಿಗನುಸಾರ ‘ತನ್ನ ನಾಲಿಗೆ ಜಾರಿತು’, ಎಂದು ಒಪ್ಪಿಕೊಳ್ಳದೆ ‘ಮಾಧ್ಯಮಗಳು ನನ್ನ ಹೇಳಿಕೆಯನ್ನು ವಿಪರ್ಯಾಸ ಮಾಡಿವೆ’, ಎಂಬ ಪಲ್ಲವಿಯನ್ನು ಜೋಡಿಸಿ ಅವರು ಮುಕ್ತರಾದರು. ‘ನಾನು ಏನೂ ತಪ್ಪು ಮಾತನಾಡಿಲ್ಲ, ಆದ್ದರಿಂದ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’, ಎಂಬ ತೇಪೆ ಹಚ್ಚಿದರು.

೧. ಶಿವರಾಜ ಪಾಟೀಲರ ಹೇಳಿಕೆಯಿಂದ ಅವರ ತಲೆ ಕೆಟ್ಟಿದ್ದು ಅವರು ಹಿಂದೂದ್ವೇಷಿ ಇರುವುದು ಕಂಡು ಬರುತ್ತದೆ

ಅದರಲ್ಲಿಯೂ ಭಗವದ್ಗೀತೆ ಮತ್ತು ಕುರಾನನ್ನು ಹೀಗೆ ಅಸಂಬದ್ಧ ತುಲನೆ ಮಾಡಿದ ನಂತರವೂ ತಾನು ‘ಬೈಬಲ’ನಿಂದ ಹಿಡಿದು ಎಲ್ಲ ಧರ್ಮಗ್ರಂಥಗಳನ್ನು ಓದಿರುವ ಚಾಕೂರ್ಕರರ ಹುರುಳಿಲ್ಲದ ಆತ್ಮವಿಶ್ವಾಸವಂತೂ ಇನ್ನೂ ಹೆಚ್ಚು ಅಂಜಿಕೊಂಡಂತೆ ಇದೆ. ಆದ್ದರಿಂದ ‘ನಿಮ್ಮ ತಲೆ ಸರಿಯಿದೆಯೆ ?’, ಎಂಬ ಪ್ರಶ್ನೆಯನ್ನು ಕೇಳುವ ಬದಲು ಚಾಕೂರ್ಕರ ತಲೆ ನಿಜವಾಗಿಯೂ ಕೆಟ್ಟುಹೋಗಿದೆ, ಎಂಬುದೇ ಅವರ ನಿರರ್ಥಕ ಮಾತಿನಿಂದ ಸಿದ್ಧವಾಗುತ್ತದೆ. ಅವರು ಭಗವದ್ಗೀತೆ, ಕುರಾನ, ಬೈಬಲ್ ಮತ್ತು ಇತರ ಧರ್ಮಗ್ರಂಥಗಳನ್ನು ಕೇವಲ ಓದದೆ ಅದನ್ನು ಆಳವಾಗಿ ತಿಳಿದುಕೊಳ್ಳುತ್ತಿದ್ದರೆ, ಅವರು ಅದರಲ್ಲಿನ ಜ್ಞಾನ, ಉಪದೇಶಗಳನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳುತ್ತಿದ್ದರೆ, ಇಂದು ಅವರ ಬಾಯಿಯಿಂದ ಇಂತಹ ಅಸಂಬದ್ಧ ಮಾತುಗಳು ಹೊರಬರುತ್ತಿರಲಿಲ್ಲ.

೨. ಪಾಟೀಲರ ಸಂದರ್ಶನವನ್ನು ತೆಗೆದುಕೊಳ್ಳುವ ಪತ್ರಕರ್ತರು ಭಗವದ್ಗೀತೆಯಲ್ಲಿ ಜಿಹಾದ್‌ನ ಬೋಧನೆ ಇಲ್ಲದಿರುವುದರಿಂದ ಯಾವುದೇ ಪ್ರಶ್ನೆ ಕೇಳದಿರುವುದು

