‘ಮಹಾನ ವ್ಯಕ್ತಿಗಳ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಧರ್ಮವನ್ನು ಬಿಟ್ಟರೆ, ಜನರೂ ಧರ್ಮವನ್ನು ಬಿಡುತ್ತಾರೆ, ಸ್ವೇಚ್ಛೆಯಿಂದ ನಡೆದುಕೊಳ್ಳುತ್ತಾರೆ ಮತ್ತು ಪಾಪಗಳನ್ನು ಮಾಡುತ್ತಾರೆ. ಆ ಮಹಾಪುರುಷನು ಆ ಪಾತಕಗಳ ಕರ್ತನಾಗುತ್ತಾನೆ. ಜಾತಿ ಸಂಕರದ ಆ ಜವಾಬ್ದಾರಿ, ಆ ದೋಷ, ಆ ಪಾಪ ಅವನ ಮೇಲೆ ಬರುತ್ತದೆ. ಪ್ರಜೆಗಳನ್ನು ಪಾಪಿಗಳನ್ನಾಗಿಸುವ ಅವನು ದೋಷಿಯಾಗುತ್ತಾನೆ. ಅಧರ್ಮಕ್ಕೆ-ಪಾಪಕ್ಕೆ ಸಹಾಯ ಮಾಡುವ, ಪ್ರತ್ಯಕ್ಷ ಅಥವಾ ಪರೋಕ್ಷ ಎಂತಹುದೇ ಜೊತೆ ಇರಲಿ, ಶಾರೀರಿಕ-ಮಾನಸಿಕ ಎಂತಹುದೇ ಇರಲಿ, ಅವನಿಗೆ ಆ ಪ್ರಮಾಣದಲ್ಲಿ ‘ಪಾಪದ ಪಾಲು ಸಿಗಲೇಬೇಕು. ಅವನು ದೋಷಿಯಾಗಿಯೇ ಆಗುತ್ತಾನೆ. ಹಾಗೆಯೇ ಧರ್ಮ-ಪುಣ್ಯದ್ದು ಆಗಿದೆ. ಧರ್ಮಕರ್ಮವನ್ನು ಮಾಡುವವರು, ಅವರಿಗೆ ಜೊತೆ ನೀಡುವವರು, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ರೀತಿ ಸಹಕಾರ ನೀಡಿದರೂ, ಶಾರೀರಿಕ-ವಾಚಿಕ ಇರಲಿ ಅಥವಾ ಮಾನಸಿಕವಿರಲಿ, ಹೇಗಾದರೂ ಇರಲಿ, ಅವರಿಗೆ ಆ ಪ್ರಮಾಣದಲ್ಲಿ ಪುಣ್ಯವು ಲಭಿಸುತ್ತದೆ.
– ಗುರುದೇವ ಡಾ. ಕಾಟೆಸ್ವಾಮೀಜಿ (ಆಧಾರ : ಮಾಸಿಕ ‘ಘನಗರ್ಜಿತ’, ಅಕ್ಟೋಬರ್ ೨೦೧೭)