ಶಿವರಾಜ ಪಾಟೀಲ-ಚಾಕೂರ್ಕರ ಏನು ಹೇಳಿದರು ? ಎಂಬುದನ್ನು ಇಲೆಕ್ಟ್ರಾನಿಕ್ ಮಾಧ್ಯಮಗಳು ಕೂಡ ಇದ್ದಕ್ಕಿದ್ದಂತೆಯೆ ಪ್ರಸಾರ ಮಾಡಿದವು ಹಾಗೂ ಸಾಮಾಜಿಕಮಾಧ್ಯಮಗಳಲ್ಲಿ ಮಾತ್ರ ಅವರಿಗೆ ಟೀಕೆಯ ಚಾಬೂಕಿನ ಏಟು ಕೂಡ ಚೆನ್ನಾಗಿ ಬಿದ್ದಿವೆ. ಇಷ್ಟೆಲ್ಲ ಆದನಂತರ ಚಾಕೂರ್ಕರರ ಸಂದರ್ಶನ ತೆಗೆದುಕೊಳ್ಳಲು ಹೋಗಿರುವ ಪತ್ರಕರ್ತರಲ್ಲಿ ಒಬ್ಬರಿಗೂ ಅವರ ಬಾಯಿಯಿಂದ ಹೊರಬಿದ್ದ ನುಡಿಮುತ್ತಿನ ವಿಷಯದಲ್ಲಿ ಮರುಪ್ರಶ್ನೆ ಕೇಳಬೇಕೆಂದು ಅನಿಸಲಿಲ್ಲ. ಅಂದರೆ ‘ಕುರಾನದಲ್ಲಿನ ಜಿಹಾದ್ ಇತರ ಧರ್ಮವನ್ನು, ಅವರ ಮೂರ್ತಿ ಪರಂಪರೆಯನ್ನು ಅಂದರೆ ಕಾಫೀರರನ್ನು ನಷ್ಟಗೊಳಿಸಿರಿ’, ಎಂಬ ವಿನಾಶಕಾರಿ ಉಪದೇಶವನ್ನು ಕೊಡುತ್ತದೆ. ಆದರೆ ಭಗವದ್ಗೀತೆಯಲ್ಲಿ ಭಗವಾನ ಶ್ರೀಕೃಷ್ಣನು ಎಲ್ಲಿಯೂ ‘ಇತರ ಧರ್ಮವನ್ನು ಸಂಪೂರ್ಣ ಉಚ್ಚಾಟಿಸಿರಿ, ಅವರ ಅಸ್ತಿತ್ವವನ್ನೇ ಪೃಥ್ವಿಯ ಮೇಲಿಂದ ಅಳಿಸಿ ಹಾಕಿರಿ’, ಎನ್ನುವ ಉಲ್ಲೇಖವಿಲ್ಲ.

೩. ಭಗವದ್ಗೀತೆಯಲ್ಲಿನ ಧರ್ಮಯುದ್ಧ ಮತ್ತು ಕುರಾನದಲ್ಲಿನ ‘ಜಿಹಾದ್’ನ ಸಂಕಲ್ಪನೆಯ ಸಂಬಂಧವನ್ನು ಜೋಡಿಸುವುದೆಂದರೆ, ಬುದ್ಧಿಭ್ರಷ್ಟವಾಗಿರುವುದರ ಲಕ್ಷಣ !

ತದ್ವಿರುದ್ಧ ಶ್ರೀಕೃಷ್ಣನು ‘ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ (ಧರ್ಮವನ್ನು ಸ್ಥಾಪಿಸಲು ನಾನು ಯುಗಾನುಯುಗಗಳಲ್ಲಿ ಪ್ರಕಟವಾಗುತ್ತೇನೆ) ಎಂಬ ಉಪದೇಶವನ್ನು ನೀಡುತ್ತಾ ಧರ್ಮಜಾಗರಣದ ದೈವೀ ಸಂದೇಶವನ್ನೇ ನೀಡಿದನು. ಹೀಗಿರುವಾಗ ‘ಭಗವದ್ಗೀತೆಯಲ್ಲಿನ ಧರ್ಮಯುದ್ಧ ಮತ್ತು ಕುರಾನದಲ್ಲಿನ ‘ಜಿಹಾದ್’ನ ಸಂಕಲ್ಪನೆಯ ಸಂಬಂಧವೇ ಇಲ್ಲದಿರುವಾಗ ಸುಮ್ಮನೆ ಅದನ್ನು ಎಳೆದುತಂದು ಜೋಡಿಸುವ ಚಾಕೂರ್ಕರರ ಬುದ್ಧಿಯು ಇನ್ನೂ ಭ್ರಷ್ಟವಾಯಿತು’, ಎಂದೇ ಹೇಳಬೇಕಾಗುತ್ತದೆ. ಚಾಕೂರ್ಕರರು ಹೇಳುವ ಹಾಗೆ ಎಲ್ಲ ಧರ್ಮಗ್ರಂಥಗಳಲ್ಲಿ ಯುದ್ಧಗಳಿವೆ; ಆದರೆ ಈ ಪ್ರತಿಯೊಂದು ಧರ್ಮಗ್ರಂಥಗಳಲ್ಲಿನ ಯುದ್ಧದ ಉದ್ದೇಶ, ಅದರ ಹಿಂದಿನ ಹಿನ್ನೆಲೆ, ಸಂದರ್ಭ ಮತ್ತು ಧರ್ಮಹಿತದ ಆಕಲನವು ಚಾಕೂರ್ಕರ ಅಲ್ಪಬುದ್ಧಿಗೆ ಆಗಿರುವುದು ಕಾಣಿಸುವುದಿಲ್ಲ. ಆದ್ದರಿಂದ ಪಾಶ್ಚಾತ್ಯರ ಬುದ್ಧಿಭ್ರಮೆಗನುಸಾರ ಜಿಹಾದ್ ಎಂದರೆ ಯುದ್ಧ ಹಾಗೆಯೆ ಭಗವದ್ಗೀತೆಯಲ್ಲಿನ ಮಹಾಭಾರತ ಯುದ್ಧವಿದೆ ಎಂದು ಅತ್ಯಂತ ಬಾಲಿಶ ಟೀಕೆ ಮಾಡುವ ದುಃಸ್ಸಾಹಸವನ್ನು ಅವರ ಅಲ್ಪಬುದ್ಧಿಯಿಂದಲೇ ಮಾಡಿರಬಹುದು.

೪. ಮುಂಬಯಿಯಲ್ಲಿನ ಉಗ್ರವಾದಿ ಆಕ್ರಮಣದ ನಂತರವೂ ಶಿವರಾಜ ಪಾಟೀಲರು ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಅವರು ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು

ಹಾಗೆ ನೋಡಿದರೆ, ಶಿವರಾಜ ಪಾಟೀಲರ ಸಹಿತ ಹಿಂದೂ ಧರ್ಮ, ಪೂಜೆ-ಪರಂಪರೆಗಳಿಗೆ ಬೈಯ್ಯುವುದು ಕಾಂಗ್ರೆಸ್ಸಿನ ಹಳೆಯ ರೂಢಿಯೆ ಆಗಿದೆ. ಚಾಕೂರ್ಕರರೂ ಅದೇ ಹಿಂದೂವಿರೋಧಿ ಪರಂಪರೆಯವರಾಗಿದ್ದಾರೆ. ರಾಮನ, ರಾಮಸೇತುವಿನ ಅಸ್ತಿತ್ವವನ್ನೆ ನಿರಾಕರಿಸುವುದರಿಂದ ಹಿಡಿದು ಅದು ರಾಮಮಂದಿರಕ್ಕೆ ವಿರೋಧಿಸುವ ವರೆಗೆ ಕಾಂಗ್ರೆಸ್ ಹಿಂದೂಗಳ ಭಾವನೆಯೊಂದಿಗೆ ಆಟವಾಡುವ ಒಂದು ಅವಕಾಶವನ್ನೂ ಕಳೆದುಕೊಂಡಿಲ್ಲ. ಮಣಿಶಂಕರ ಅಯ್ಯರ, ದಿಗ್ವಿಜಯ ಸಿಂಗ್ ಇವರಂತಹ ಗುಂಪಿನವರೆ ಆಗಿರುವ ಶಿವರಾಜ ಪಾಟೀಲರೂ ಅಷ್ಟೆ ಕುಪ್ರಸಿದ್ಧರು. ೨೬ ಜುಲೈ ೨೦೦೮ ರ ಮುಂಬಯಿ ಬಾಂಬ್‌ಸ್ಫೋಟದ ಸಮಯದಲ್ಲಿ ಇದೇ ಶಿವರಾಜ ಪಾಟೀಲರು ದೇಶದ ಗೃಹಸಚಿವರಾಗಿದ್ದರು. ಇವರು ಉಗ್ರವಾದಿಗಳ ಆಕ್ರಮಣವಾದ ನಂತರ ಪಾಕಿಸ್ತಾನದ ವಿರುದ್ಧ ಸೂಕ್ತ ಕ್ರಮತೆಗೆದುಕೊಳ್ಳುವುದು ಬಿಡಿ; ಅವರು ಇದಕ್ಕೆ ಸಂಬಂಧಿಸಿದ ಸಭೆಗೂ ಸಮಯಕ್ಕೆ ತಲುಪಲಿಲ್ಲ. ನಂತರ ಒಂದೇ ದಿನದಲ್ಲಿ ಆಗಿರುವ ೫ ಸಭೆಗಳಲ್ಲಿಯೂ ಅವರು ೫ ಸಲ ಉಡುಪನ್ನು ಬದಲಾಯಿಸಿದರು ಹಾಗೂ ಅದೇ (ಉಡುಪು) ಚರ್ಚೆಯ ವಿಷಯವಾಯಿತು. ಅದರಿಂದ ಅವರು ಟೀಕೆಗೊಳಗಾದರು ಹಾಗೂ ಕೊನೆಗೆ ಗೃಹಸಚಿವ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

೫. ಕಾಂಗ್ರೆಸ್ಸಿನ ವರಿಷ್ಠರನ್ನು ಪ್ರಸನ್ನಗೊಳಿಸಲು ಪಾಟೀಲರು ನಿರಂತರ ಹಿಂದೂವಿರೋಧಿ ಹೇಳಿಕೆಗಳನ್ನು ನೀಡುವುದು

ಇಂತಹ ನಿಷ್ಕ್ರಿಯತೆಯ ಮುದ್ರೆ ಹಣೆಯ ಮೇಲಿದ್ದರೂ ‘೨೬/೧೧’ರ ಆಕ್ರಮಣದ ನಂತರ ‘ಹಿಂದೂ ಉಗ್ರವಾದ, ‘ಭಗವಾ ಉಗ್ರವಾದ’ ಇತ್ಯಾದಿ ಹೆಸರಿನಿಂದ ಷಡ್ಯಂತ್ರವನ್ನು ರಚಿಸುವುದರಲ್ಲಿ ಶಿವರಾಜ ಪಾಟೀಲರು ಕೂಡ ಕೈಜೋಡಿಸಿದ್ದಾರೆ. ಆದ್ದರಿಂದ ಸೊನಿಯಾ ಗಾಂಧಿಯ ಸಮೀಪದ ವ್ಯಕ್ತಿಯಾಗಿರುವ ಪಾಟೀಲರು ನಿರಂತರ ಅವರ ಹೈಕಮಾಂಡನ್ನು ಖುಷಿಪಡಿಸಲು ಇಂತಹ ಹಿಂದೂವಿರೋಧಿ ಹೇಳಿಕೆಗಳು ಮತ್ತು ಭೂಮಿಕೆಯನ್ನು ಆಯ್ದುಕೊಂಡಿರುವುದು ಪದೇ ಪದೇ ಕಾಣಿಸುತ್ತದೆ. ಈಗ ಕೂಡ ಅವರು ಇದುವರೆಗೆ ಭಗವದ್ಗೀತೆಯ ಮೇಲೆ ಕೈಯಿಟ್ಟು ಸಂವಿಧಾನಾತ್ಮಕ ಹುದ್ದೆಯ ಪ್ರತಿಜ್ಞೆ ಮಾಡಿರುವ ಅದೇ ಭಗವದ್ಗೀತೆಯ ವಿಷಯದಲ್ಲಿ ಅವರು ಅಸಂಬದ್ಧವಾಗಿ ಮಾತನಾಡುವಾಗ ಅವರ ನಾಲಿಗೆ ಸ್ವಲ್ಪವೂ ಹಿಂಜರಿಯಲಿಲ್ಲ. ಇದೇ ಆಶ್ಚರ್ಯಕರ ಹಾಗೂ ದುಃಖದ ವಿಷಯವಾಗಿದೆ. ದೀಪಾವಳಿ ನಡೆಯುವಾದ ಹಿಂದೂ ಹಬ್ಬ-ಉತ್ಸವಗಳನ್ನು ಗುರಿಪಡಿಸುವ ಒಂದು ಹೊಸ ಪದ್ಧತಿಯು ಕಾಂಗ್ರೆಸ್ ಮತ್ತು ಪ್ರಗತಿಪರರಲ್ಲಿ ರೂಢಿಯಾಗಿರುವುದು ಕಾಣಿಸುತ್ತದೆ. ಇದು ಅದರ ಇನ್ನೊಂದು ನಾಚಿಕೆಪಡುವಂತಹ ಉದಾಹರಣೆಯಾಗಿದೆ.

೬. ಶಿವರಾಜ ಪಾಟೀಲರು ಓಲೈಕೆಗಾಗಿ ಮಾಡಿರುವ ಹೇಳಿಕೆಯಿಂದ ಮುಂಬರುವ ಚುನಾವಣೆಗಳಲ್ಲಿ ಹಿಂದೂಗಳು ಕಾಂಗ್ರೆಸ್ಸಿಗೆ ಅದರ ಸ್ಥಾನವನ್ನು ತೋರಿಸುವರು !

ನಿಜವಾಗಿಯೂ ಇಂತಹ ಹಿಂದೂವಿರೋಧಿ ಕ್ಷೋಭೆಯುಕ್ತ ಹೇಳಿಕೆಯನ್ನು ನೀಡಿ ಮುಸಲ್ಮಾನ ಮತಪೆಟ್ಟಿಗೆಯನ್ನು ಖುಶಿಪಡಿಸುವ ಕಾಂಗ್ರೆಸ್ಸಿನ ಓಲೈಕೆಯ ಉದ್ಯೋಗವು ಹಳೆಯದಾಗಿದೆ. ಶಿವರಾಜ ಪಾಟೀಲರು ಮಾಡಿದ ಹೇಳಿಕೆಯೂ ಅದೇ ಮಾಲಿಕೆಯ ಒಂದು ಭಾಗವೆಂದು ಹೇಳಬಹುದು. ಏಕೆಂದರೆ ಮುಂಬರುವ ಹಿಮಾಚಲ ಪ್ರದೇಶ, ಗುಜರಾತದ ಚುನಾವಣೆಗಳಲ್ಲಿ ಮುಸಲ್ಮಾನರ ಮತಪೆಟ್ಟಿಗೆಯು ಆಮ ಆದಮಿ ಪಕ್ಷದ ಬದಲು ಕಾಂಗ್ರೆಸ್ಸಿನ ತಟ್ಟೆಯಲ್ಲಿ ಮತದಾನ ಮಾಡಬೇಕೆಂದು ಹಿಂದೂ, ಹಿಂದೂಗಳ ಧರ್ಮಗ್ರಂಥ, ದೇವೀ ದೇವತೆಗಳಿಗೆ ಉದ್ದೇಶಪೂರ್ವಕ ಗುರಿಯಿಡುವುದೇ ದುರ್ಭಾಗ್ಯವಾಗಿದೆ. ಆದರೂ ೨೦೧೪ ರಿಂದ ಈ ದೇಶದ ಹಿಂದೂಗಳು ಹೆಚ್ಚು ಜಾಗರೂಕರಾಗಿ ಸತರ್ಕರಾಗಿದ್ದಾರೆ. ಆದ್ದರಿಂದ ಶಿವರಾಜ ಪಾಟೀಲರು ಭಗವದ್ಗೀತೋಪದೇಶವನ್ನು ನೇರವಾಗಿ ‘ಜಿಹಾದ್’ದೊಂದಿಗೆ ಮಾಡಿದ ಅತಾರ್ಕಿಕ ತುಲನೆಯು ಬುಮರ‍್ಯಾಂಗನ ಹಾಗೆ ತಿರುಗಿಬೀಳುವ ಸಾಧ್ಯತೆಯೆ ಹೆಚ್ಚಿದೆ ! ಏಕೆಂದರೆ ‘ಜಯ ಶ್ರೀಕೃಷ್ಣ’ದಿಂದ ಸ್ವಾಗತವಾಗುವ ಗುಜರಾತದಲ್ಲಿ ಶ್ರೀಕೃಷ್ಣನ ಇಂತಹ ಅವಮಾನವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ‘ಕೈ’ ಅದರದ್ದೇ ಗಂಟಲನ್ನು ಹಿಚುಕದೆ ಇರುವುದಿಲ್ಲ ಎಂಬುದು ನಿಶ್ಚಿತ !

(ಆಧಾರ : ‘ಮುಂಬಯಿ ತರುಣ ಭಾರತ’, ೨೧.೧೦.೨೦೨೨)